More

    ಸಾಮಾಜಿಕ ಕಳಕಳಿಯೇ ಸಂಘಟನೆಗಳ ಅಡಿಪಾಯ

    ಶಿಕಾರಿಪುರ: ನೂರಾರು ಕುಟುಂಬಗಳು ಒಂದೇ ಪ್ರೀತಿ ವಿಶ್ವಾಸದ ಸೂರಿನಡಿ ಸುಗಂಧಬಳಗದ ಹೆಸರಿನಲ್ಲಿ ಸಾಮಾಜಿಕ ಕಳಕಳಿಯನ್ನು ಬಿತ್ತುತ್ತಿರುವುದು ಸಂತಸದ ವಿಚಾರ ಎಂದು ನಿವೃತ್ತ ಪ್ರಾಚಾರ್ಯ ಪಂಚಾಕ್ಷರಯ್ಯ ಹೇಳಿದರು.

    ಪಟ್ಟಣದ ವಿಶ್ವಕರ್ಮ ಸಭಾಭವನದಲ್ಲಿ ಸುಗಂಧ ಬಳಗ ಆಯೋಜಿಸಿದ್ದ ಸ್ನೇಹ ಮಿಲನ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಯಾವುದೇ ಸಂಘಟನೆಯಿರಲಿ ಅದರ ಅಡಿಪಾಯವೇ ಸಾಮಾಜಿಕ ಕಳಕಳಿ. ತನ್ಮೂಲಕ ಈ ಮಣ್ಣಿನ ಸಂಸ್ಕೃತಿ, ಸಂಸ್ಕಾರ, ಪರಂಪರೆಗಳನ್ನು ಉಳಿಸಿ ಬೆಳೆಸಬಹುದು. ಸಾಂಘಿಕ ಜೀವನಶೈಲಿ ನಮ್ಮ ಹಿರಿಯರು ನಮಗೆ ಬಿಟ್ಟು ಹೋದ ಬಳುವಳಿ ಎಂದರು.
    ಸುಗಂಧ ಬಳಗ ಒಂದು ಮಾದರಿ ಸಂಘಟನೆಯಾಗಿ ತ್ರಿವಿಕ್ರಮನಂತೆ ಬೆಳೆದು ನಿಂತಿದೆ. ಎಲ್ಲೆಡೆ ತನ್ನ ಸ್ನೇಹದ ಸುಗಂಧವನ್ನು ಬೀರುತ್ತಿದೆ. ಮನುಷ್ಯ ಸಂಘಜೀವಿ, ಒಟ್ಟಾಗಿರುವಾಗ ಸಿಗುವಂತಹ ಆನಂದ ಅದ್ಭುತವಾದದ್ದು. ಸಂಘಟನೆಯಿಂದಲೇ ನಮಗೆ ಯಾವತ್ತೂ ಬಲ ಬರುವುದು ಎಂದು ಹೇಳಿದರು.
    ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಲ್.ರಾಜು ಮಾತನಾಡಿ, ಸುಗಂಧ ಬಳಗದ ಕಲ್ಪನೆ ವಿಶೇಷವಾಗಿದೆ. ಎಲ್ಲ ಕುಟುಂಬಗಳು ಒಟ್ಟಾಗಿ ಕಾರ್ಯಕ್ರಮ ಆಯೋಜಿಸುವುದು, ಪ್ರವಾಸ ಹೋಗುವುದು, ಕ್ರೀಡೆಗಳಲ್ಲಿ ಭಾಗವಹಿಸುವದು, ಪರಸ್ಪರ ಯೋಗಕ್ಷೇಮದಲ್ಲಿ ಭಾಗಿಯಾಗುವುದು, ಸಹಭೋಜನ ಏರ್ಪಡಿಸುವುದು ಶ್ಲಾಘನೀಯ. ಇದು ಸಮಾನ ಮನಸ್ಕರ ಸಂಘಟನೆಯೆಂದು ಗೊತ್ತಾಗುತ್ತದೆ ಎಂದರು.
    ಪೊಲೀಸ್ ಇನ್‌ಸ್ಪೆಕ್ಟರ್ ಕೋಮಲಾಚಾರ್ ಮಾತನಾಡಿ, ಸಂಘಟನೆ ಕಟ್ಟುವುದು ದೊಡ್ಡದಲ್ಲ. ಅದನ್ನು ಸಮರ್ಥವಾಗಿ ಉಳಿಸಿಕೊಂಡು ಹೋಗುವುದು ದೊಡ್ಡ ಕೆಲಸ. ಸುಗಂಧ ಬಳಗ ನನಗೆ ನೀಡಿದ ಸನ್ಮಾನಕ್ಕೆ ನಾನು ಸದಾ ಋಣಿ. ಸದ್ವಿಚಾರಗಳ ಬಿತ್ತುವ ನಿಮ್ಮ ಕೆಲಸ ನಿರಂತವಾಗಿರಲಿ ಎಂದರು.
    ಸುಗಂಧ ಬಳಗದ ಅಧ್ಯಕ್ಷ ಎಂ.ಜಿ.ಪ್ರಕಾಶ್ ಮಾತನಾಡಿ, ಕಳೆದ 18 ವರ್ಷಗಳಿಂದ ಸುಗಂಧ ಬಳಗ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳ್ನು ನಿರಂತರವಾಗಿ ಆಯೋಜಿಸುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುತ್ತಿದೆ ಎಂದರು.
    2024ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಬಳಗದ ಗೌರವಾಧ್ಯಕ್ಷ ಎಂ.ಎಚ್.ರವೀಂದ್ರ, ಪುರಸಭೆ ಸದಸ್ಯ ಪಾಲಾಕ್ಷಪ್ಪ, ದಸ್ತಾವೇಜು ಬರಹಗಾರರ ಸಂಘದ ಅಧ್ಯಕ್ಷ ಕೆ.ಎಂ.ಪ್ರಕಾಶ್, ಪ್ರಮುಖರಾದ ಪ್ರಶಾಂತ್, ಜಿ.ಎಂ.ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts