More

    ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯ

    ಸಂಡೂರು: ಉದ್ಯೋಗ ಖಾತ್ರಿ, ಗೃಹಲಕ್ಷ್ಮಿಯೋಜನೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಡಿವೈಎಫ್‌ಐ ಗ್ರಾಪಂ ಅಧ್ಯಕ್ಷ ಅಳ್ಳಾಪುರ ವೀರೇಶಪ್ಪರನ್ನು ತಾಲೂಕು ಕಾರ್ಯದರ್ಶಿ ನಾಗಭೂಷಣ ಒತ್ತಾಯಿಸಿದರು.

    ಇದನ್ನೂ ಓದಿ: ಭಕ್ತರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ

    ತೋರಣಗಲ್ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿ ಗ್ರಾಪಂ ಅಧ್ಯಕ್ಷರಿಗೆ ಮನವಿಪತ್ರ ಮಂಗಳವಾರ ಸಲ್ಲಿಸಿದರು. ಉದ್ಯೋಗ ಖಾತ್ರಿಯ ಎಲ್ಲ ಕಾರ್ಮಿಕರಿಗೆ ಕೆಲಸ ನೀಡಬೇಕು.

    ರೇಷನ್ ಕಾರ್ಡ ಸಮಸ್ಯೆಗಳನ್ನು ಪರಿಶೀಲಿಸಿ ಗೃಹಲಕ್ಷ್ಮಿಹಣವನ್ನು ಪ್ರತಿ ಕುಟುಂಬದ ಯಜಮಾನಿಗೆ ಯಾವುದೇ ತಾರತಮ್ಯವಿಲ್ಲದೆ ಸಮರ್ಪಕವಾಗಿ ದೋರಕುವ ರೀತಿ ಗ್ರಾಪಂ ಕಾರ್ಯನಿರ್ವಹಿಸಬೇಕು. ಬಹು ಗ್ರಾಮ ಕುಡಿಯುವ ನೀರು ಸಮರ್ಪಕವಾಗಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.

    ತಾಲೂಕು ಅಧ್ಯಕ್ಷ ಸೈಯದ್ ಶರೀಫ್ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರು, ಶೌಚಗೃಹ ಸರಿಪಡಿಸಿ ಹಾಗೂ ಚರಂಡಿ ವ್ಯವಸ್ಥೆ ಮಾಡಬೇಕು. ಇಂತಹ ಸ್ಥಳೀಯ ಸಮಸ್ಯೆಗಳನ್ನು ಕೇಳಲು ಹೋರಾಟದ ಮೂಲಕ ಸಂಘರ್ಷ ಮುಖ್ಯ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದಾರೆ.

    ಆದರೇ ಪಟ್ಟ ಭದ್ರಹಿತಾಸಕ್ತಿಗಳು ಹೋರಾಟಗಳನ್ನು ಹತ್ತಿಕ್ಕುವ ಮೂಲಕ ದಾರಿ ತಪ್ಪಿಸುತ್ತಿದ್ದಾವೆ. ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಈಡೇರಿಸಬೇಕು ಎಂದು ಗ್ರಾಪಂ ಅಧ್ಯಕ್ಷರ ಗಮನಕ್ಕೆ ತಂದರು.

    ಜಿಲ್ಲಾ ಕಾರ್ಯದರ್ಶಿ ಎಚ್.ಸ್ವಾಮಿ, ಘಟಕದ ಕಾರ್ಯದರ್ಶಿ ಲೋಕೇಶ್, ಎಸ್‌ಎಫ್‌ಐ ರಾಜ್ಯ ಮುಖಂಡ ಶಿವು, ಡಿಎಚ್‌ಎಸ್ ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ, ಡಿವೈಎಫ್‌ಐ ಅನಿಲ, ಅಂಗನವಾಡಿ ಕಾರ್ಯಕರ್ತರಾದ ಜಯಪ್ರದಾ, ಮಲ್ಲಮ್ಮ, ಉದ್ಯೋಗ ಖಾತ್ರಿ ಕಾರ್ಮಿಕರಾದ ಎ.ಸುಂಕಮ್ಮ, ಗಂಗಾಧರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts