More

    ಸೋಲಾರ್ ಶಕ್ತಿಯಿಂದ ಪುಟ್ಟ ಪಂಪ್

    ಕಡಬ: ಕಡಬ ತಾಲೂಕಿನ ಯುವಕನೊಬ್ಬ ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಬಳಸಿ ಬಾವಿಯಿಂದ ನೀರೆತ್ತುವ ಪುಟ್ಟ ಪಂಪ್ ನಿರ್ಮಿಸಿ ಯಶಸ್ವಿಯಾಗಿದ್ದಾರೆ. ನೂಜಿಬಾಳ್ತಿಲ ಗ್ರಾಮದ ಮಲ್ಯೋಡಿ ನಿವೃತ್ತ ಪೋಸ್ಟ್‌ಮನ್ ತೋಮಸ್ ಕೆ.ಟಿ. – ಸೋಸಮ್ಮ ದಂಪತಿ ಪುತ್ರ ಅಂಡ್ರೋಸ್ ಪಿ.ಟಿ. ಪಂಪ್ ನಿರ್ಮಿಸಿ ಯಶ ಕಂಡವರು. ಇವರು ವಿದೇಶದಲ್ಲಿ ಸೋಲಾರ್ ಕಂಪನಿಯೊಂದರಲ್ಲಿ ಟೆಕ್ನಿಷಿಯನ್ ಆಗಿದ್ದರು. ಕರೊನಾ ಕಾರಣದಿಂದ ಉದ್ಯೋಗ ಬಿಟ್ಟು ಊರು ಸೇರಿದ್ದಾರೆ. ಗ್ರಾಮೀಣ ಭಾಗದಲ್ಲಿ ನಿತ್ಯ ವಿದ್ಯುತ್ ಸಮಸ್ಯೆಯಿಂದ ಮನೆ ಕೆಲಸಗಳಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಎಂಬಂತೆ ಈ ವ್ಯವಸ್ಥೆ ಕಂಡುಹಿಡಿದಿದ್ದಾರೆ.

    12 ವೋಲ್ಟ್ ಡಿಸಿ ಮೋಟಾರ್ ಬಳಸಿ ಬಲ್ಕ್ ಬೂಸ್ಟರ್ ವೋಲ್ಟೇಜ್ ಕಂಟ್ರೋಲರ್ ಸಹಾಯದಿಂದ 50 ವ್ಯಾಟ್ ಸೋಲಾರ್ ಪ್ಯಾನಲ್ ಬಳಸಿಕೊಳ್ಳಲಾಗಿದೆ. ಈ ಪಂಪನ್ನು ಬಾವಿಗೆ ಅಥವಾ ಕೆರೆಗೆ ಇಳಿಸಲಾಗುತ್ತದೆ. ಪಂಪ್ ನೀರಿನಲ್ಲಿ ತೇಲುವಂಥ ವ್ಯವಸ್ಥೆ ಮಾಡಲಾಗಿದೆ. ಡ್ರಿಪ್ ಪೈಪ್ ಬಳಸಿಕೊಂಡು ನೀರನ್ನು ಹೊರತೆಗೆಯಲಾಗುತ್ತದೆ. ಸೂರ್ಯನ ಶಕ್ತಿಯಿಂದಲೇ ಪಂಪ್ ಚಾಲನೆಗೊಳ್ಳುತ್ತಿದ್ದು, ಆನ್, ಆಫ್‌ಗೆ ಪ್ರತ್ಯೇಕ ವ್ಯವಸ್ಥೆ ಇದೆ. ಬೆಳಗ್ಗೆ 9ರಿಂದ ಸಾಯಂಕಾಲ 4ರ ವರೆಗೆ ನಿರಂತರ ಚಾಲನೆಗೊಳ್ಳುತ್ತದೆ.
    ಗಂಟೆಗೆ ಸುಮಾರು 180 ಲೀಟರ್ ನೀರು ಮೇಲೆತ್ತಬಹುದು. ಎತ್ತರದ ಪ್ರದೇಶಗಳಾದ ಮನೆ ಮೇಲಿನ ಟ್ಯಾಂಕ್, ಗುಡ್ಡದ ಮೇಲೆ ಇರುವ ಟ್ಯಾಂಕ್‌ಗಳಿಗೆ ನೀರು ಹಾಯಿಸಬಹುದು. ಪ್ರತಿ 5 ಗಂಟೆಗಳಿಗೊಮ್ಮೆ ನಿಲ್ಲಿಸಿ, ಚಾಲನೆ ಮಾಡುವುದು ಉತ್ತಮ ಎಂಬುದು ಅಂಡೋಸ್ ಕಿವಿಮಾತು.

    ನೀರು ಉಳಿತಾಯ: ಇದು ಹನಿ ನೀರಾವರಿ ಮಾದರಿಯಲ್ಲಿದ್ದು, ಟ್ಯಾಂಕ್‌ಗೆ ನೀರು ತುಂಬಿಸಲು, ಹೂತೋಟಗಳಿಗೆ, ಸಣ್ಣ ಪ್ರಮಾಣದ ತರಕಾರಿ ತೋಟಗಳಿಗೆ, ಕೃಷಿಗೆ ನೀರು ಹಾಯಿಸಲು ಸಹಕಾರಿ. ನೀರು ಪೋಲಾಗುವುದಿಲ್ಲ. ನೂಜಿಬಾಳ್ತಿಲ ಭಾಗದ ಅನೇಕರ ಮನೆಗಳಲ್ಲಿ ಅಳವಡಿಸಲಾಗಿದ್ದು, ಗುಡ್ಡಗಾಡು ಭಾಗದಲ್ಲಿಯೂ ಪ್ರಯೋಗ ಯಶಸ್ವಿಯಾಗಿದೆ.

    ಮನೆ ಬಳಕೆಯ ಸೌರಶಕ್ತಿ ಪಂಪ್‌ಗೆ ಸುಮಾರು 6500 ರೂ. ವೆಚ್ಚ ತಗುಲುತ್ತದೆ. ಗಂಟೆಗೆ 180 ಲೀಟರ್ ನೀರು ಮೇಲೆತ್ತುವ ಸಾಮರ್ಥ್ಯ ಹೊಂದಿದೆ. ಹಲವಾರು ಕಡೆ ಅಳವಡಿಸಿದ್ದು, ಇನ್ನೂ ಬೇಡಿಕೆಗಳು ಬರುತ್ತಿವೆ.
    ಅಂಡ್ರೋಸ್ ಮಲ್ಯೋಡಿ, ಸೌರಶಕ್ತಿ ಪಂಪ್ ಪ್ರಯೋಗ ನಡೆಸಿದವರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts