More

    ಟ್ವೀಟ್​ ಮಾಡುವುದಕ್ಕೂ ಮುನ್ನ ಪರಿಶೀಲಿಸಿ: ರಾಹುಲ್​ ಗಾಂಧಿಗೆ ಸ್ಮೃತಿ ಇರಾನಿ ಕ್ಲಾಸ್​

    ನವದೆಹಲಿ: ಕಾಂಗ್ರೆಸ್​ನ ನಾಯಕ ರಾಹುಲ್​ ಗಾಂಧಿ ಮಾಡಿದ್ದ ಟ್ವೀಟ್​ ಒಂದಕ್ಕೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಟ್ವೀಟ್​ ಮಾಡುವುದಕ್ಕೂ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ ಎಂದು ಸಚಿವೆ ಕಾಂಗ್ರೆಸ್​ ನಾಯಕನಿಗೆ ಎಚ್ಚರಿಸಿದ್ದಾರೆ.

    ಸೇನೆಯಲ್ಲಿ ಹೆಣ್ಣು ಗಂಡು ಎನ್ನುವ ಭೇದ-ಭಾವ ಮಾಡಬಾರದು, ಮಹಿಳೆಯರಿಗೆ ಭೂಸೇನೆಯಲ್ಲಿ ಶಾಶ್ವತ ಆಯೋಗ ರಚನೆಯಾಗಬೇಕು ಎಂದು ಸುಪ್ರೀಂ ಕೋರ್ಟ್​ ಕೊಟ್ಟ ಆದೇಶದ ಕುರಿತಾಗಿ ಟ್ವೀಟ್​ ಮಾಡಿದ್ದ ರಾಹುಲ್​ ಗಾಂಧಿ, “ಸರ್ಕಾರವು ಸೇನೆಯಲ್ಲಿ ಕಮಾಂಡ್​ ಪೋಸ್ಟ್​ಗಳನ್ನು ಹೆಣ್ಣು ಮಕ್ಕಳಿಗೆ ನೀಡದೇ ಮಹಿಳೆಯರಿಗೆ ಅಗೌರವ ಸೂಚಿಸುತ್ತಿತ್ತು. ಧೈರ್ಯವಾಗಿ ಎದ್ದು ನಿಂತು ಬಿಜೆಪಿ ಸರ್ಕಾರ ತಪ್ಪು ಎಂದು ತೋರಿಸಿದ್ದಕ್ಕೆ ಭಾರತದ ಎಲ್ಲ ಮಹಿಳೆಯರಿಗೆ ಅಭಿನಂದನೆಗಳು” ಎಂದು ಟ್ವೀಟ್​ ಮಾಡಿದ್ದರು.

    ರಾಹುಲ್​ ಗಾಂಧಿಯ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ, “ಸಶಸ್ತ್ರ ಪಡೆಗಳಲ್ಲಿ ಮಹಿಳೆಯರಿಗೆ ಆಯೋಗ ರಚನೆಯನ್ನು ಘೋಷಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರು. ನಿಮ್ಮ ಸರ್ಕಾರ ಅದರ ಬೆರಳನ್ನು ತಿರುಚಲು ಪ್ರಯತ್ನಿಸಿದಾಗ ಬಿಜೆಪಿ ಮಹಿಳಾ ಮೋರ್ಚಾ ಆ ವಿಚಾರವನ್ನು ಕೈಗೆತ್ತುಕೊಂಡಿತು. ಟ್ವೀಟ್​ ಮಾಡುವ ಮೊದಲು ಪರಿಶೀಲನೆ ಮಾಡಿಕೊಳ್ಳಿ.” ಎಂದು ಟ್ವೀಟ್​ ಮೂಲಕ ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts