More

    ಕ್ಷೇತ್ರದ ಜನತೆಗಾಗಿ ಸಮಾಜ ಸೇವೆ ನಿರಂತರ

    ಕೆ.ಎಂ.ದೊಡ್ಡಿ: ಕ್ಷೇತ್ರದ ಜನತೆ ನನ್ನ ಸೇವೆ ಒಪ್ಪಿ ಶಾಸಕ ಸ್ಥಾನ ನೀಡಿದ್ದು, ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಸಮಾಜ ಸೇವೆ ನಿರಂತರವಾಗಿ ಸಾಗಲಿದೆ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

    ಹಲಗೂರು ರಸ್ತೆಯ ಚಾಂಶುಗರ್ಸ್‌ ಸಕ್ಕರೆ ಕಾರ್ಖಾನೆ ಸಮೀಪದ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸೇವಾ ಹೆಜ್ಜೆ ಮೂರರ ಸಂಭ್ರಮ ಹಾಗೂ ಉದಯಯಾನ 2.0 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಸಮಾಜಸೇವೆ ಮಾಡಬೇಕೆಂಬ ಆಸೆಯಿಂದ 3 ವರ್ಷಗಳ ಹಿಂದೆ ಕರೊನಾ ಸಂಕಷ್ಟದಲ್ಲಿ ಟ್ರಸ್ಟ್ ಮೂಲಕ ಸೇವೆ ಆರಂಭಿಸಲಾಯಿತು. ಆ ಸಂದರ್ಭದಲ್ಲಿ ಬಹಳಷ್ಟು ಜನರು ವ್ಯಾಪಕ ಟೀಕೆ ಮಾಡಿದರು. ಅದನ್ನು ಮನಸ್ಸಿಗೆ ಹಾಕಿಕೊಳ್ಳದೆ ಕೈಲಾದ ಸೇವೆ ಮಾಡಿದೆ ಎಂದರು.

    ಹಲವು ಮಹಿಳೆಯರಿಗೆ ಕಂಪನಿಗಳಲ್ಲಿ ಉದ್ಯೋಗ, ಅರ್ಹರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ. ತೆಂಗಿನ ಮರವೇರಲು ಯಂತ್ರ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ಸರ್ಕಾರಿ ಶಾಲೆಯ ಅಡುಗೆ ಸಹಾಯಕಿಯರಿಗೆ ತಲಾ 2 ಜೊತೆ ಸಮವಸ್ತ್ರ ವಿತರಣೆ ಮಾಡಲಾಗುತ್ತಿದೆ. ಅಲ್ಲದೇ, ಭಾರತೀನಗರ ವ್ಯಾಪ್ತಿಯ ನಾಗರಿಕರ ಮನವಿ ಮೇರೆಗೆ ಶವಸಂಸ್ಕಾರ ವಾಹನ ವಿತರಣೆ ಹಾಗೂ ಆಲಬೂಜನಹಳ್ಳಿ ಬಸವಪ್ಪನಿಗೆ ಬಸವರಥ ನೀಡಲಾಗುತ್ತಿದೆ ಎಂದರು.

    ಪಾಲ್ಗೊಂಡಿದ್ದ ಮಹಿಳೆಯರು, ಪುರುಷರು ಹಾಗೂ ಯುವಕರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಚಿತ್ರನಟ ದರ್ಶನ್ ಅವರನ್ನು ಕಾಣಲು ಬಿಸಿಲನ್ನು ಲೆಕ್ಕಿಸದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts