More

    ಕೆಸರು ಗದ್ದೆಯಂತಾದ ಚಿಕ್ಕಬಾಗೇವಾಡಿ ರಸ್ತೆ

    ಎಂ.ಕೆ. ಹುಬ್ಬಳ್ಳಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದ ಚಿಕ್ಕಬಾಗೇವಾಡಿ ರಸ್ತೆಯ ಸ್ಥಿತಿ ಅಧೋಗತಿಗೆ ತಲುಪಿದ್ದು, ಮಳೆಯಿಂದ ಕೆಸರು ಗದ್ದೆಯಂತಾದ ರಸ್ತೆ ಸರಿಪಡಿಸುವಂತೆ ರೈತರು ಹಾಗೂ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

    ಈ ಮೂಲಕ ಪ್ರತಿದಿನ ನಿಯಮ ಬಾಹಿರವಾಗಿ ಅತೀ ಭಾರದ ಕಲ್ಲು(ಕಡಿ) ಹೊತ್ತು ಸಾಗುವ ಟಿಪ್ಪರ್‌ಗಳನ್ನು ತಡೆದು ಆಕ್ರೋಶ ಹೊರಹಾಕಿದ ರೈತರು ಹಾಗೂ ಸ್ಥಳೀಯ ನಿವಾಸಿಗಳು, ತಕ್ಷಣ ರಸ್ತೆ ಸರಿಪಡಿಸುವಂತೆ ಹಾಗೂ ಭಾರವಾದ ವಾಹನಗಳ ಸಂಚಾರ ತಡೆಯುವಂತೆ ಒತ್ತಾಯಿಸಿದರು.

    ಹಿರೇಬಾಗೇವಾಡಿ ಬಳಿಯ ಶುಲ್ಕ ವಸೂಲಾತಿ ಕೇಂದ್ರವನ್ನು ತಪ್ಪಿಸಿ ಸಾವಿರಾರೂ ರೂ. ಉಳಿಸಿಕೊಳ್ಳಲು ಚಿಕ್ಕಬಾಗೇವಾಡಿ- ಎಂ.ಕೆ. ಹುಬ್ಬಳ್ಳಿ ಮಾರ್ಗವಾಗಿ ಬರುವ ಟಿಪ್ಪರ್ ಹಾಗೂ ಇತರೆ ದೊಡ್ಡ ವಾಹನಗಳಿಂದ ರಸ್ತೆಗಳು ಹಾಳಾಗಿ ಕೆಸರು ಗದ್ದೆಯಂತಾಗುತ್ತಿವೆ. ಹಲವು ವರ್ಷಗಳಿಂದ ರಸ್ತೆ ದುರಸ್ತಿ ಕೂಡ ಕಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ರೈತರಾದ ಈರಣ್ಣ ಗಿರಜಿಮನಿ, ಪ್ರಕಾಶ ಸಾಧುನವರ, ಮಾತನಾಡಿ, ರಸ್ತೆ ಸುಧಾರಣೆ ಮಾಡುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಉಪಯೋಗವಾಗಿಲ್ಲ. ಕೆಸರು ಗದ್ದೆಯಂತಾದ ರಸ್ತೆಯಲ್ಲೇ ಸಂಚಾರ ಮಾಡುವಂತಾಗಿದೆ. ಇಲ್ಲಿಯ ತಗ್ಗು- ಗುಂಡಿಯಲ್ಲಿ ಆಯತಪ್ಪಿಬಿದ್ದು ಕೆಲವರು ಗಾಯ ಮಾಡಿಕೊಂಡಿದ್ದಾರೆ. ತಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಿ ರಸ್ತೆ ದುರಸ್ತಿ ಹಾಗೂ ಭಾರಿ ವಾಹನಗಳ ಸಂಚಾರ ತಡೆಯಬೇಕು. ಇಲ್ಲವಾದಲ್ಲಿ ರಸ್ತೆ ತಡೆದು ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

    ಸಿದ್ಧಪ್ಪ ಸಾಧುನವರ, ಶೇಖಪ್ಪ ಸಾಧುನವರ, ಸುಖಪ್ಪ ಸಾಧುನವರ, ಶಿವಲಿಂಗಪ್ಪ ಸಾಧುನವರ, ನಾಗರಾಜ ಗುಡೆನ್ನವರ, ಆನಂದ ಚಳ್ಳಮರದ, ಸಂಜು ಗಡ್ಡಿ, ನಾಗಪ್ಪ ಗಾಣಿಗೇರ, ಸುರಪ್ಪ ಸಾಧುನವರ, ಬಸಪ್ಪ ಸಾಧುನವರ, ಶಂಕರ ಮರಡಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts