More

    ಎಸ್​ಪಿಬಿಗೆ ಶಂಕರ್​ನಾಗ್ ನೆನಪು ಕಾಡಿದ್ದೇಕೆ? – ಅಂಥದ್ದೇನಾಯಿತು!

    ಖ್ಯಾತ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ತಾವು ನೀಡುವ ಕಾನ್ಸರ್ಟ್‌ಗಳಲ್ಲಿ ‘ಗೀತಾ’ ಚಿತ್ರದ ಒಂದು ಹಾಡನ್ನಾದರೂ ಹಾಡುತ್ತಾರೆ. ಈಗ ಎಸ್.ಪಿ.ಬಿ ಅವರು ಪುನಃ ‘ಗೀತಾ’ ಚಿತ್ರದ ‘ಸಂತೋಷಕ್ಕೆ ಹಾಡು ಸಂತೋಷಕ್ಕೆ …’ ಹಾಡನ್ನು ಹಾಡುವ ಮೂಲಕ ಶಂಕರ್ ನಾಗ್ ಅವರನ್ನು ನೆನಪಿಸಿಕೊಂಡಿದ್ದಾರೆ.

    ಇಂಡಿಯನ್ ಸಿಂಗರ್ಸ್‌ ರೈಟ್ಸ್ ಅಸೋಸಿಯೇಷನ್ (ಐಎಸ್‌ಆರ್‌ಎ) ಸಂಸ್ಥೆಯು ‘ಸಂಗೀತ್ ಸೇತು’ ಎಂಬ ಕಾರ್ಯಕ್ರಮವನ್ನು ಶುರು ಮಾಡಿದೆ. ಏಪ್ರಿಲ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ಸೋಷಿಯಲ್ ಮೀಡಿಯಾದಲ್ಲಿ ನಡೆದ ಈ ವರ್ಚ್ಯುಯಲ್ ಕಾನ್ಸರ್ಟ್‌ನಲ್ಲಿ ಭಾರತೀಯ ಚಿತ್ರರಂಗದ ಜನಪ್ರಿಯ ಹಿನ್ನೆಲೆ ಗಾಯಕರು, ತಮ್ಮ ಮನೆಯಲ್ಲೇ ಕುಳಿತು ತಮ್ಮ ಜನಪ್ರಿಯ ಹಾಡುಗಳನ್ನು ಹಾಡಿದ್ದಾರೆ. ಅಕ್ಷಯ್ ಕುಮಾರ್ ಈ ಕಾರ್ಯಕ್ರಮದ ಸೂತ್ರಧಾರರಾಗಿದ್ದು, 12 ಕೋಟಿಗೂ ಹೆಚ್ಚು ಜನ ಈ ಕಾರ್ಯಕ್ರಮವನ್ನು ನೋಡಿ ಎಂಜಾಯ್ ಮಾಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿದ ಮೂರು ಹಾಡುಗಳ ಪೈಕಿ ಕನ್ನಡದ ‘ಗೀತಾ’ ಚಿತ್ರದ ‘ಸಂತೋಷಕ್ಕೆ ಹಾಡು ಸಂತೋಷಕ್ಕೆ …’ ಸಹ ಒಂದು. ಇದಲ್ಲದೆ ‘ರೋಜಾ’ ಮತ್ತು ‘ಪಡೆಯಪ್ಪ’ ಚಿತ್ರದ ಹಾಡುಗಳನ್ನು ಎಸ್.ಪಿ.ಬಿ ಹಾಡಿದ್ದಾರೆ.
    ಕೋವಿಡ್ 19ಗೆ ಹಣ ಶೇಖರಿಸಲು ಪ್ರಾರಂಭವಾಗಲಿರುವ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಯಾದ ಪಿಎಂ ಕೇರ್ಸ್‌ಗೆ ಸಹಾಯ ಮಾಡುವುದಕ್ಕೆ ಐಎಸ್‌ಆರ್‌ಎ ಮುಂದಾಗಿದ್ದು, ಪ್ರತಿ ದಿನ ಒಂದು ಗಂಟೆ ಕಾರ್ಯಕ್ರಮ ನಡೆಸಿಕೊಡುತ್ತಿದೆ. ಈ ಕಾರ್ಯಕ್ರಮದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅಲ್ಲದೆ, ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಹರಿಹರನ್, ಯೇಸುದಾಸ್, ಉದಿತ್ ನಾರಾಯಣ್, ಕೈಲಾಶ್ ಖೇರ್, ಸೋನು ನಿಗಮ್, ಕುಮಾರ್ ಶಾನು, ಶಂಕರ್ ಮಹದೇವನ್, ಕವಿತಾ ಕೃಷ್ಣಮೂರ್ತಿ ಸೇರಿದಂತೆ ಹಲವು ಗಾಯಕ-ಗಾಯಕಿಯರು ಕೈಜೋಡಿಸಿದ್ದು ವಿಶೇಷ.

    ನಟಿ ಹರಿಪ್ರಿಯಾ ಎಸ್ಸೆಸ್ಸೆಲ್ಸಿಗೆ ಪಡೆದ ಅಂಕಗಳೆಷ್ಟು ಗೊತ್ತಾ? ಅಚ್ಚರಿ ವಿಷ್ಯ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts