More

    VIDEO| 3 ಅಡಿಯಿರೋ ಬಾಡಿಬಿಲ್ಡರ್ 4 ಅಡಿ ಎತ್ತರದ ವಧುವನ್ನು ಮದುವೆಯಾದ!

    ನವದೆಹಲಿ: ಮದುವೆ ಎಂದರೆ ಯುವಕ, ಯುವತಿಗೆ ಎಷ್ಟೋ ಕನಸುಗಳು ಇರುತ್ತವೆ. ಎತ್ತರ, ಬಣ್ಣ, ಮನೆತನ ಎಂದು ವಿಚಾರಿಸಿ ಮದುವೆಯಾಗುತ್ತೇವೆ. ಆದರೆ ಇಲ್ಲಿ 3 ಅಡಿಯಿರೋ ಬಾಡಿಬಿಲ್ಡರ್ 4 ಅಡಿ ಎತ್ತರದ ವಧುವನ್ನು ಮದುವೆಯಾಗಿದ್ದಾರೆ.

    ಭಾರತದ ದೇಹದಾರ್ಢ್ಯ ಪಟು ಪ್ರತೀಕ್ ಮೋಹಿತೆ ಅವರ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಬಾಡಿ ಬಿಲ್ಡರ್‌ ಪ್ರತೀಕ್ ಮೋಹಿತೆ ಸ್ವತಃ 3 ಅಡಿಯಿದ್ದಾರೆ. ಇತ್ತೀಚೆಗಷ್ಟೇ ಈ ಬಾಡಿಬಿಲ್ಡರ್ 4 ಅಡಿ ಎತ್ತರದ ವಧುವನ್ನು ಮದುವೆಯಾಗಿದ್ದಾರೆ. ಇವರ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ಇದನ್ನೂ ಓದಿ: ಹಣ್ಣಿನ ಅಂಗಡಿಯಲ್ಲಿ ಉಡುಗೊರೆಯಾಗಿ ಸಿಗುತ್ತೆ ಪುಸ್ತಕ; ಈ ಯೋಜನೆ ಹಿಂದಿದೆ ಮಾಲೀಕನ ಕಣ್ಣೀರಿನ ಕಥೆ

    ವಿಡಿಯೋದಲ್ಲಿ ಏನಿದೆ?: ಪ್ರತೀಕ್, ವಧುವನ್ನು ಕರೆದೊಯ್ಯಲು ಡಿಜೆಯ ಕಾರಿನ ಮೇಲೆ ನಿಂತಿದ್ದಾಗ ನೃತ್ಯ ಮಾಡುವುದನ್ನು ನೋಡಬಹುದು. ಇದರಲ್ಲಿ ಕ್ರೀಂ ಮತ್ತು ಮರೂನ್ ಕಲರ್ ಶೇರ್ವಾನಿ ಧರಿಸಿ ಮೆರೂನ್ ಕಲರ್ ಪೇಟ ತೊಟ್ಟಿದ್ದಾರೆ. ಈ ವಿಡಿಯೋದಲ್ಲಿ ಅವರು ಮೈ ಹೂನ್ ಡಾನ್ ಹಾಡಿನಲ್ಲಿ ನೃತ್ಯ ಮಾಡುತ್ತಿದ್ದಾರೆ

    ಇದನ್ನೂ ಓದಿ:  ತಾಯಿ ಕಣ್ಮುಂದೆ ಕಟ್ಟಡದ ಮೇಲಿನಿಂದ ಬಿದ್ದು ಪ್ರಾಣ ಕಳೆದುಕೊಂಡ ಮಗು

    ಪ್ರತೀಕ್ ಮೋಹಿತೆ ಯಾರು?: ಪ್ರತೀಕ್ ರಾಯಗಢದ ನಿವಾಸಿ, ಅವರ ಪತ್ನಿ ಪುಣೆಯವರು. ಪ್ರತೀಕ್ 2016ರಲ್ಲಿ ದೇಹದಾರ್ಢ್ಯವನ್ನು ಪ್ರಾರಂಭಿಸಿದರು ಮತ್ತು 28 ನೇ ವಯಸ್ಸಿನಲ್ಲಿ ಪ್ರತೀಕ್ ವಿಶ್ವದ ಅತ್ಯಂತ ಕಿರಿಯ ದೇಹದಾರ್ಢ್ಯಗಾರನಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಪಡೆದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts