More

    ಸಾಮಾಜಿಕ ಮಾಧ್ಯಮ ಕಡಿವಾಣಕ್ಕೆ ವಿರೋಧ; ವಾಕ್​ ಸ್ವಾತಂತ್ರ್ಯ ನಿಯಂತ್ರಣ ಪ್ರಜಾಪ್ರಭುತ್ವಕ್ಕೆ ಮಾರಕ

    ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ಕಡಿವಾಣ ಹೇರುವುದಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಿರೋಧ ವ್ಯಕ್ತಪಡಿಸಿದ್ದಾರೆ. ಆರೋಗ್ಯಕರ ಪ್ರಜಾಪ್ರಭುತ್ವಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮುಕ್ತ ಸಂವಾದ ಅಗತ್ಯ. ಅದನ್ನು ನಿಯಂತ್ರಿಸಿದರೆ ಕಾನೂನು ಕ್ರಮಗಳಿಗೆ ಆಹ್ವಾನ ಕೊಟ್ಟಂತಾಗುತ್ತದೆ. ಮಿತಿಯನ್ನು ಮೀರಿದಾಗ ಮಾತ್ರ ಸುಪ್ರೀಂಕೋರ್ಟ್ ಟೀಕೆಗಳಿಗೆ ಪ್ರತಿಕ್ರಿಯಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಮಾಧ್ಯಮದ ಮೇಲೆ ನಿಯಂತ್ರಣ ಹೇರುವುದು ಅನಗತ್ಯ. ಈ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಸರ್ಕಾರ ಯಾವುದೇ ಕಾನೂನು ರಚಿಸಬಾರದು.

    ಮುಕ್ತ ಪ್ರಜಾಪ್ರಭುತ್ವ ಮತ್ತು ಮುಕ್ತ ಚರ್ಚೆಗಳು ನಮಗೆ ಬೇಕಾಗಿದೆ ಎಂದು ಎಂದು ಸಂದರ್ಶನವೊಂದರಲ್ಲಿ ಸಲಹೆ ಮಾಡಿದ್ದಾರೆ. ನಿರ್ದಿಷ್ಟವಾಗಿ ಯಾವುದಾದರೂ ಸಲಹೆ ನೀಡಿದರೆ ಸುಪ್ರೀಂಕೋರ್ಟ್ ಅದನ್ನು ನಿಭಾಯಿಸಲು ಸಿದ್ಧ. ಸವೋನ್ನತ ನ್ಯಾಯಾಲಯ ಅತ್ಯಂತ ಅಪರೂಪದಲ್ಲೇ ಅಪರೂಪದ್ದಾದ ಸಂದರ್ಭಗಳಲ್ಲಿ ಮಾತ್ರವೇ ನ್ಯಾಯಾಂಗ ನಿಂದನೆ ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತದೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿನ ಬರಹಗಳಿಗಾಗಿ (ಪೋಸ್ಟ್) ರಾಜ್ಯ ಸರ್ಕಾರಗಳು ಮೊಕದ್ದಮೆಗಳನ್ನು ಹೂಡುತ್ತಿರುವುದರ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಸರ್ವೋನ್ನತ ನ್ಯಾಯಾಲಯದ ನಿರ್ಧಾರಗಳನ್ನು ಟ್ವಿಟರ್​ನಲ್ಲಿ ಟೀಕಿಸುವುದು ಹಾಗೂ ಪ್ರಶ್ನಿಸಲಾಗುತ್ತಿರುವುದೂ ಅವರ ಈ ವಿಶ್ಲೇಷಣೆಗೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts