More

    VIDEO| ದಕ್ಷಿಣ ಆಫ್ರಿಕಾದ ಈ ಮದುವೆಗೆ ಖಾಸಗಿ ಸಂಸ್ಥೆಗಳೇ ಪ್ರಾಯೋಜಕರು; ಏಕೆ ಗೊತ್ತಾ..?

    ಈ ಮದುವೆ ನಡೆದದ್ದು ದಕ್ಷಿಣ ಆಫ್ರಿಕಾದಲ್ಲಿ. ಆತ ತಾನು ಇಷ್ಟ ಪಡುವ ಹುಡುಗಿಗೆ ಪ್ರಪೊಸ್​ ಮಾಡಿದ್ದು ಕೆಎಫ್​ಸಿಯಲ್ಲಿ.

    ಆಕೆ ಆತನ ಪ್ರಪೊಸ್​ಗೆ ಹೂಂ ಎಂದದ್ದು ಆಯ್ತು. ಅವರು ಡಿಸೆಂಬರ್​ 31ರಂದು ಸತಿ ಪತಿಗಳಾದರು. ಇವರ ಆರತಕ್ಷತೆ ವಿಜೃಂಭಣೆಯಿಂದ ನಡೆದಿದೆ.

    ಆದರೆ ಅವರಿಬ್ಬರೂ ಕಡು ಬಡವರು. ಮದುವೆಗೂ ಅವರಲ್ಲಿ ಹಣವೂ ಇರಲಿಲ್ಲ. ಅಂತಹದ್ದರಲ್ಲಿ ಆರತಕ್ಷತೆ ಹೇಗೆ ವಿಜೃಂಭಣೆಯಿಂದ ನಡೆಯಿತು ಗೊತ್ತ ಮುಂದೆ ಓದಿ…

    ಈ ದಂಪತಿಯ ಗೆಳೆಯರೊಬ್ಬರು ನೆಟ್​ನಲ್ಲಿ ಇವರ ಪ್ರೇಮದ ಬಗ್ಗೆ ಪ್ರಸ್ತಾಪ ಮಾಡಿದ್ದರು. ಇವರಿಗೆ ಆರ್ಥಿಕ ಸಹಾಯಕ್ಕಾಗಿ ಮನವಿ ಮಾಡಿದ್ದರು. ಇದನ್ನು ಕಂಡ ಕೆಲ ಖಾಸಗಿ ಸಂಸ್ಥೆಗಳು ಧನ ಸಹಾಯ ಒದಗಿಸಿದ್ದವು.

    37 ವರ್ಷದ ಹೆಕ್ಟರ್​ ಮ್​ಕಾಂಸಿ ಹಾಗೂ 28ರ ಹರೆಯದ ನೊನ್​ಹಲ್ನಾಲ ಸೊಲ್ಡಾತ್​ ಎಂಬುವರೇ ಆ ಪ್ರೇಮಿಗಳು. ಕೆಎಫ್​ಸಿಯಲ್ಲಿ ನಡೆದ ಇವರ ಪ್ರೇಮ ನೀವೇದನೆಯನ್ನು ಟ್ವೀಟರ್​ನಲ್ಲಿ ಅಪ್​ಲೋಡ್​ ಮಾಡಲಾಗಿತ್ತು.

    ಮ್​ಕಾಂಸಿ ಗೆಳೆಯನೊಬ್ಬ ಆನ್​ಲೈನ್​ಲ್ಲಿ ಈ ಬಗ್ಗೆ ಬರೆದುಕೊಂಡು, ಇವರ ಆರ್ಥಿಕ ಸಮಸ್ಯೆ ಬಗ್ಗೆ ಹೇಳಿದ್ದ. ಮದುವೆಗಾಗಿ ಹಾಲ್​, ಉಡುಪು, ಕೇಕ್​ಗಾಗಿ ಹಣದ ಅವಶ್ಯಕತೆ ಇದೆ. ಅದಕ್ಕಾಗಿ ಸಹಾಯ ಮಾಡಿ ಎಂದು ವಿನಂತಿ ಮಾಡಿಕೊಂಡಿದ್ದ. ಆದರೆ ಈ ಬಗ್ಗೆ ದಂಪತಿಗೆ ತಿಳಿಸಿರಲಿಲ್ಲ.

    ನಂತರ ಕೋಕಾ ಕೋಲಾ ಸಂಸ್ಥೆ ಇವರ ನೆರವಿಗೆ ಬಂತು. ಆ ದಂಪತಿಗೆ ಸರ್​ಪ್ರೈಸ್​ ರೀತಿಯಲ್ಲಿ ಮದುವೆ ನಡೆಸಲಾಯಿತು. ಆ ಪ್ರಪೋಸ್​ ಮಾಡಿದ ಒಂದು ತಿಂಗಳಲ್ಲಿ ಈ ಮದುವೆ ನಡೆದಿದೆ. (ಏಜೆನ್ಸೀಸ್​) 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts