More

    ಸೌಪರ್ಣಿಕಾ ನದಿಯಲ್ಲಿ ಮೀನುಗಳ ಸಾವು

    ಕುಂದಾಪುರ: ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಮೀನುಗಳು ಸತ್ತು ನೀರಲ್ಲಿ ತೇಲುತ್ತಿರುವುದು ಸೋಮವಾರ ಪತ್ತೆಯಾಗಿದೆ.
    ನೀರಿನ ಹರಿವು ಕಡಿಮೆಯಾಗಿ ಹೊಂಡದಲ್ಲಿ ನಿಂತ ನೀರು ಬಿಸಿಯಾಗುವುದು, ವಸತಿ ಗೃಹಗಳ ರಾಸಾಯನಿಕಯಕ್ತ ತ್ಯಾಜ್ಯ, ಬಟ್ಟೆ ತೊಳೆಯುವುದು, ಅನ್ನದಾಸೋಹದ ಬಿಸಿ ತಿಳಿನೀರು ನದಿಗೆ ಬಿಡುವುದು ಮೀನುಗಳ ಸಾವಿಗೆ ಕಾರಣ ಎಂದು ಶಂಕಿಸಲಾಗಿದೆ.
    ಪವಿತ್ರ ಸೌಪರ್ಣಿಕಾ ನದಿ ಕುಲಷಿತವಾಗುತ್ತಿರುವುದು ಬೇಸರದ ಸಂಗತಿ. ಪರಿಸರ ಮಾಲಿನ್ಯ ಇಲಾಖೆಯಲ್ಲಿ ಮಾಲಿನ್ಯದ ಬಗ್ಗೆ ದೂರಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕೊಲ್ಲೂರಿನ ಧಾರ್ಮಿಕ ಕಾರ್ಯಕರ್ತ ಹರೀಶ್ ತೋಳಾರ್ ತಿಳಿಸಿದ್ದಾರೆ.
    ನದಿ ಕಲುಷಿತಗೊಳ್ಳಲು ತಾಜ್ಯ ಬಿಡುವುದೇ ಪ್ರಮುಖ ಕಾರಣ ಎಂದು ವಿಹಿಂಪ ಜಿಲ್ಲಾ ಸಹಕಾರ್ಯವಾಹ ಜಗದೀಶ್ ಆರೋಪಿಸಿದ್ದಾರೆ.

    ಯುಜಿಡಿ ಕೆಲಸ ಮುಗಿಸಿ ಹಸ್ತಾಂತರ ಮಾಡಿದ್ದು, ಪಂಚಾಯಿತಿ ಶೇ.100 ಒಳಚರಂಡಿ ಸಂಪರ್ಕ ಮಾಡಿಸಬೇಕಿದ್ದು, ಅದು ಆಗಿಲ್ಲ. ಜಿಪಂ ಸಿಇಒ ಮತ್ತು ನಾನು ಎರಡೆರಡು ಬಾರಿ ಸಭೆ ನಡೆಸಿದ್ದೇವೆ. ಒಳಚರಂಡಿ ಸಂಪರ್ಕ ಮಾಡದವರ ಉದ್ಯಮ ಬಂದ್ ಮಾಡಲೂ ಸೂಚಿಸಲಾಗಿದೆ. ಮತ್ತೊಮ್ಮೆ ಸಿಇಒ ಜತೆ ಮಾತನಾಡಿ ಕಠಿಣ ಕ್ರಮಕ್ಕೆ ಸೂಚಿಸುತ್ತೇನೆ.
    ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts