More

    ಮೊಡದ ಮರೆಯಲ್ಲಿ ಚಂದ್ರ

    ಚಿತ್ರದುರ್ಗ: ಯುಗಾದಿ ಹಬ್ಬದ ವಿಶೇಷ ಚಂದ್ರ ದರ್ಶನ. ಆದರೆ, ಗುರುವಾರ ಮೊಡದ ಮರೆಯಲ್ಲಿ ಕಣ್ಣಮುಚ್ಚಾಲೆ ಆಟವಾಡಿದ ಚಂದ್ರನನ್ನು ಕಣ್ತುಂಬಿಕೊಳ್ಳಲು ಜನರು ಹರಸಾಹಸಪಟ್ಟರು.
    ಸಂಜೆ ಆಗುತ್ತಿದ್ದಂತೆ ಮನೆ ಮಹಡಿ, ರಸ್ತೆ ಬದಿಗಳಲ್ಲಿ ನಿಂತು ಚಂದ್ರನಿಗಾಗಿ ಆಕಾಶದತ್ತ ಚಿತ್ತ ನೆಟ್ಟ ಜನರು, ಚಂದ್ರ ಕಾಣುತ್ತಿದ್ದಂತೆ ಕೈಮುಗಿದು, ಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಬಳಿಕ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.
    ಕಾಣದವರು ದೇಗುಲಕ್ಕೆ ತೆರಳಿ ಮಹಾದೇವನ ಮೂರ್ತಿಯ ತಲೆಯ ಮೇಲಿರುವ ಚಂದ್ರನ ದರ್ಶನ ಪಡೆದುಕೊಂಡರು. ಹಲವು ದೇಗುಲಗಳನ್ನು ಕಣ್ಮನ ಸೆಳೆಯುವಂತೆ ವಿವಿಧ ಬಗೆಯ ಪುಷ್ಪಗಳಿಂದ, ವಿದ್ಯುದ್ದೀಪಾಲಂಕಾರದಿಂದ ಅಲಂಕರಿಸಲಾಗಿತ್ತು. ದೇವರ ಮೂರ್ತಿಗಳು ಕೂಡ ಕಂಗೊಳಿಸಿದವು.

    ನಗರದ ಹೃದಯ ಭಾಗದಲ್ಲಿರುವ ನೀಲಕಂಠೇಶ್ವರ ಸ್ವಾಮಿ ಸನ್ನಿಧಾನ ಬೆಳಗ್ಗೆಯಿಂದ ತಡರಾತ್ರಿ 12ರವರೆಗೂ ತೆರೆದಿತ್ತು. ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಿತ್ತು. ಮೇಲುದುರ್ಗದ ಹಿಂಡಂಭೇಶ್ವರ, ಸಂಪಿಗೆ ಸಿದ್ದೇಶ್ವರ, ಬೆಟ್ಟದ ಗಣಪತಿ, ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆಮಾರಮ್ಮ, ಗೌರಸಂದ್ರ ಮಾರಮ್ಮ, ತ್ರಿಪುರಸುಂದರಿ ತಿಪ್ಪನಘಟ್ಟಮ್ಮ, ಕಾಳಿಕಮಠೇಶ್ವರಿ, ಚೌಡೇಶ್ವರಿ, ಬನ್ನಿ ಮಹಾಕಾಳಮ್ಮ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ಒಳಗೊಂಡು ಹಲವು ದೇಗುಲಗಳಲ್ಲಿ ಅಭಿಷೇಕ, ನೈವೇದ್ಯ, ಮಹಾಮಂಗಳಾರತಿ ಸೇರಿ ವಿಶೇಷ ಪೂಜೆ ನೆರವೇರಿದವು.

    ಚಂದ್ರ ಮತ್ತು ದೇವರ ದರ್ಶನದ ನಂತರ ಗುರು-ಹಿರಿಯರ ಮನೆಗಳಿಗೆ ಹೋಗಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸ್ನೇಹಿತರಿಗೆ, ಹಿತೈಷಿಗಳಿಗೆ, ಸಂಬಂಧಿಕರು ಶುಭಾಶಯ ವಿನಿಮಯ ಮಾಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts