More

    358953 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ

    ತುಮಕೂರು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 358953 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಶೇ.94.14 ಬಿತ್ತನೆ ಮುಗಿದಿದೆ.
    ಪ್ರಸಕ್ತ ಮುಂಗಾರಿನಲ್ಲಿ 192027 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯಗಳು, 42324 ಹೆಕ್ಟೇರ್ ದ್ವಿದಳ ಧಾನ್ಯಗಳು, 123334 ಹೆ. ಎಣ್ಣೆಕಾಳು ಬೆಳೆಗಳು ಹಾಗೂ 1268 ಹೆ.ಕಬ್ಬು ಮತ್ತು ಹತ್ತಿ ಬೆಳೆ ಬಿತ್ತನೆಯಾಗಿದೆ.

    ಉತ್ತಮ ಮಳೆಯ ಕಾರಣಕ್ಕೆ ಕೃಷಿ ಇಲಾಖೆಯ ನಿರೀಕ್ಷಿತ ಗುರಿಗೂ ಮೀರಿ ಬಿತ್ತನೆಯಾಗಿದ್ದು ಉತ್ತಮ ಇಳುವಳಿಯ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ 10647 ಚ.ಕಿ.ಮೀ.ಭೌಗೋಳಿಕ ವಿಸ್ತೀರ್ಣದಲ್ಲಿ 763919 ಹೆ. ಪ್ರದೇಶವನ್ನು ಕೃಷಿಭೂಮಿಯನ್ನಾಗಿ ಗುರುತಿಸಲಾಗಿದೆ. 514894 ಹೆ. ಪ್ರದೇಶದಲ್ಲಿ ನಿವ್ವಳ ಸಾಗುವಳಿಯಾಗಿದ್ದು, 156301 ಹೆ. ಪ್ರದೇಶಕ್ಕೆ ಮಾತ್ರ ನೀರಾವರಿ ಸೌಲಭ್ಯವಿದೆ.

    ಜಿಲ್ಲೆಯಲ್ಲಿ 414428 ರೈತರಿದ್ದು, 197263 ಅತಿ ಸಣ್ಣ ರೈತರು 108983 ಹೆ., 113436 ಸಣ್ಣ ರೈತರು 159940 ಹೆ. ಹಾಗೂ 103729 ಇತರೆ ರೈತರು 407465 ಹೆ. ಪ್ರದೇಶದಲ್ಲಿ ಕೃಷಿ ಚಟುವಟಿಕೆಯಲ್ಲಿದ್ದಾರೆ.
    ಮುಂಗಾರು ಹಂಗಾಮಿನಲ್ಲಿ 153918 ಹೆ. ಪ್ರದೇಶದಲ್ಲಿ ರಾಗಿ, 6856 ಹೆ. ಭತ್ತ, 4128 ಹೆ. ಜೋಳ, 25425 ಹೆ. ಮುಸುಕಿನ ಜೋಳ, 1695 ಹೆ. ಸಿರಿಧಾನ್ಯ ಸೇರಿ ಒಟ್ಟು 192027 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ಧಾನ್ಯ ಬಿತ್ತನೆಯಾಗಿದೆ.
    ತೊಗರಿ14746 ಹೆ., ಹುರುಳಿ7127 ಹೆ., ಉದ್ದು621 ಹೆ., ಹೆಸರು9905 ಹೆ., ಅವರೆ5520, ಅಲಸಂದೆ4405 ಹೆ., ಸೇರಿದಂತೆ ಒಟ್ಟು 42324 ಹೆ. ಪ್ರದೇಶದಲ್ಲಿ ಮತ್ತಿತರ ಆಹಾರ ಧಾನ್ಯಗಳ ಬಿತ್ತನೆಯಾಗಿದೆ.

    ಶೇಂಗಾ121314 ಹೆ., ಸಾಸಿವೆ147 ಹೆ., ಎಳ್ಳು164 ಹೆ.ಹರಳು1394, ಹುಚ್ಚೆಳ್ಳು308 ಸೇರಿದಂತೆ ಒಟ್ಟು 123334 ಹೆ.ನಲ್ಲಿ ಎಣ್ಣೆಕಾಳುಗಳನ್ನು ಹಾಗೂ ಹತ್ತಿ1052 ಹೆ. ಮತ್ತು ಕಬ್ಬು216 ಹೆ., ಸೇರಿ ಒಟ್ಟು 1268 ಹೆ.ನಲ್ಲಿ ವಾಣಿಜ್ಯ ಬೆಳೆಗಳ ಬಿತ್ತನೆಯಾಗಿರುತ್ತದೆ. ಜಿಲ್ಲೆಯಲ್ಲಿ ಮುಂಗಾರು ಬೆಳೆಗಳಾದ ಹೆಸರು, ಉದ್ದು, ಅಲಸಂದೆ, ತೊಗರಿ, ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ನವಣೆ ಮತ್ತು ಶೇಂಗಾ ಬೆಳೆಗಳ 23519 ಕ್ವಿಂ. ಬಿತ್ತನೆ ಬೀಜವನ್ನು ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ರೈತರಿಗೆ ವಿತರಣೆ ವಾಡಲಾಗಿದೆ.

    697 ಮಿಮೀ ವಾಡಿಕೆ ಮಳೆ: ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆಯು 697.30 ಮಿ.ಮೀ. ಆಗಿದ್ದು, ಕಳೆದ ವರ್ಷ ಸರಾಸರಿ 784 ಮಿ.ಮೀ. ವಾಸ್ತವಿಕ ಮಳೆಯಾಗುವ ಮೂಲಕ ವಾಡಿಕೆಗಿಂತ ಶೇ.13 ಅಧಿಕ ಮಳೆಯಾಗಿದೆ.
    ಜನವರಿಯಿಂದ ಅಕ್ಟೋಬರ್ 3ರ ವರೆಗೆ ವಾಡಿಕೆ ಮಳೆ 497 ಮಿ.ಮೀ. ಇದ್ದು, ಪ್ರಸ್ತುತ 666 ಮಿಮೀ (ಶೇ.+34) ಮಳೆಯಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆ ಚುರುಕಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗಾಗಿ 57784 ಮೆ.ಟನ್ ರಸಗೊಬ್ಬರದ ಬೇಡಿಕೆಯಿದ್ದು, ಪ್ರಸ್ತುತ ಅಧಿಕೃತ ವಾರಾಟಗಾರು ಹಾಗೂ ರಾಜ್ಯ ವಾರುಕಟ್ಟೆ ಒಕ್ಕೂಟದಲ್ಲಿ 84593 ಮೆ.ಟನ್ ರಸಗೊಬ್ಬರದ ಸರಬರಾಜಾಗಿದೆ. 18643 ಮೆ.ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ರಾಜ ಸುಲೋಚನ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts