More

    ವಿವಾದಾತ್ಮಕ ಹೇಳಿಕೆ ನೀಡಿ ಕ್ಷಮೆ ಕೇಳಿದ ಸೋನಾಲಿ ಕುಲಕರ್ಣಿ

    ಮುಂಬೈ: ‘ದಿಲ್​ ಚಾಹ್ತಾ ಹೇ’ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯರಾದವರು ಬಾಲಿವುಡ್​ ನಟಿ ಸೋನಾಲಿ ಕುಲಕರ್ಣಿ. ಗಿರೀಶ್​ ಕಾರ್ನಾಡ್​ ನಿರ್ದೇಶನದ ಕನ್ನಡದ ‘ಚೆಲುವಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸೋನಾಲಿ ಕುಲಕರ್ಣಿ, ಆ ನಂತರ ಹಿಂದಿಯಲ್ಲಿ ಸಾಕಷ್ಟು ಜನಪ್ರಿಯರಾದರು. ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಸೋನಾಲಿ, ಈಗ ಒಂದು ಹೇಳಿಕೆ ನೀಡಿ ವಿವಾದ ಮಾಡಿಕೊಂಡಿದ್ದಾರೆ ಮತ್ತು ಕ್ಷಮೆಯನ್ನೂ ಕೇಳಿದ್ದಾರೆ.

    ಇದನ್ನೂ ಓದಿ: ಯಶ್​ ಅಭಿನಯದ ಹೊಸ ಚಿತ್ರದ ಘೋಷಣೆ ಯಾವಾಗ? ಇಲ್ಲಿದೆ ಮಾಹಿತಿ …

    ಇತ್ತೀಚೆಗೆ ಮಾತನಾಡುವ ಸಂದರ್ಭದಲ್ಲಿ ಭಾರತದ ಹೆಣ್ಣುಮಕ್ಕಳು ಸೋಮಾರಿಗಳು ಎಂಬರ್ಥದಲ್ಲಿ ಅರು ಮಾತನಾಡಿದ್ದರು. ‘ಭಾರತದಲ್ಲಿ ಬಹುತೇಕ ಹೆಣ್ಣುಮಕ್ಕಳು ಸೋಮಾರಿಗಳು ಎಂಬುದನ್ನು ಕೆಲವೊಮ್ಮೆ ಮರೆತುಬಿಡುತ್ತೇವೆ. ಅವರಿಗೆ ಸ್ವಂತ ಮನೆಯಿರುವ, ಚೆನ್ನಾಗಿ ಹಣ ಸಂಪಾದಿಸುವ, ಆಗಾಗ ಸಂಬಳದಲ್ಲಿ ಬಡ್ತಿ ಪಡೆಯುವ ಪತಿ ಅಥವಾ ಬಾಯ್​ಫ್ರೆಂಡ್​ ಬೇಕು. ಅಂತಹ ಹುಡುಗರ ಹುಡುಕಾಟದಲ್ಲಿ ಹುಡುಗಿಯರು ತಮ್ಮ ನಿಲುವನ್ನೇ ಮರೆತುಬಿಡುತ್ತಾರೆ. ಬಳಿಕ ಭವಿಷ್ಯದಲ್ಲಿ ಅವರಿಗೆ ಏನು ಮಾಡಬೇಕು ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿಯೇ ಹೆಣ್ಣುಮಕ್ಕಳು ಸ್ವಯಂ ಅವಲಂಬಿತರಾಗಲು ಎಲ್ಲರೂ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ಆ ಮೂಲಕ ಮನೆಯ ರ್ಖಚನ್ನು ಜತೆಯಲ್ಲಿರುವವರ ಜತೆ ಹಂಚಿಕೊಳ್ಳುವಷ್ಟು ಅರ್ಹರಾಗಬಹುದು’ ಎಂದು ಹೇಳಿಕೆ ನೀಡಿದ್ದರು.

    ಸೋನಾಲಿ ಅವರ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುವುದರ ಜತೆಗೆ ವಿವಾದಕ್ಕೀಡಾಯ್ತು. ಕೆಲವರು ಸೋನಾಲಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರೆ, ಕೆಲವರು ಅವರ ಪರ ನಿಂತರು. ಅಂತಿಮವಾಗಿ, ಸೋನಾಲಿ ತಮ್ಮ ಮಾತುಗಳಿಗೆ ಕ್ಷಮೆ ಕೇಳಿದ್ದಾರೆ.

    ಇದನ್ನೂ ಓದಿ: ಕತಾರ್​ನಲ್ಲಿ ಕಬ್ಜ ಚಿತ್ರದ ಅದ್ದೂರಿ ಪ್ರದರ್ಶನ; ಕೇಕ್ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು

    ಈ ಕುರಿತು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿರುವ ಅವರು, ತಮ್ಮ ಹೇಳಿಕೆಯಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆ ಕೋರುವುದಾಗಿ ಹೇಳಿದ್ದಾರೆ. ತಮ್ಮ ಹೇಳಿಕೆ ಮಹಿಳೆಯರ ಪರವಾಗಿತ್ತೇ ಹೊರತು, ಅನ್ಯಥಾ ಭಾವಿಸಬಾರದು ಎಂದು ಹೇಳಿದ್ದಾರೆ.

    ಆಸ್ಕರ್​ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಲು ರಾಜಮೌಳಿ ಮಾಡಿದ ಖರ್ಚೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts