More

    ಖಗ್ರಾಸ ಸೂರ್ಯಗ್ರಹಣ: ರಾಜ್ಯದ ಹಲವೆಡೆ ಗೋಚರ-ವೀಕ್ಷಣೆ; ಒನಕೆ ನಿಲ್ಲಿಸಿ ಕುಳಿತ ಜನರು..

    ಬೆಂಗಳೂರು: ಈ ಮೊದಲೇ ತಿಳಿಸಿದಂತೆಯೇ ಖಗ್ರಾಸ ಸೂರ್ಯಗ್ರಹಣ ಸಂಭವಿಸಿದ್ದು, ರಾಜ್ಯದ ಹಲವೆಡೆ ಗ್ರಹಣಸ್ಪರ್ಶಕ್ಕೆ ಒಳಗಾದ ಸೂರ್ಯ ಗೋಚರಿಸಿದ್ದಾನೆ. ವಿವಿಧೆಡೆ ಇದರ ವೀಕ್ಷಣೆಗೆಂದೇ ವ್ಯವಸ್ಥೆ ಮಾಡಲಾಗಿದ್ದರಿಂದ ಅಪರೂಪದ ವಿದ್ಯಮಾನವನ್ನು ಜನರು ಕಣ್ತುಂಬಿಕೊಂಡರು.

    ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಧಾರವಾಡ ಹೊರವಲಯದ ಟೈವಾಕ್ ಬಳಿ ಬೆಟ್ಟದಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದಲ್ಲಿನ ಸನ್‌ಸೆಟ್​ ಪಾಯಿಂಟ್ ಬಳಿ ಟೆಲಿಸ್ಕೋಪ್​ ಇರಿಸಿ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಜನರು ಗ್ರಹಣದ ಕ್ಷಣಗಳನ್ನು ಕಣ್ತುಂಬಿಕೊಂಡರು. ಕಲಬುರಗಿ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಶಾಲಾ ಮಕ್ಕಳು ಆಗಮಿಸಿದ್ದರು. ಉಡುಪಿಯ ಮಲ್ಪೆ ಬೀಚ್​ನಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಖಗೋಳಾಸಕ್ತರಿಂದ ಗ್ರಹಣ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.

    ಬಾಗಲಕೋಟೆಯ ಬಾದಾಮಿಯ ಬನಶಂಕರಿ ದೇವಸ್ಥಾನದಲ್ಲಿ ಗ್ರಹಣದ ಹಿನ್ನೆಲೆಯಲ್ಲಿ ದೇವಸ್ಥಾನ ಮುಚ್ಚಲಾಗಿದ್ದು, ಮೋಕ್ಷದ ಬಳಿಕ ತೆರೆಯಲಾಯಿತು. ಶೃಂಗೇರಿಯಲ್ಲಿ 4ರಿಂದ 9 ಗಂಟೆವರೆಗೆ ಎಂದಿನಂತೆ ಶಾರದಾಂಬೆಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರಸಾದ ವಿತರಣೆ ಇಲ್ಲ. ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಗ್ರಹಣ ಸ್ಪರ್ಶ ಮತ್ತು ಮೋಕ್ಷ ಕಾಲದಲ್ಲಿ ವಿಶೇಷ ಅಭಿಷೇಕ ಆಯೋಜಿಸಲಾಗಿತ್ತು.
    ಉಡುಪಿಯ ಕೃಷ್ಣ ಮಠದಲ್ಲಿ ಗ್ರಹಣ ಕಾಲದಲ್ಲಿ ಧ್ಯಾನ, ಜಪ , ಪಾರಾಯಣ ನಡೆಯಿತು. ಗ್ರಹಣ ಮುಗಿಯುತ್ತಿದ್ದಂತೆ ಮಧ್ವ ಸರೋವರದಲ್ಲಿ ಪುಣ್ಯಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬುಧವಾರ ಮುಂಜಾನೆಯೇ ಇನ್ನು ಪೂಜೆ ನಡೆಯಲಿದೆ.

    ಕೋಲಾರದ ಗಾಂಧಿನಗರದಲ್ಲಿ ಮನೆ ಮುಂದೆ ಎಡೆ ಇಟ್ಟು ಪೂಜೆ ಸಲ್ಲಿಸಿದ ಮಹಿಳೆಯರು ಯಾವುದೇ ಕೆಡುಕಾಗದಂತೆ ಬೇಡಿಕೊಂಡರು. ಇನ್ನು ಕೆಲವೆಡೆ ಗ್ರಹಣದ ಸಮಯದ ಕೆಲವು ಆಚರಣೆಗಳು ಅವೈಜ್ಞಾನಿಕ ಎಂದು ಕೆಲವರು ಅದೇ ಸಮಯದಲ್ಲಿ ಆಹಾರ ಸೇವನೆ ಮಾಡಿ ಮೂಢನಂಬಿಕೆ ತೊಲಗಿಸುವ ಯತ್ನ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

    ಬೇರೆದ್ದೆಲ್ಲ ಏನಕೆ, ಸಾಕಲ್ಲ ಇದ್ದರೆ ಒನಕೆ..

    ಖಗ್ರಾಸ ಸೂರ್ಯಗ್ರಹಣ: ರಾಜ್ಯದ ಹಲವೆಡೆ ಗೋಚರ-ವೀಕ್ಷಣೆ; ಒನಕೆ ನಿಲ್ಲಿಸಿ ಕುಳಿತ ಜನರು.. ಖಗ್ರಾಸ ಸೂರ್ಯಗ್ರಹಣ: ರಾಜ್ಯದ ಹಲವೆಡೆ ಗೋಚರ-ವೀಕ್ಷಣೆ; ಒನಕೆ ನಿಲ್ಲಿಸಿ ಕುಳಿತ ಜನರು..ಸೂರ್ಯಗ್ರಹಣ ಹಿನ್ನೆಲೆ ತಟ್ಟೆಯಲ್ಲಿ ಒನಕೆ ನಿಲ್ಲಿಸಿ ಗ್ರಹಣ ಹಿಡಿದಿರುವುದನ್ನು ಖಚಿತ ಪಡಿಸಿಕೊಂಡಿದ್ದು ರಾಜ್ಯದ ಹಲವೆಡೆ ಕಂಡುಬಂದಿದೆ. ಈ ಪ್ರಾಚೀನ ಪದ್ಧತಿಯನ್ನು ರಾಜ್ಯದ ಕೆಲವೆಡೆ ಈಗಲೂ ಅನುಸರಿಸಲಾಗುತ್ತಿದೆ. ಹಾವೇರಿ ಜಿಲ್ಲೆಯ ಕೂರಗುಂದ ಗ್ರಾ‌ಮ ಮತ್ತು ಹಿರೇಕೆರೂರು ಪಟ್ಟಣದಲ್ಲಿ ಒನಕೆ‌ ನಿಲ್ಲಿಸಿ ಗ್ರಹಣ ವೀಕ್ಷಿಸಿದರು.

    ಹಾಗೆಯೇ ಬಾಗಲಕೋಟೆ ಜಿಲ್ಲೆಯಲ್ಲೂ ಗ್ರಹಣ ಹಿಡಿದಿದ್ದನ್ನು ಖಚತಿ ಪಡಿಸಿಕೊಳ್ಳಲಾಗಿದೆ. ಇಲ್ಲಿನೆ ಕೆಲವು ಗ್ರಾಮೀಣ ಭಾಗದಲ್ಲಿ ಒನಕೆ ಇಟ್ಟು ಗ್ರಹಣ ಪ್ರಮಾಣ ಅಳೆಯುವ ಪದ್ಧತಿ ಇಂದಿಗೂ ಇದೆ. ಅಂಕಲಗಿಯಲ್ಲಿ ಬುಟ್ಟಿಯಲ್ಲಿ ನೀರು ಹಾಕಿ ಒನಕೆ ಇಟ್ಟು ಗ್ರಹಣ ವೀಕ್ಷಿಸಿದರು. ಲಚ್ಚಪ್ಪ ಪೆಟ್ಲೂರ್ ಎಂಬವರ ಮನೆಯಲ್ಲಿ ಒನಕೆ ಮೂಲಕ ಗ್ರಹಣ ಪ್ರಮಾಣ ಲೆಕ್ಕಾಚಾರ ಮಾಡಲಾಗಿದೆ. ನೀರಲ್ಲಿ ಇಟ್ಟಿದ್ದ ಒನಕೆ ನೇರವಾಗಿ ನಿಂತಿದ್ದು ಗ್ರಹಣ ಸ್ಪರ್ಶಕ್ಕೆ ಸಾಕ್ಷಿ. ನೀರಲ್ಲಿ ಒನಕೆ ನಿಂತಿರುವವರೆಗೂ ಗ್ರಹಣ ಕಾಲ ಇದೆ ಎನ್ನುವುದು ಈ ಗ್ರಾಮೀಣ ಜನರ ನಂಬಿಕೆ. ಒನಕೆ ಬಿದ್ದ ಕೂಡಲೇ ಗ್ರಹಣ ಮೋಕ್ಷ ಆಗಿದೆ ಎಂದು ನಂಬುವ ಈ ಜನರು ಅಲ್ಲಿಯವರೆಗೂ ಬೇರೆ ಯಾವುದೇ ಚಟುವಟಿಕೆ ನಡೆಸದೆ ದೇವರ ಸ್ಮರಣೆ ನಡೆಸುತ್ತಾರೆ.

    ಗ್ರಹಣದ ಸಮಯದಲ್ಲೇ ಆಹಾರ ಸೇವನೆ; ಮೂಢನಂಬಿಕೆ ನಿವಾರಣೆ ನಿಟ್ಟಿನಲ್ಲಿ ಪ್ರತಿಭಟನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts