More

    ಇನ್ಮುಂದೆ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಪಾನ್​ ಮಸಾಲ ಸೇವನೆ, ಉಗಿಯುವುದು ನಿಷೇಧ…

    ಬೆಂಗಳೂರು: ಕೊವಿಡ್​-19 ತಡೆಗಟ್ಟುವ ಕ್ರಮವಾಗಿ ರಾಜ್ಯ ಸರ್ಕಾರ ಇನ್ನೊಂದು ಪ್ರಮುಖ ಆದೇಶವನ್ನು ಹೊರಡಿಸಿದೆ. ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಪಾನ್​ ಮಸಾಲ ಸೇವಿಸುವುದು, ಉಗುಳುವುದನ್ನು ನಿಷೇಧಿಸಿದೆ.

    ಇದನ್ನೂ ಓದಿ: VIDEO| ರವಿಚಂದ್ರನ್​ ಜನ್ಮದಿನಕ್ಕೆ ಕಿಚ್ಚನ ಶುಭಾಶಯ ಹೀಗಿದೆ ನೋಡಿ!

    ತಂಬಾಕು, ಪಾನ್​ ಮಸಾಲಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದರಿಂದ ಕೊವಿಡ್​-19 ಸೇರಿ ಬೇರೆ ಕೆಲವು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಇನ್ನು ಮುಂದೆ ಪಬ್ಲಿಕ್ ಪ್ಲೇಸ್​ಗಳಲ್ಲಿ, ಕಂಡಕಂಡಲ್ಲಿ ಪಾನ್​, ತಂಬಾಕನ್ನು ಉಗಿಯುವಂತಿಲ್ಲ.

    ಇದನ್ನೂ ಓದಿ: ಸಂಕಷ್ಟದಲ್ಲಿವೆ ಶಾಪಿಂಗ್ ಮಾಲ್​ಗಳು; ಸಾವಿರಾರು ಜನರ ಉದ್ಯೋಗಕ್ಕೂ ಕುತ್ತು

    ಹಾಗಂತ ಮಾರಾಟವೇನೂ ಬಂದ್​ ಆಗಿಲ್ಲ. ಒಮ್ಮೆ ಯಾರಾದರೂ ಆದೇಶವನ್ನು ಉಲ್ಲಂಘನೆ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು, ಪಾನ್​ಮಸಾಲಗಳನ್ನು ಸೇವಿಸುವುದು, ಉಗಿಯುವುದು ಮಾಡಿದರೆ ಅಂಥವರ ವಿರುದ್ಧ ಐಪಿಸಿ ಸೆಕ್ಷನ್​ 188, 268, 269, 270 ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts