More

    VIDEO| ಇನ್​ಸ್ಟಾಗ್ರಾಂನಲ್ಲಿ ಸ್ಮೃತಿ ಇರಾನಿ ಹಾರ್ಟ್​ ಟಚ್ಚಿಂಗ್​ ವೀಡಿಯೋ: ಮತ್ತೆ ವೈರಲ್​ ಆಯ್ತು ಹಳೇ ವಿಡಿಯೋ

    ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್​ ಆಗಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಮುಂಜಾನೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವೊಂದನ್ನು ಶೇರ್​ ಮಾಡಿದ್ದಾರೆ. ಹೆಣ್ಣು ಗಂಡಿನಂತೆಯೇ ಯಾವ ಕೆಲಸವನ್ನಾದರೂ ಮಾಡಬಲ್ಲಳು ಎನ್ನುವುದಕ್ಕೆ ನಿದರ್ಶನದಂತಿರುವ ಆ ವೀಡಿಯೋ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಸ್ಮೃತಿ ಇರಾನಿ ಶೇರ್​ ಮಾಡಿರುವ ವೀಡಿಯೋ 2019ರಲ್ಲಿ ಬಿಡುಗಡೆಗೊಂಡಿರುವುದು. ಉತ್ತರ ಪ್ರದೇಶದ ಬನ್ವಾರಿ ತೋಲಾ ಹೆಸರಿನ ಹಳ್ಳಿಯೊಂದರಲ್ಲಿ ಚಿತ್ರೀಕರಿಸಿರುವ ಈ ವೀಡಿಯೋ ಸತ್ಯ ಕಥೆಯೊಂದನ್ನು ಆಧರಿಸಿದ್ದಾಗಿದೆ. 2 ನಿಮಿಷ 19 ಸೆಕೆಂಡುಗಳ ವೀಡಿಯೋದಲ್ಲಿ ಬಡ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಕ್ಷೌರದಂಗಡಿಯಲ್ಲಿ ಕ್ಷೌರ ಮಾಡಿ ಬದುಕು ಸಾಗಿಸುವ ಮನಮುಟ್ಟುವ ಕಥೆಯಿದೆ. ಆ ಹಳ್ಳಿಯಲ್ಲಿರುವ ಕ್ಷೌರದಂಗಡಿಯ ಮಾಲಿಕನಿಗೆ ನೇಹಾ ಮತ್ತು ಜ್ಯೋತಿ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದು, ಮನೆಯಲ್ಲಿರುವ ಕಡುಬಡತನದಲ್ಲಿ ಜೀವನ ನಡೆಸಲೆಂದು ಆ ಇಬ್ಬರೂ ಹೆಣ್ಣು ಮಕ್ಕಳು ಕ್ಷೌರದಂಗಡಿಯಲ್ಲಿ ಗಂಡಿನಂತೆ ದುಡಿಯುವುದನ್ನು ವೀಡಿಯೋದಲ್ಲಿ ತೋರಿಸಲಾಗಿದೆ.

    ಈ ವೀಡಿಯೋ ಕಳೆದ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡು ಸಾಕಷ್ಟು ವೈರಲ್​ ಆಗಿತ್ತು. ಇದೀಗ ಇದೇ ವೀಡಿಯೋವನ್ನು ಮತ್ತೊಮ್ಮೆ ಶೇರ್​ ಮಾಡಿರುವ ಸ್ಮೃತಿ ಇರಾನಿ, ಕೆಲವು ಕಥೆಗಳನ್ನು ಮತ್ತೆ ಮತ್ತೆ ಹೇಳಲೇಬೇಕಾಗುತ್ತದೆ ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ.

    ಸಚಿವೆ ಶೇರ್​ ಮಾಡಿರುವ ವೀಡಿಯೋಕ್ಕೆ ಭಾರೀ ಪ್ರಮಾಣದ ಸ್ಪಂದನೆ ಸಿಗುತ್ತಿದ್ದು, ವೀಡಿಯೋ ಹಾಕಿದ 14 ಗಂಟೆಗಳೊಳಗಾಗಿ 50 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಸ್ಮೃತಿ ಅವರ ಆಪ್ತ ಮಿತ್ರೆ ಏಕ್ತಾ ಕಪೂರ್​ ಸೇರಿದಂತೆ ಅನೇಕರು ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts