More

    ಸಮಾಜ ಸೇವೆಯೇ ಜಿತೋ ಸಂಸ್ಥೆಯ ಉದ್ದೇಶ

    ಬೆಳಗಾವಿ: ಜೈನ್ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಸೇಷನ್ (ಜಿತೋ) ಸಂಸ್ಥೆಯು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ ಧರ್ಮ ಪಾಲಿಸುತ್ತ ಎಲ್ಲ ಸಮಾಜದವರಿಗೆ ನೆರವು ನೀಡುತ್ತ ಬಂದಿದೆ. ಸಮಾಜ ಸೇವೆಯಿಂದ ಸಂಸ್ಥೆಯು ಜನಮಾನಸದಲ್ಲಿ ಪರಿಚಿತಗೊಂಡಿದೆ ಎಂದು ಜಿತೋ ಅಪೆಕ್ಸ್ ಉಪಾಧ್ಯಕ್ಷ ಪಾರಸ ಭಂಡಾರಿ ಹೇಳಿದ್ದಾರೆ.

    ನಗರದ ಖಾಸಗಿ ಹೋಟೆಲ್‌ನಲ್ಲಿ ತ್ತೀಚೆಗೆ ನಡೆದ ಜೀತೊ ಬೆಳಗಾವಿ ವಿಭಾಗದ ನೂತನ ಆಡಳಿತ ಮಂಡಳಿ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಸಂಸ್ಥೆಯು ತನ್ನ ಎಲ್ಲ ಶಾಖೆಗಳ ಮೂಲಕ ಶೈಕ್ಷಣಿಕ, ಆರೋಗ್ಯ, ಕ್ರೀಡೆ , ಸಂಕಷ್ಟದಲ್ಲಿರುವವರಿಗೆ ಸಹಾಯ ಸೇರಿ ಇನ್ನಿತರ ನೆರವು ನೀಡುತ್ತಿದೆ. ಈ ಮೂಲಕ ಸಂಸ್ಥೆಯು ಪ್ರತಿಯೊಬ್ಬರ ಮನಸ್ಸಿನಲ್ಲಿ ಮನೆ ಮಾಡಿದೆ ಎಂದು ತಿಳಿಸಿದರು. ಶಾಸಕ ಅಭಯ ಪಾಟೀಲ, ನಿರ್ಗಮಿತ ಅಧ್ಯಕ್ಷ ಮನೋಜ ಸಂಚೇತಿ, ಕೆಕೆಜಿ ಝೋನ್ ಚೇರ್ಮನ್ ಓಂಪ್ರಕಾಶ ಜೈನ್ , ಕಾರ್ಯದರ್ಶಿ ಪ್ರವೀಣ ಬಾಫನಾ, ಪ್ರಮೋದ ಪಾಟೀಲ ಇತರರಿದ್ದರು.

    ಅಧ್ಯಕ್ಷರಾಗಿ ಸುನೀಲ ಅಧಿಕಾರ ಸ್ವೀಕಾರ: ಜಿತೋ ಸಂಸ್ಥೆಯ ಬೆಳಗಾವಿ ವಿಭಾಗದ 2020-21ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಸುನೀಲ ಕಟಾರಿಯಾ, ಪ್ರಧಾನ ಕಾರ್ಯದರ್ಶಿಯಾಗಿ ಅಂಕಿತ ಖೋಡಾ, ಹಿರಿಯ ಉಪಾಧ್ಯಕ್ಷರಾಗಿ ಪುಷ್ಪಕ ಹನುಮಣ್ಣವರ, ಉಪಾಧ್ಯಕ್ಷರಾಗಿ ಮುಕೇಶ ಪೋರವಾಲ್, ಕಾರ್ಯದರ್ಶಿಯಾಗಿ ಅಮಿತ ದೋಷಿ ಮತ್ತು ಅಭಿಜೀತ ಭೋಜಣ್ಣವರ, ಖಜಾಂಚಿಯಾಗಿ ಮಹೇಂದ್ರ ಪರಮಾರ, ಸಹ ಖಜಾಂಚಿಯಾಗಿ ಅಭಿಷೇಕ ಮಿರ್ಜಿ, ನಿರ್ದೇಶಕರಾಗಿ ವಿಜಯ ಪಾಟೀಲ ಮತ್ತು ನಿತಿನ ಚಿಪ್ರೆ ಅಧಿಕಾರ ವಹಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts