More

    ಯುವಕರಲ್ಲಿ ಕ್ರೀಡಾ ಮನೋಭಾವನೆ ಕಡಿಮೆ

    ಕುರುಗೋಡು: ದೈಹಿಕ, ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಎಐಡಿವೈಒ ಜಿಲ್ಲಾಧ್ಯಕ್ಷ ಎ.ಪಂಪಾಪತಿ ಕೋಳೂರು ಹೇಳಿದರು.

    ತಾಲೂಕಿನ ಮದಿರೆ ಗ್ರಾಮದಲ್ಲಿ ಎಐಡಿವೈಓ ಯುವಜನ ಸಂಘಟನೆ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟದಲ್ಲಿ ಮಂಗಳವಾರ ಮಾತನಾಡಿದರು.

    ಕ್ರೀಡಾ ಮನೋಭಾವನೆ ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ. ಯುವ ಜನತೆ ಕ್ರೀಡೆಗಳಲ್ಲಿ ಹಣದ ವ್ಯವಹಾರ ಮಾಡುತ್ತಿದ್ದಾರೆ. ಇದರಿಂದ ಜೂಜಾಟದ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ ಎಂದರು.

    ಇದನ್ನೂ ಓದಿ: ಆನ್‌ಲೈನ್ ವಂಚನೆಗೆ ಕಡಿವಾಣ: ಸಿಮ್ ಕಾರ್ಡ್ ಖರೀದಿ, ಬಳಕೆಯ ಮಿತಿಗೆ ಶೀಘ್ರವೇ ಹೊಸ ಕ್ರಮ ಜಾರಿ

    ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಜಗದೀಶ್ ನೇಮಕಲ್ ಮಾತನಾಡಿ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಸರ್ಕಾರಗಳೇ ಆನ್‌ಲೈನ್ ಜೂಜಾಟಗಳಿಗೆ ಅನುಮತಿ ನೀಡುತ್ತಿವೆ. ಐಪಿಎಲ್ ನಂತಹ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವುದರಿಂದ ಜೂಜಾಟಕ್ಕೆ ಅನುಕೂಲ ಮಾಡಿಕೊಟ್ಟಂತಾಗಿದೆ ಹೇಳಿದರು.

    ಸುಲಲಿತವಾಗಿ 95 ಕೆಜಿ ಚೀಲ ಎತ್ತಿದ ಕೌಡಿಕೇರಿ ಮಲ್ಲಿಕಾರ್ಜುನ

    ಕ್ರೀಡಾಕೂಟದಲ್ಲಿ ಉಸುಕಿ ಚೀಲ ಎತ್ತುವುದು, ಗೋಣಿಚೀಲ ಹೊತ್ತು ಓಟ, ಹಗ್ಗ ಜಗ್ಗಾಟ, ನಿಧಾನ ಸೈಕಲ್ ರೇಸ್, ಲೆಮನ್ ಸ್ಪೂನ್ ಓಟ ಸ್ಪರ್ಧೆಗಳು ನಡೆದವು. ಉಸುಕಿನ ಚೀಲ (95 ಕೆಜಿ) ತೂಕವನ್ನು ಮದಿರೆ ಗ್ರಾಮದ ಯುವಕ ಕೌಡಿಕೇರಿ ಮಲ್ಲಿಕಾರ್ಜುನ ನಿರಾಯಾಸವಾಗಿ ಎತ್ತಿ ಪ್ರಥಮ ಸ್ಥಾನ ಪಡೆದರು.
    ಮುಖಂಡ ಪಾಲಕ್ಷಗೌಡ ಉದ್ಘಾಟಿಸಿದರು. ಪ್ರಮುಖರಾದ ರುದ್ರ.ಜೆ, ಡಿ.ಗೋವಿಂದ, ಡಿ.ಕೆ.ನಾಗರೆಡ್ಡಿ, ಕಾಡು ಸಿದ್ದ , ಪಂಪಾಪತಿ, ಲಿಂಗಪ್ಪ, ದೇವರಾಜ, ಸಿ.ನಾಗರಾಜ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts