More

    ಜಿಪಂ ಫಲಾನುಭವಿಗಳ ಮಾಹಿತಿಗೆ ತಂತ್ರಾಂಶ ಅಭಿವೃದ್ಧಿ ಕೆ.ಕಿಸಾನ್ ರೂವಾರಿ ದಿವಾಕರ್ ಹೆಗಲೇರಿದ ಹೊಣೆ

    ಚಿತ್ರದುರ್ಗ: ಜಿಪಂ ವ್ಯಾಪ್ತಿ ವಿವಿಧ ಇಲಾಖೆಗಳ ಫಲಾನುಭವಿಗಳ ಮಾಹಿತಿ ಸಂಗ್ರಹಕ್ಕೆ ಹೊಸ ತಂತ್ರಾಂಶ ಅಭಿವೃದ್ಧಿ ಪಡಿಸುವ ಹೊಣೆ,ಕೃಷಿ ಇಲಾ ಖೆ ಕೆ.ಕಿಸಾನ್ ತಂತ್ರಾಂಶದ ರೂವಾರಿ,ಜಿಪಂ ನೂತನ ಸಿಇಒ ಎಂ.ಎಸ್.ದಿವಾಕರ ಅವರ ಹೆಗಲೇರಿದೆ.

    ಕೆ-ಕಿಸಾನ್‌ನಿಂದಾಗಿ ಕೃಷಿ ಇಲಾಖೆ ಫಲಾನುಭವಿಗಳ ಸಮಗ್ರ ಮಾಹಿತಿ ಬೆರಳ ತುದಿಯಲ್ಲಿ ಲಭ್ಯವಾಗುತ್ತಿರುವ ಮಾದರಿಯಲ್ಲೇ, ಚಿತ್ರ ದುರ್ಗ ಜಿಪಂ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ಯೋಜನೆಗಳ ಫಲಾನುಭವಿಗಳ ಮಾಹಿತಿಯೂ ಲಭ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ತಂತ್ರಾಂಶ ಸಿದ್ಧಪಡಿಸುವುದಾಗಿ ಸಿಇಒ ದಿವಾಕರ್ ತಿಳಿಸಿದರು.

    2013ರ ಭಾರತೀಯ ಆಡಳಿತ ಸೇವೆ ಈ ಅಧಿಕಾರಿ,ಜಿಪಂ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಶನಿವಾರ ಸುದ್ದಿಗಾರರ ಜತೆ ಮಾತನಾಡಿದರು. ಈ ಮುನ್ನ ನಾನು ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕರಾಗುತ್ತಿದ್ದಂತೆ ಅಂದಾಜು ಒಂದು ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಕೆ.ಕಿಸಾನ್ ಆ್ಯಪ್ ಎರಡು ವರ್ಷಗಳಿಂದ ಚಾಲ್ತಿಯಲ್ಲಿದೆ.

    ರಾಜ್ಯದ 742 ರೈತ ಸಂಪರ್ಕ ಕೇಂದ್ರದಸ ಫಲಾನುಭ ವಿ ಗಳ ಮಾಹಿತಿ ಒದಗಿಸುತ್ತಿದೆ. ಈವರೆಗೆ ರಾಜ್ಯದ 30 ಲಕ್ಷ ರೈತ ಫಲಾನುಭವಿಗಳ ಮಾಹಿತಿ ಕೆ-ಕಿಸಾನ್‌ನಲ್ಲಿ ಲಭ್ಯವಿದೆ. ಇದರಿಂದಾಗಿ ಇಲಾಖೆ ಸೌಲಭ್ಯಗಳ ಹಂಚಿಕೆಯಲ್ಲಿ ಪಾರದರ್ಶಕತೆ ಕಂಡುಬಂದಿದೆ. ಅರ್ಹ ಫಲಾನುಭವಿಗಳಿಗೆ ಸವಲತ್ತು ವಿತರಿಸಲು ಅನುಕೂಲವಾಗಿದೆ.

    ರಾಷ್ಟ್ರಮಟ್ಟದಲ್ಲಿ ಮನ್ನಣೆ ಪಡೆದಿರುವ ಕೆ-ಕಿಸಾನ್‌ನಿಂದಾಗಿ ಕೃಷಿ ಇಲಾಖೆ ಅಧಿಕಾರಿಗಳು ಸ್ವಾಭಿಮಾನ ಹಾಗೂ ಆತ್ಮ ವಿಶ್ವಾಸದಿಂದ ಕಾರ‌್ಯ ನಿರ್ವಹಿಸುತ್ತಿದ್ದಾರೆ. ಜಿಪಂ ಅಧಿಕಾರಿ-ಸಿಬ್ಬಂದಿ ವರ್ಗದಲ್ಲೂ ಆತ್ಮವಿಶ್ವಾಸ,ಸ್ವಾಭಿಮಾನವನ್ನು ರೂಢಿಸಲು ತಂತ್ರಾಂಶದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

    ಜಿಪಂ ವ್ಯಾಪ್ತಿಯಲ್ಲಿ 4 ಲಕ್ಷ ಕುಟುಂಬಗಳಿದ್ದು,ಜಿಲ್ಲೆಯಲ್ಲಿ 189 ಗ್ರಾಪಂಗಳು,189 ಪಿಡಿಒ,65 ಗ್ರೇಡ್-1 ಕಾರ್ಯದರ್ಶಿಗಳು, 97 ಗ್ರೇಡ್-2 ಕಾರ್ಯದರ್ಶಿಗಳು, 100 ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಮೃತ್ ಗ್ರಾಪಂ ಯೋಜನೆ, ಜಲಜೀವನ್ ಮಿಷನ್,ನರೇಗಾ, ಅಮೃತ ಸರೋವರ ಯೋಜನೆಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ ಎಂದರು. ಡಿಎಸ್ ಡಾ.ರಂಗ ಸ್ವಾಮಿ,ಮುಖ್ಯಲೆಕ್ಕಾಧಿಕಾರಿ ಡಿ.ಆರ್.ಮಧು ಇದ್ದರು.
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts