More

    ಮಾಜಿ ಕೋಚ್ ರವಿಶಾಸ್ತ್ರಿಗೆ ಪರೋಕ್ಷ ಟಾಂಗ್ ನೀಡಿದ ಅಜಿಂಕ್ಯ ರಹಾನೆ!

    ನವದೆಹಲಿ: ಅಜಿಂಕ್ಯ ರಹಾನೆ ಅವರು 2020-21ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇರೆಗೆ ತವರಿಗೆ ಮರಳಿದಾಗ ಹಂಗಾಮಿ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದಲ್ಲದೆ ಐತಿಹಾಸಿಕ ಗೆಲುವನ್ನೂ ತಂದುಕೊಟ್ಟಿದ್ದರು. ಆದರೆ, ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 36 ರನ್‌ಗೆ ಆಲೌಟ್ ಆದ ಬಳಿಕ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ನಾನು ತಂಡವನ್ನು ಪುಟಿದೇಳುವಂತೆ ಮಾಡಿದ್ದರೂ, ನನ್ನ ನಿರ್ಧಾರಗಳ ಶ್ರೇಯವನ್ನು ಬೇರೆಯವರು ತೆಗೆದುಕೊಂಡರು ಎಂದು ಅಜಿಂಕ್ಯ ರಹಾನೆ ಬೇಸರಿಸಿದ್ದಾರೆ. ಈ ಮೂಲಕ ಅವರು, ಆಗಿನ ತಂಡದ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿಗೆ ಪರೋಕ್ಷವಾಗಿ ಟಾಂಗ್ ನೀಡಿದಂತಿದೆ.

    ‘ಆಸೀಸ್‌ನಲ್ಲಿ ನಾನೇನು ಮಾಡಿದೆ ಎಂದು ಗೊತ್ತಿದೆ. ನಾನದನ್ನು ಯಾರಿಗೂ ಹೇಳುವ ಅಗತ್ಯವಿಲ್ಲ. ನನಗೆ ಶ್ರೇಯ ಬೇಕೆಂದು ಕೇಳುವ ಸ್ವಭಾವ ನನ್ನದಲ್ಲ. ಮೈದಾನದಲ್ಲಿ ಅಥವಾ ಡ್ರೆಸ್ಸಿಂಗ್ ರೂಂನಲ್ಲಿ ನಾನಾಗ ತೆಗೆದುಕೊಂಡ ಕೆಲವು ನಿರ್ಧಾರಗಳು ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದವು. ಆದರೆ ಅದರ ಶ್ರೇಯವನ್ನು ಬೇರೆಯವರು ತೆಗೆದುಕೊಂಡರು. ನಾವು ಸರಣಿ ಗೆದ್ದೆವು ಎಂಬುದಷ್ಟೇ ನನಗೆ ಮುಖ್ಯವಾದುದು. ಆ ಐತಿಹಾಸಿಕ ಸರಣಿ ಗೆಲುವು ನನಗೆ ನಿಜಕ್ಕೂ ವಿಶೇಷವಾದುದು’ ಎಂದು ರಹಾನೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಶ್ರೇಯ ಕಸಿದವರ ಹೆಸರನ್ನು ರಹಾನೆ ಉಲ್ಲೇಖಿಸಿಲ್ಲ. ಆದರೆ, ಆಸ್ಟ್ರೇಲಿಯಾ ಪ್ರವಾಸದ ಯಶಸ್ಸಿನ ಬಗ್ಗೆ ಸದಾ ತಮ್ಮನ್ನೇ ಹೊಗಳುತ್ತ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿರುವ ಆಗಿನ ಕೋಚ್ ರವಿಶಾಸ್ತ್ರಿ ಅವರಿಗೇ ಟಾಂಗ್ ನೀಡಿರುವಂತಿದೆ. ಕೊಹ್ಲಿ, ಕೆಲ ಪ್ರಮುಖ ಆಟಗಾರರ ಗಾಯದ ಸಮಸ್ಯೆ ನಡುವೆ ರಹಾನೆ ಹೊಸ-ಯುವ ಆಟಗಾರರ ಬಲದೊಂದಿಗೆ ಐತಿಹಾಸಿಕ ಸರಣಿ ಜಯದತ್ತ ತಂಡವನ್ನು ಮುನ್ನಡೆಸಿದ್ದರು.

    ‘ನಾನು ಆ ನಿರ್ಧಾರ ತೆಗೆದುಕೊಂಡೆ, ಈ ನಿರ್ಧಾರ ತೆಗೆದುಕೊಂಡೆ. ನನ್ನ ನಿರ್ಧಾರದಿಂದ ಹಾಗಾಯಿತು ಎಂದು ಕೆಲವರು ಮಾಧ್ಯಮಗಳಲ್ಲಿ ಹೇಳುತ್ತ ಬರುತ್ತಿದ್ದಾರೆ. ಆದರೆ ನನಗೆ ಗೊತ್ತಿದೆ, ನಾನೇನು ನಿರ್ಧಾರಗಳನ್ನು ತೆಗೆದುಕೊಂಡೆ ಎಂಬುದು. ಅದು ಆ ಕ್ಷಣದಲ್ಲೇ ತೆಗೆದುಕೊಂಡ ನಿರ್ಧಾರಗಳಾಗಿದ್ದವು. ಅದು ಬೇರೆಯವರು ತೆಗೆದುಕೊಂಡ ನಿರ್ಧಾರ ಎಂಬುದನ್ನು ಕೇಳಿದಾಗ ನಗು ಬಂದಿತ್ತು. ಆದರೆ ನಾನೆಂದೂ ನನ್ನ ಬಗ್ಗೆ ಜಾಸ್ತಿ ಮಾತನಾಡುವವನಲ್ಲ ಅಥವಾ ನನ್ನನ್ನು ಹೊಗಳಿಕೊಳ್ಳಲು ಇಷ್ಟಪಡುವುದಿಲ್ಲ’ ಎಂದು ರಹಾನೆ ಹೇಳಿದ್ದಾರೆ.

    ಬ್ರಾಥ್‌ವೇಟ್ ಅವರ ಈಡನ್ ಗಾರ್ಡನ್ಸ್ ಸಾಧನೆಯ ನೆನಪಿನಲ್ಲಿ ಅರಳಿದ ಈಡನ್ ರೋಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts