More

    ಪ್ರೇಮಿಗಳ ದಿನಕ್ಕೆ ಸ್ಮೃತಿ ಇರಾನಿಗೆ ಸರ್ಪೈಸ್​​ ಗಿಫ್ಟ್​ ನೀಡಿದ ಪತಿ: ಹಾರ್ಟ್​ ಇಮೋಜಿ ಮೂಲಕ ಥ್ಯಾಂಕ್ಸ್​ ಹೇಳಿದ ಸ್ಮೃತಿ

    ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಪ್ರೇಮಿಗಳ ದಿನದ ಪ್ರಯುಕ್ತ ಪತಿ ಜುಬಿನ್​ ಇರಾನಿ ಸರ್ಪೈಸ್​ ಗಿಫ್ಟ್​ ಒಂದನ್ನು ನೀಡಿದ್ದಾರೆ. ಗುಲಾಬಿ ಹೂವುಗಳ ಬೊಕ್ಕೆಯನ್ನು ನೀಡಿ ತಮ್ಮ ಹೆಂಡತಿಗೆ ಈ ವಿಶೇಷ ದಿನದ ಶುಭ ಹಾರೈಸಿದ್ದಾರೆ.

    ಇಂದು ಮುಂಜಾನೆಯೇ ಸಚಿವೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಸರ್ಪೈಸ್​ ವಿಚಾರವನ್ನು ಹಂಚಿಕೊಂಡಿದ್ದಾರೆ. ಪತಿ ನೀಡಿರುವ ಗುಲಾಬಿ ಹೂಗಳ ಬೊಕ್ಕೆಯ ಫೋಟೋವನ್ನು ಹಂಚಿಕೊಂಡಿರುವ ಸಚಿವೆ ಅದಕ್ಕೆ ಹಾರ್ಟ್​ ಇಮೋಜಿಗಳನ್ನು ನೀಡುವ ಮೂಲಕ ಪತಿಗೆ ಥ್ಯಾಂಕ್ಸ್​ ಹೇಳಿದ್ದಾರೆ.

    43 ವರ್ಷದ ಸ್ಮೃತಿ ಇರಾನಿ 2001ರಲ್ಲಿ ಜುಬಿಯಾ ಇರಾನಿಯನ್ನು ಮದುವೆಯಾಗಿದ್ದರು. ಅಂದಿನಿಂದ ಸುಖ ದಾಂಪತ್ಯ ನಡೆಸಿಕೊಂಡು ಬಂದಿರುವ ಈ ದಂಪತಿಗೆ ಜೊಹ್ರ್​ ಇರಾನಿ ಹೆಸರಿನ ಮಗ ಮತ್ತು ಜೊಯಿಶ್​ ಇರಾನಿ ಹೆಸರಿನ ಮಗಳಿದ್ದಾಳೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts