More

    ಮೆಟ್ರೋ ರೈಲು ಟಿಕೆಟ್ ವ್ಯವಸ್ಥೆಯಲ್ಲಿ ಶೀಘ್ರದಲ್ಲೇ ಬದಲಾವಣೆ; ಸ್ಪರ್ಶರಹಿತ ಟಿಕೆಟಿಂಗ್ ವ್ಯವಸ್ಥೆಗೆ ಯೋಜನೆ

    ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಮಾರ್ಗದ ನಿಲ್ದಾಣಗಳಲ್ಲಿ ಟಿಕೆಟ್ ವ್ಯವಸ್ಥೆಯಲ್ಲಿ ಬದಲಾವಣೆ ತರಲಾಗುತ್ತಿದ್ದು, ಕ್ಯೂಆರ್ ಕೋಡ್​ ಮತ್ತು ಸ್ಮಾರ್ಟ್ ಟಿಕೆಟಿಂಗ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಚಾಲ್ತಿಯಲ್ಲಿದೆ. ಯೋಜನೆಯ 6 ಮಾರ್ಗಗಳಲ್ಲಿ ಈಗಾಗಲೇ ಪುಟ್ಟೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗಿನ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲಾಗಿದೆ. ಇದೀಗ ನಾಯಂಡಹಳ್ಳಿಯಿಂದ ಕೆಂಗೇರಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಉಳಿದ ನಾಲ್ಕು ಮಾರ್ಗಗಳ ಕಾಮಗಾರಿ ಸಾಗಿದೆ. ಈ 6 ಮಾರ್ಗಗಳಲ್ಲಿ ಬರುವ 62 ನಿಲ್ದಾಣಗಳಲ್ಲಿ ಹೊಸಬಗೆಯ ಟಿಕೆಟ್ ವ್ಯವಸ್ಥೆ ಜಾರಿಗೆ ಬಿಎಂಆರ್‌ಸಿಎಲ್ ಮುಂದಾಗಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿ ಈ ವ್ಯವಸ್ಥೆ ಜಾರಿಗೊಳ್ಳಲಿದೆ.

    ಕ್ಯೂಆರ್ ಕೋಡ್ ಟಿಕೆಟ್: ಸ್ಪರ್ಶರಹಿತ ಟಿಕೆಟಿಂಗ್ ವ್ಯವಸ್ಥೆ ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಪ್ರಮುಖವಾಗಿ ಕ್ಯೂಆರ್ ಕೋಡ್ ಮೂಲಕ ಪ್ರಯಾಣ ದರ ಪಾವತಿಸುವ ವ್ಯವಸ್ಥೆಗೆ ಚಾಲನೆ ನೀಡಲಾಗುತ್ತಿದೆ. ಎರಡನೇ ಹಂತದ 62 ನಿಲ್ದಾಣಗಳಲ್ಲಿನ ಪ್ರಯಾಣ ದರ ಸಂಗ್ರಹಿಸುವ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ. ಅದನ್ನು ಸ್ಕ್ಯಾನ್​ ಮಾಡುವ ಮೂಲಕ ಪ್ರಯಾಣ ದರ ಪಾವತಿಸುವ ವ್ಯವಸ್ಥೆ ಜಾರಿಗೊಳಿಸಲಾಗುತ್ತದೆ.

    ಇದನ್ನೂ ಓದಿ: ಗಾರ್ಮೆಂಟ್ ಫ್ಯಾಕ್ಟರಿಯ ಯಂತ್ರಕ್ಕೆ ಸಿಲುಕಿ ಯುವತಿ ಸಾವು; ಜೀವ ಕಳೆದುಕೊಳ್ಳುವಂತೆ ಮಾಡಿತು ಸಣ್ಣದೊಂದು ಆಕಸ್ಮಿಕ

    ಮೊಬೈಲ್​ಫೋನ್​ ಅಪ್ಲಿಕೇಷನ್ ಅಭಿವೃದ್ಧಿ: ಕ್ಯೂಆರ್ ಕೋಡ್ ಸ್ಕ್ಯಾನ್​ ಮಾಡಲು ಬಿಎಂಆರ್‌ಸಿಎಲ್ ಪ್ರತ್ಯೇಕ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಿದೆ. ಅದರ ಮೂಲಕ ಕೋಡ್ ಸ್ಕ್ಯಾನ್​ ಮಾಡಬಹುದಾಗಿದೆ. ಅದರ ಜತೆಗೆ ಆ ಮೊಬೈಲ್​ಫೋನ್​ ಅಪ್ಲಿಕೇಷನ್ ಮೂಲಕ ಸ್ಮಾರ್ಟ್‌ಕಾರ್ಡ್ ರೀಚಾರ್ಜ್‌ಗೂ ಅವಕಾಶ ಕಲ್ಪಿಸಲಾಗುತ್ತದೆ. ಹಾಗೆಯೇ, ಸ್ಮಾರ್ಟ್ ಕಾರ್ಡ್ ರೀಚಾರ್ಜ್‌ಗೆ ವೆಬ್‌ಸೈಟ್‌ನಲ್ಲೂ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

    ಎನ್‌ಸಿಎಂಸಿ ಅನುಷ್ಠಾನ: ನೂತನ ಟಿಕೆಟಿಂಗ್ ವ್ಯವಸ್ಥೆ ಜತೆಗೆ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಜಾರಿಗೂ ಬಿಎಂಆರ್‌ಸಿಎಲ್ ಕ್ರಮ ಕೈಗೊಳ್ಳುತ್ತಿದೆ. ಮೆಟ್ರೋ ರೈಲು ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ದರ ಪಾವತಿಸಲು ಒಂದೇ ಮಾದರಿಯ ಸ್ಮಾರ್ಟ್‌ಕಾರ್ಡ್ ವಿತರಿಸಲಾಗುತ್ತದೆ. ಅದಕ್ಕಾಗಿ ಮೆಟ್ರೋ ನಿಲ್ದಾಣಗಳಲ್ಲಿ ಪ್ರತ್ಯೇಕ ಆಟೋಮ್ಯಾಟಿಕ್ ಟಿಕೆಟ್ ಕಲೆಕ್ಷನ್ ಗೇಟ್‌ಗಳನ್ನು ಅಳವಡಿಸಲಾಗುತ್ತದೆ.

    ಇದನ್ನೂ ಓದಿ: ನಿಮ್ಮೂರಿನ ಇನ್​ಸ್ಪೆಕ್ಟರ್​ ಬದಲಾಗಿದ್ದಾರಾ ನೋಡಿಕೊಳ್ಳಿ: 18 ಡಿವೈಎಸ್‌ಪಿ, 100 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ; ಇಲ್ಲಿದೆ ಪೂರ್ತಿ ಪಟ್ಟಿ

    ಮತ್ತೆ ಕೋವಿಡ್ ನಿರ್ಬಂಧ: ಶಾಲೆ, ಜಿಮ್​, ಕ್ಲಬ್, ಪಾರ್ಟಿಹಾಲ್​, ಈಜುಕೊಳ ಬಂದ್​; ಬಾರ್-ರೆಸ್ಟೋರೆಂಟ್​, ಚಿತ್ರಮಂದಿರಗಳಲ್ಲಿ ಗರಿಷ್ಠ ಶೇ. 50 ಆಸನ ಭರ್ತಿಗಷ್ಟೇ ಅವಕಾಶ

    ಎಂಟು ಮಹಿಳೆಯರನ್ನು ಮದುವೆಯಾಗಿ, ವೇಶ್ಯಾವಾಟಿಕೆ ಮಾಡಿ ಎಂದ ಗಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts