More

    ಸ್ಮಾರ್ಟ್‌ಸಿಟಿ ಕಾಮಗಾರಿ ತಡೆ ತೆರವು

    ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ಕಾಮಗಾರಿ ಮುಂದುವರಿಸಲು ವಿಧಿಸಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಎಸ್‌ಪಿ(ಸ್ಟಾೃಂಡರ್ಡ್ ಒಪರೇಟಿಂಗ್ ಪ್ರೊಸೀಜರ್) ಪಾಲಿಸುವ ಷರತ್ತು ವಿಧಿಸಿ ಸೋಮವಾರ ತೆರವುಗೊಳಿಸಿದೆ.

    ನ್ಯಾಯಾಲಯದಿಂದ ನಿರಾಳತೆ ದೊರೆತ ಹಿನ್ನೆಲೆಯಲ್ಲಿ ಮಂಗಳವಾರದಿಂದಲೇ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಮರು ಆರಂಭಿಸುವ ಕುರಿತು ಅಧಿಕಾರಿಗಳು ಸುಳಿವು ನೀಡಿದ್ದಾರೆ. ಆದೇಶ ಪ್ರತಿ ಅಧಿಕಾರಿಗಳಿಗೆ ಸೋಮವಾರ ಸಾಯಂಕಾಲ ತನಕ ಲಭ್ಯವಾಗಿಲ್ಲ. ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯ ಆಡಳಿತ ಮಂಡಳಿಯ ಎಲ್ಲ ಸದಸ್ಯರು ಒಪ್ಪಿಗೆ ಪತ್ರಕ್ಕೆ ಸಹಿ ಹಾಕಬೇಕು. ಈ ಹಿಂದೆ ಕಂಪನಿ ಒಪ್ಪಿಸಿದ ಪತ್ರಕ್ಕೆ ವ್ಯವಸ್ಥಾಪಕರು ಮಾತ್ರ ಸಹಿ ಹಾಕಿದ್ದರು. ಆಡಳಿತ ಮಂಡಳಿ ಒಪ್ಪಿಗೆ ಪಡೆಯದೆ ಕಾಮಗಾರಿ ಕುರಿತು ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂದು ಸೋಮವಾರ ತೀರ್ಪು ನೀಡುವ ವೇಳೆ ನ್ಯಾಯಾಲಯ ನಿರ್ದೇಶಿಸಿರುವ ಮಾಹಿತಿ ಲಭ್ಯವಾಗಿದೆ.
    ಕಾಮಗಾರಿ ಸಂದರ್ಭ ತ್ಯಾಜ್ಯಗಳನ್ನು ಇತರ ಕಾಮಗಾರಿ ಸಂದರ್ಭ ಜಾಗ ಸಮತಟ್ಟುಗೊಳಿಸಲು, ಜಲ್ಲಿ ರೂಪದಲ್ಲಿ ಬಳಸಲು ಮತ್ತು ವಿವಿಧ ರೂಪದಲ್ಲಿ ಮರು ಬಳಕೆ ನಡೆಸಲಾಗುವುದು ಎಂದು ಸ್ಮಾರ್ಟ್‌ಸಿಟಿ ಕಂಪನಿ ನ್ಯಾಯಾಲಯಕ್ಕೆ ಲಿಖಿತ ವಿವರ ನೀಡಿದೆ. ನ್ಯಾಯಾಲಯದ ನಿರ್ದೇಶನದಂತೆ ನಗರಕ್ಕೆ ಆಗಮಿಸಿದ ನಾಗಪುರ ಮೂಲದ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನೆ ಸಂಸ್ಥೆ (ನೀರಿ) ತಜ್ಞರ ತಂಡದ ವರದಿ ಸೂಚನೆಗಳನ್ನು ಪಾಲಿಸುವ ವಾಗ್ದಾನ ನೀಡಿದೆ.

    ನ್ಯಾಯಾಲಯದ ತಡೆಯಾಜ್ಞೆ ತೆರವುಗೊಂಡ ಕಾರಣ ನಿರಾಳತೆ ಉಂಟಾಗಿದೆ. ನಗರದಲ್ಲಿ ನಿಂತಿರುವ ಕಾಮಗಾರಿ ಶೀಘ್ರ ಪುನರಾರಂಭಗೊಳ್ಳಲಿದೆ.
    ಪ್ರೇಮಾನಂದ ಶೆಟ್ಟಿ ಮೇಯರ್, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts