More

    ಶೀನಾ ಬೋರಾ ಕೊಲೆ ಪ್ರಕರಣ: ತಾಯಿ ಇಂದ್ರಾಣಿಯ ನಾಲ್ಕನೇ ಜಾಮೀನು ಅರ್ಜಿಯನ್ನೂ ತಿರಸ್ಕರಿಸಿದ ಸಿಬಿಐ ಕೋರ್ಟ್

    ಮುಂಬೈ: ಮಗಳು ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪದ ಹಿನ್ನೆಲೆ ಬಂಧಿಯಾಗಿರುವ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿಯನ್ನು ಮುಂಬೈ ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
    ಆರೋಗ್ಯ ಕ್ಷೀಣಿಸುತ್ತಿರುವುದಾಗಿ ಉಲ್ಲೇಖಿಸಿ ಜಾಮೀನು ಕೋರಿ ಇಂದ್ರಾಣಿ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ನ್ಯಾಯಾಲಯ ಕಳೆದ ವರ್ಷ ಡಿಸೆಂಬರ್‌ನಲ್ಲಿ ತಿರಸ್ಕರಿಸಿತ್ತು. ಇದು ಅವರ ಕೋರ್ಟ್ ತಿರಸ್ಕೃತ ನಾಲ್ಕನೇ ಜಾಮೀನು ಅರ್ಜಿಯಾಗಿದೆ.
    2012 ರಲ್ಲಿ, ಹಣಕಾಸು ವಿವಾದದಿಂದಾಗಿ ಇಂದ್ರಾಣಿ ಹಾಗೂ ಆಕೆಯ ಮಾಜಿ ಪತಿ ಸಂಜೀವ್ ಖನ್ನಾ, ಪೀಟರ್ ಮುಖರ್ಜಿ ಶೀನಾಳನ್ನು ಕೊಲೆ ಮಾಡಿದ್ದರೆಂಬ ಆರೋಪವಿತ್ತು.

    ಇದನ್ನೂ ಓದಿ:  ‘ಸುಷ್ಮಾ ಸ್ವರಾಜ್​ ರಾಜತಾಂತ್ರಿಕತೆಯ ಬಹುದೊಡ್ಡ ಶಕ್ತಿಯಾಗಿದ್ದರು’: ಮಾಲ್ಡೀವ್ಸ್​ ಸಚಿವ ಅಬ್ದುಲ್ ಶಾಹೀದ್​

     
    2015 ರ ಆಗಸ್ಟ್‌ನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಚಾಲಕ ಶ್ಯಾಮ್‌ವರ್ ರೈ, ಈ ಕೊಲೆ ಪ್ರಕರಣ ಬಹಿರಂಗಪಡಿಸಿದ ನಂತರ ಪೊಲೀಸರು ಇಂದ್ರಾಣಿಯತ್ತ ಗಮನಹರಿಸಿದ್ದರು.
    ನಂತರ ಪೊಲೀಸರು ಇಂದ್ರಾನಿ, ಖನ್ನಾ ಮತ್ತು ಚಾಲಕನನ್ನು ಕೊಲೆ ಆರೋಪದಡಿ ಬಂಧಿಸಿದ್ದರು. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿ ಪೀಟರ್‌ನನ್ನು ನಂತರ ಬಂಧಿಸಲಾಗಿತ್ತು. ಪೀಟರ್ ಮತ್ತು ಇಂದ್ರಾನಿ ಈಗ ವಿಚ್ಛೇದನ ಪಡೆದಿದ್ದಾರೆ.

    ಹೊಸ ಶಿಕ್ಷಣ ನೀತಿ ಹೇಗಿರಲಿದೆ? ಪ್ರಧಾನಿಯಿಂದ ನಾಳೆ ಸಂಪೂರ್ಣ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts