More

    ಶಬ್ಧ ಪುಂಜವಾಗಿ ಮಾತ್ರ ಉಳಿದ ಸಮಾಜವಾದ

    ಶಿವಮೊಗ್ಗ: ಸಮಾಜವಾದ ಸೇರಿದಂತೆ ಯಾವುದೇ ಸಿದ್ಧಾಂತ ಅಥವಾ ನಂಬಿಕೆಯನ್ನು ಆಯಾ ಕಾಲಘಟ್ಟದಲ್ಲಿ ಮತ್ತೊಮ್ಮೆ ನಿಷ್ಕರ್ಷೆಗೆ ಒಳಪಡಿಸಬೇಕಾದ ಅವಶ್ಯಕತೆಯಿದೆ ಎಂದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ್ ಯಡಗೆರೆ ಹೇಳಿದರು.

    ಶಿವಮೊಗ್ಗ ಸಿನಿಹಬ್ಬದ ಸಮಾರೋಪದಲ್ಲಿ ಭಾನುವಾರ ಮಾತನಾಡಿ, ಮಲೆನಾಡಿನ ಯುವ ಸಮೂಹಕ್ಕೆ ಸಮಾಜವಾದ ಎಂಬುದು ಶಬ್ಧ ಪುಂಜವಾಗಿ ಮಾತ್ರ ಉಳಿದಿದೆ. 70ರ ದಶಕದ ಹೋರಾಟಕ್ಕೆ ಮಾತ್ರ ಸಮಾಜವಾದ ಸೀಮಿತವಾಯಿತು. ಬದಲಾದ ಸಂದರ್ಭದಲ್ಲಿ ಅವಕಾಶ ಮತ್ತು ಸಂಪತ್ತಿನ ಹಂಚಿಕೆಯ ಸಮಾಜವಾದ ಹೊರ ಹೊಮ್ಮಿದೆ ಎಂದರು.
    ಎರಡು ದಿನಗಳ ಕಾಲ ನಡೆದ ಈ ಸಿನಿಹಬ್ಬದಲ್ಲಿ ಹಲವು ಪ್ರಮುಖ ಸಿನಿಮಾಗಳನ್ನು ನೋಡುವ ರೀತಿ, ಅರ್ಥೈಸಿಕೊಳ್ಳುವ, ಸಂವಹನ ನಡೆಸುವ ಕಲೆ ಸಿದ್ಧಿಸಿಕೊಳ್ಳುವ ಪ್ರಯತ್ನ ನಡೆದಿದೆ. ಇಂತಹ ಸಿನಿಮಾಗಳು ನಮ್ಮ ಹೃದಯವನ್ನು ಬಡಿದೆಬ್ಬಿಸಬೇಕು. ಪ್ರಶ್ನೆಯನ್ನು ಹುಟ್ಟು ಹಾಕಬೇಕು. ಸಂಚಲನವಾಗಬೇಕು. ಆಗ ಮಾತ್ರ ಸಿನಿಮಾ ಸೇರಿದಂತೆ ಯಾವುದೇ ಕಲಾ ಮಾಧ್ಯಮಗಳು ಯಶಸ್ವಿಯಾಗಿದೆ ಎಂದರ್ಥ ಎಂದು ವ್ಯಾಖ್ಯಾನಿಸಿದರು.
    ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಕಾರ್ಯದರ್ಶಿ ನಾಗರಾಜ್ ನೇರಿಗೆ ಮಾತನಾಡಿ, ಸಮಾಜವಾದದ ನೆಲೆಯಾದ ಶಿವಮೊಗ್ಗ ಇಂದು ಕೋಮುವಾದದ ನೆಲೆಯಾಗಿ ವಿಜೃಂಭಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಯುವ ಸಮೂಹ ತಮಗೆ ಗೊತ್ತಿಲ್ಲದೆಯೇ ಈ ಬಲೆಗೆ ಬೀಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
    ಚಿಂತಕರಾದ ಮುರಳೀಧರ್, ಫಣಿರಾಜ್, ಸಿನಿಹಬ್ಬದ ಸಂಚಾಲಕ ಹೊನ್ನಾಳಿ ಚಂದ್ರಶೇಖರ್, ಪತ್ರಕರ್ತ ಜಿ.ಟಿ.ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts