More

    ಇತಿಹಾಸ ಬರೆದ ಬಾಂಗ್ಲಾದೇಶ; ತವರಲ್ಲೇ ಮುಗ್ಗರಿಸಿದ ದಕ್ಷಿಣ ಆಫ್ರಿಕಾ

    ಸೆಂಚುರಿಯನ್: ಮಧ್ಯಮ ವೇಗದ ಬೌಲರ್ ಟಸ್ಕಿನ್ ಅಹಮದ್ (35ಕ್ಕೆ 5) ಮಾರಕ ದಾಳಿ ಹಾಗೂ ನಾಯಕ ತಮಿಮ್ ಇಕ್ಬಾಲ್ (87*ರನ್, 82 ಎಸೆತ, 14 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ ಬಾಂಗ್ಲಾದೇಶ ತಂಡ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಇದರಿಂದ 3 ಪಂದ್ಯಗಳ ಸರಣಿಯನ್ನು 2-1 ರಿಂದ ವಶಪಡಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿತು.

    ಕ್ರಿಕೆಟ್ ಇತಿಹಾಸದಲ್ಲಿಯೇ ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊದಲ ಗೆಲುವಿನ ನಗೆ ಬೀರಿದ್ದ ಬಾಂಗ್ಲಾ ತಂಡ, ಇದೀಗ ಸರಣಿಗೆ ಮುತ್ತಿಕ್ಕಿ ಐತಿಹಾಸಿಕ ಸಾಧನೆ ಮೆರೆಯಿತು. ವರ್ಷದ ಆರಂಭದಲ್ಲಿ ಬಲಿಷ್ಠ ಭಾರತ ತಂಡವನ್ನು ವೈಟ್‌ವಾಷ್ ಮಾಡಿದ್ದ ದ.ಆಫ್ರಿಕಾ ತಂಡ ತವರು ನೆಲದಲ್ಲೇ ಮುಖಭಂಗಕ್ಕೀಡಾಯಿತು. ಮೊದಲು ಬ್ಯಾಟಿಂಗ್ ಮಾಡಿದ ದ.ಆಫ್ರಿಕಾ ತಂಡ ಟಸ್ಕಿನ್ ಅಹಮದ್ ಮಾರಕ ದಾಳಿಗೆ ನಲುಗಿ 37 ಓವರ್‌ಗಳಲ್ಲಿ 154 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸುಲಭ ಗೆಲುವಿನ ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ 26.3 ಓವರ್‌ಗಳಲ್ಲಿ 1 ವಿಕೆಟ್‌ಗೆ 156 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

    ದಕ್ಷಿಣ ಆಫ್ರಿಕಾ: 37 ಓವರ್‌ಗಳಲ್ಲಿ 154 (ಜಾನೇ ಮಲನ್ 39, ಕ್ವಿಂಟನ್ ಡಿಕಾಕ್ 12, ಕೇಶವ್ ಮಹಾರಾಜ್ 28, ಟಸ್ಕಿನ್ ಅಹಮದ್ 35ಕ್ಕೆ 5, ಶಕೀಬ್ ಅಲ್ ಹಸನ್ 24ಕ್ಕೆ 2), ಬಾಂಗ್ಲಾದೇಶ: 26.3 ಓವರ್‌ಗಳಲ್ಲಿ 1 ವಿಕೆಟ್‌ಗೆ 156 (ಲಿಟನ್ ದಾಸ್ 48, ತಮೀಮ್ ಇಕ್ಬಾಲ್ 87*, ಶಕೀಬ್ 18*, ಕೇಶವ್ ಮಹಾರಾಜ್ 36ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts