More

    ದುಶ್ಚಟ ತೊರೆದರೆ ನೆಮ್ಮದಿ ಭಾಗ್ಯ

    ಚಳ್ಳಕೆರೆ: ಮದ್ಯ, ಗುಟ್ಖಾ, ಜೂಜು ಸೇರಿ ಎಲ್ಲ ರೀತಿಯ ದುಶ್ಚಟ ತೊರೆದವರ ಬದುಕಿನಲ್ಲಿ ಸದಾ ನೆಮ್ಮದಿ ಇರಲಿದೆ. ಜತೆಗೆ ಸಮಾಜದಲ್ಲಿ ಉನ್ನತ ಗೌರವ ಲಭಿಸಲಿದೆ ಎಂದು ತಾಲೂಕು ವೀರಶೈವ ಸೇವಾ ಸಮಾಜದ ಉಪಾಧ್ಯಕ್ಷ ಕೆ.ಎಂ.ಜಗದೀಶ್ ಹೇಳಿದರು.

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜಿಲ್ಲಾ ಜನ ಜಾಗೃತಿ ವೇದಿಕೆ ಸಹಯೋಗದಲ್ಲಿ ನಗರದ ಜೈನ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 1736ನೇ ಮದ್ಯ ವರ್ಜನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ಕುಡಿತ ಮನುಷ್ಯರನ್ನು ಸಾಲಗಾರನನ್ನಾಗಿ ಮಾಡುತ್ತದೆ. ಕುಟುಂಬದಲ್ಲಿ ನೆಮ್ಮದಿ ಇಲ್ಲದಂತೆ ಬದುಕಬೇಕಾಗುತ್ತದೆ ಎಂದರು.

    ಆರೋಗ್ಯ ಸಮಸ್ಯೆ ಉಲ್ಬಣಿಸಿ, ಸಂಕಷ್ಟದಲ್ಲಿ ಜೀವನ ಸಾಗಿಸಬೇಕಾಗುತ್ತದೆ. ಇಂತಹ ದುಶ್ಚಟಗಳಿಂದ ದೂರವಿರುವ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

    ಕವಿ ಕೊರಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಧರ್ಮಸ್ಥಳ ಸಂಸ್ಥೆ ಮದ್ಯವರ್ಜನ ಶಿಬಿರ ಆಯೋಜಿಸುವ ಮೂಲಕ ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ. ಈಗಾಗಲೇ 1.5 ಲಕ್ಷ ಮದ್ಯ ವ್ಯಸನಿಗಳನ್ನು ಸನ್ನಡತೆಗೆ ಬದಲಾಯಿಸಿರುವುದು ದೊಡ್ಡ ಸಾಧನೆ ಎಂದರು.

    ಗಾಂಧೀಜಿ ಕಂಡ ಕನಸಿನಂತೆ ಗ್ರಾಮಗಳ ಉದ್ಧಾರ ಮತ್ತು ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕಾರ ಸಿಗಬೇಕು. ಪ್ರತಿ ಪಂಚಾಯಿತಿ ಹಂತದಲ್ಲಿ ಮದ್ಯದ ಅಂಗಡಿ ಆರಂಭಿಸುವ ಸರ್ಕಾರದ ನಿರ್ಧಾರವನ್ನು ಜನರು ಒಗ್ಗೂಡಿ ಖಂಡಿಸಬೇಕಿದೆ ಎಂದು ತಿಳಿಸಿದರು.

    ಹಿರಿಯ ಪತ್ರಕರ್ತ ಬಿ.ವಿ.ಚಿದಾನಂದಮೂರ್ತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನಾಧಿಕಾರಿ ಶಶಿಕಲಾ ಹೆಗ್ಗಡೆ, ಮೇಲ್ವಿಚಾರಕ ಎಂ.ಜಿ.ಅಶೋಕ್, ಶಿಬಿರಾಧಿಕಾರಿ ದಿವಾಕರ್, ಆರೋಗ್ಯ ಸಹಾಯಕಿ ರಂಜಿತಾ, ಜನ ಜಾಗೃತಿ ವೇದಿಕೆ ಮೇಲ್ವಿಚಾರಕ ರುದ್ರಪ್ಪ ಇತರರಿದ್ದರು.

    ಕುಡಿತದ ಹವ್ಯಾಸದಿಂದ ಕುಟುಂಬ ಮತ್ತು ದುಡಿಮೆ ಸ್ಥಳದಲ್ಲಿ ಗೌರವ ಸಿಗುವುದಿಲ್ಲ. ವ್ಯವಹಾರಿಕ ಸಂಬಂಧಗಳಲ್ಲಿ ನಂಬಿಕೆ ಇರುವುದಿಲ್ಲ. ಅವಲಂಬಿತ ಕುಟುಂಬಸ್ಥರು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುವುದಿಲ್ಲ.
    ಹೂವಿನ ಜಗದೀಶ್, ಸಮಾಜ ಸೇವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts