More

    ಸಂಬಂಧ ಬೆಸೆದುಕೊಂಡಿರುವ ಮಾರಗೌಡನಹಳ್ಳಿ: ಈ ಗ್ರಾಮದಲ್ಲಿ ನಡೆದಿರುವ ವಿವಾಹಗಳಿಗಿವೆ ವಿಶೇಷ ಇತಿಹಾಸ

    ಮಂಡ್ಯ: ಇದು ಸಂಬಂಧಗಳನ್ನು ಬೆಸೆದುಕೊಂಡಿರುವ ಗ್ರಾಮ. ಮದುವೆಯಾಗಿರುವವರ ಪೈಕಿ ನೂರಾರೂ ಜೋಡಿಗಳು ಈ ಒಂದೇ ಗ್ರಾಮದವಾಗಿದ್ದಾರೆ. ಈ ಸಂಪ್ರದಾಯ ಇಂದಿಗೂ ನಡೆದುಕೊಂಡೇ ಬಂದಿದೆ. ಮಾತ್ರವಲ್ಲದೆ ಪುರಾಣ ಪ್ರಸಿದ್ಧ ದೇವಾಲಯಗಳು ಹಳ್ಳಿಯ ಕಳಸದಂತಿವೆ. ಹಲವು ದಶಕಗಳ ಹಿಂದೆ ಕಾಡಿನಂತಿದ್ದ ಜಾಗವಿಂದು ಸಾವಿರಾರೂ ಕುಟುಂಬಕ್ಕೆ ಜೀವನಾಧಾರವಾಗಿದೆ.
    ಇದು ತಾಲೂಕಿನ ಹಾಗೂ ಕೆರಗೋಡು ಹೋಬಳಿ ಕೇಂದ್ರದಿಂದ ಐದು ಕಿ.ಮೀ ದೂರದಲ್ಲಿರುವ ಮಾರಗೌಡನಹಳ್ಳಿ ಗ್ರಾಮದ ಸುಂದರ ಚಿತ್ರಣ. ಹಲವು ಸಮುದಾಯದವರು ಸೇರಿ ಕಟ್ಟಿದ ಗ್ರಾಮವಿಂದು ವಿಶೇಷತೆಯನ್ನು ಹೊಂದಿದೆ. ಸಾಮಾಜಿಕವಾಗಿ, ಧಾರ್ಮಿಕ, ಶೈಕ್ಷಣಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವುದರ ಮೂಲಕ ಗಮನಸೆಳೆಯುತ್ತಿದೆ.
    ಮಾರಗೌಡನಹಳ್ಳಿಯ ವಿಶೇಷವೆಂದರೆ ಸುಮಾರು 280 ಜೋಡಿಗಳು ಇದೇ ಗ್ರಾಮದವರಾಗಿದ್ದು, ವಿವಾಹವಾಗಿದ್ದಾರೆ. ಬಹುಶಃ ಇಂತಹ ವಿಶೇಷ ಕಾಣುವುದು ವಿರಳ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಒಂದೇ ಗ್ರಾಮದ ಗಂಡಿ, ಅದೇ ಗ್ರಾಮದ ಹೆಣ್ಣು ಕೊಟ್ಟು ವಿವಾಹ ಮಾಡಲಾಗಿದೆ. ಇದರಲ್ಲಿ ಸಂಬಂಧಿಕರೂ ಇದ್ದಾರೆ. ಇತ್ತೀಚಿನ ವರ್ಷಗಳಲ್ಲಿಯೂ ಇದೇ ಮಾದರಿಯ ವಿವಾಹ ನಡೆಯುತ್ತಿದೆ.
    ಮಾರಗೌಡನಹಳ್ಳಿ ಗ್ರಾಮಕ್ಕೆ ಸುಮಾರು 400 ವರ್ಷದ ಇತಿಹಾಸವಿದೆ. ಕಂಚಿ, ಡಣಾಯಕನಪುರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ ವಿವಿಧ ಸಮುದಾಯದ ಜನರು ಇಲ್ಲಿಗೆ ಬಂದಾಗ ಅರಣ್ಯದಂತಿತ್ತು. ಬಳಿಕ ಇಲ್ಲಿಯೆ ನೆಲೆಗೊಂಡು ಬದುಕು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಮುಂದುವರೆದು ಹಂತ ಹಂತವಾಗಿ ಬೆಳವಣಿಗೆಯಾಗುತ್ತಾ ಹೋಯಿತು. ಗಮನಾರ್ಹ ಅಂಶವೆಂದರೆ ಈ ಗ್ರಾಮಕ್ಕೆ ಮೊದಲಿದ್ದ ಹೆಸರು ಮಾರಗೊಂಡನಹಳ್ಳಿ. ಆದರೆ ಜನರು ಮಾತನಾಡುತ್ತಾ ಆಡುಭಾಷೆಯಂತೆ ಮಾರಗೊಂಡನಹಳ್ಳಿ ಮಾರಗೌಡನಹಳ್ಳಿಯಾಗಿ ಬದಲಾಯಿತು. ಕೃಷಿ ಚಟುವಟಿಕೆ ಮೂಲಕ ಜನರು ಜೀವನಕ್ಕೆ ಆಧಾರ ಮಾಡಿಕೊಂಡರು. ನಂತರ ವ್ಯಾಪಾರ, ವಹಿವಾಟು ನಡೆಯುತ್ತಾ ಹೋದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts