More

    ಮೋಡಗಳ ಸೆರೆಹಿಡಿದು ಕಲ್ಪನೆಯ ಹರಿಬಿಟ್ಟಾಗ… ವಾವ್‌!

    ಲಂಡನ್‌: ಕಲಾವಿದನ ಮನಸ್ಸು ವಿಭಿನ್ನವಾದದ್ದು. ಆತನಿಗೆ ಕಂಡದ್ದೆಲ್ಲವೂ ಕಲೆಯೇ. ಜೀವವಿಲ್ಲದ ವಸ್ತುಗಳಲ್ಲಿಯೂ ಜೀವ ತುಂಬುವವನೇ ಚಿತ್ರ ಕಲಾವಿದ.
    ಅಂಥ ಕಲಾವಿದನ ಕಣ್ಣಲ್ಲಿ ಮೋಡಗಳು ಹೇಗೆಲ್ಲಾ ಕಾಣಿಸಬಹುದು ಎಂಬುದು ನಿಮಗೆ ಗೊತ್ತೆ? ಸಾಮಾನ್ಯವಾಗಿ ಮೋಡಗಳನ್ನು ನೋಡಿದಾಗ ಅದು ಒಬ್ಬೊಬ್ಬರಿಗೆ ಒಂದೊಂದು ತೆರನಾದ ಆಕಾರದಲ್ಲಿ ಗೋಚರಿಸುತ್ತದೆ. ಆದರೆ ಅದೇ ಚಿತ್ರ ಕಲಾವಿದ ಅದನ್ನು ನೋಡಿದಾಗ ಇನ್ನೆಷ್ಟು ಭಾವಗಳು ಕಾಣಿಸಬಹುದು?

    ಅವೆಲ್ಲಕ್ಕೂ ಉತ್ತರವಾಗಿ ಬಂದಿದೆ ಐರಿಶ್ನ ಕಲಾವಿದ ಕ್ರಿಸ್ ಜಡ್ಜ್ ಟ್ವಿಟರ್‌ ಖಾತೆ. ಮೋಡಗಳ ಫೋಟೋ ತೆಗೆದು ಅದಕ್ಕೆ ಆಕೃತಿ ಕೊಟ್ಟು ನೋಡುಗರನ್ನು ಸೆಳೆಯುವಂತೆ ಮಾಡಿದ್ದಾನೆ ಈ ಕಲಾವಿದ.

    ನಾಯಿ, ಬೆಕ್ಕು, ಮನುಷ್ಯ, ಇನ್ನು ಏನೇನೋ ಈ ಮೋಡಗಳಲ್ಲಿ ಆತನಿಗೆ ಕಂಡಿದೆ. ಅದರ ಇನ್ನೊಂದಿಷ್ಟು ಝಲಕ್‌ ಈ ಕೆಳಗಿದೆ ನೋಡಿ.ಇದೀಗ ಸಕತ್‌ ವೈರಲ್‌ ಆಗಿದ್ದು, ಜನರು ಕೂಡ ತಾವು ಅದೇ ರೀತಿ ಮೋಡಗಳ ಚಿತ್ರ ಬಿಡಿಸಿ ಶೇರ್‌ ಮಾಡುತ್ತಿದ್ದಾರೆ. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts