More

    ದುಬೈನಲ್ಲಿ ಸೋತವರ ಹಣಾಹಣಿ; ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ಮುಖಾಮುಖಿ

    ದುಬೈ: ಆರಂಭದಲ್ಲೇ ಸೋಲಿನ ಆಘಾತ ಕಂಡಿರುವ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿಗಾಗಿ ಹೋರಾಟ ನಡೆಸಲಿವೆ. ಹಾಲಿ ಚಾಂಪಿಯನ್ ಪಟ್ಟ ಹೊಂದಿದ್ದರೂ ವೆಸ್ಟ್ ಇಂಡೀಸ್, ತನ್ನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಹೀನಾಯವಾಗಿ ಸೋಲು ಕಂಡಿತ್ತು. ಕೇವಲ 55 ರನ್‌ಗಳಿಗೆ ಸರ್ವಪತನ ಕಂಡಿತ್ತು. ಮತ್ತೊಂದೆಡೆ, ಆಸ್ಟ್ರೇಲಿಯಾ ಎದುರು ದಕ್ಷಿಣ ಆಫ್ರಿಕಾ ತಂಡ 20 ಓವರ್ ಪೂರ್ತಿ ಆಡಿದ್ದರೂ 118 ರನ್ ಕಲೆಹಾಕಲಷ್ಟೇ ಶಕ್ತವಾಗಿತ್ತು. ಉಭಯ ತಂಡಗಳಿಗೂ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗವೇ ಕೈಕೊಟ್ಟ ಪರಿಣಾಮ ಹೀನಾಯ ಸೋಲು ಕಂಡಿದ್ದವು.

    ಟೂರ್ನಿ ಆರಂಭಕ್ಕೂ ಮುನ್ನ ವೆಸ್ಟ್ ಇಂಡಿಸ್ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸಿದ್ದ ಹರಿಣಗಳ ತಂಡ ಮಾನಸಿಕವಾಗಿ ಮೇಲುಗೈ ಹೊಂದಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿದರೂ ಯಾವುದೇ ಹಂತದಲ್ಲೂ ಪುಟಿದೇಳುವ ಸಾಮರ್ಥ್ಯ ಹೊಂದಿರುವ ವೆಸ್ಟ್ ಇಂಡೀಸ್ ಕೂಡ ಗೆಲುವಿನ ಹಳಿಗೇರುವ ವಿಶ್ವಾಸದಲ್ಲಿದೆ. ವೇಗಿ ಅನ್ರಿಚ್ ನೋಕಿಯ, ಕಗಿಸೊ ರಬಾಡ, ಟಿ20 ಕ್ರಿಕೆಟ್‌ನ ವಿಶ್ವ ನಂ.1 ತಬರೇಜ್ ಶಮ್ಸಿ, ಕೇಶವ್ ಮಹಾರಾಜ್ ಒಳಗೊಂಡ ದಕ್ಷಿಣ ಆಫ್ರಿಕಾ ಬೌಲಿಂಗ್ ಪಡೆ ಆಸೀಸ್‌ನ ಮಧ್ಯಮ ಕ್ರಮಾಂಕಕ್ಕೆ ಒತ್ತಡ ಹೇರುವ ಮೂಲಕ ಗೆಲುವಿಗೆ ಪ್ರತಿಹೋರಾಟ ನಡೆಸಿತ್ತು.

    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮುಖಾಮುಖಿ: 15, ವೆಸ್ಟ್ ಇಂಡೀಸ್: 6, ದಕ್ಷಿಣ ಆಫ್ರಿಕಾ: 9
    ಟಿ20 ವಿಶ್ವಕಪ್‌ನಲ್ಲಿ: 3, ವೆಸ್ಟ್ ಇಂಡೀಸ್: 1, ದಕ್ಷಿಣ ಆಫ್ರಿಕಾ: 2

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts