More

    ಕೇದಾರನಾಥ್​ ಪ್ರವಾಹದಲ್ಲಿ ಕಳೆದು ಹೋಗಿ, ಮೃತಪಟ್ಟಿದ್ದಾನೆಂದುಕೊಂಡಿದ್ದ ವ್ಯಕ್ತಿ 6 ವರ್ಷ ಬಳಿಕ ಮರಳಿ ಕುಟುಂಬಕ್ಕೆ ಸೇರ್ಪಡೆ!

    ಸಿತಾರ್​ಗಂಜ್​(ಉತ್ತರಖಂಡ): ಕುಟುಂಬವರು ಸತ್ತು ಹೋಗಿದ್ದಾನೆಂದು ಭಾವಿಸಿದ್ದ ವ್ಯಕ್ತಿಯೊಬ್ಬ ಆರು ವರ್ಷಗಳ ಬಳಿಕ ಮರಳಿ ಕುಟುಂಬವನ್ನು ಸೇರಿರುವ ಘಟನೆ ನಡೆದಿದ್ದು, ನಾಪತ್ತೆ ಆದವರನ್ನು ಹುಡುಕಲು ಉತ್ತರಖಂಡ ಪೊಲೀಸರು ನಡೆಸಿದ ‘ಆಪರೇಷನ್​ ಸ್ಮೈಲ್​’ ಕಾರ್ಯಾಚರಣೆ ಅದಕ್ಕೆ ಪ್ರಮುಖ ಕಾರಣವಾಗಿದೆ.

    ಜಮೀಲ್​ ಅಹ್ಮದ್​ ಅನ್ಸಾರಿ 2013ರಲ್ಲೇ ಮೃತಪಟ್ಟಿರುವುದಾಗಿ ಆತನ ಕುಟುಂಬ ಭಾವಿಸಿತ್ತು. ಕೇದಾರನಾಥ್​ನಲ್ಲಿ ಸಂಭವಿಸಿದ್ದ ಭೀಕರ ಪ್ರವಾಹಕ್ಕೆ ಸಾಕಷ್ಟು ಮಂದಿ ತುತ್ತಾಗಿದ್ದರು. ಅದರಲ್ಲಿ ಅನ್ಸಾರಿ ಕೂಡ ಒಬ್ಬರು ಎಂದು ಭಾವಿಸಲಾಗಿತ್ತು. ಆದರೆ ಇದೀಗ 62 ವರ್ಷದ ಅನ್ಸಾರಿ ಮರಳಿ ಮನೆಗೆ ಸೇರಿರುವುದು ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

    ಸಿತಾರ್​ಗಂಜ್​ ನಿವಾಸಿಯಾಗಿರುವ ಅನ್ಸಾರಿಯನ್ನು ಛಮೋಲಿ ಜಿಲ್ಲೆಯಲ್ಲಿರುವ ಗೋಪೇಶ್ವರ ವೃದ್ಧಾಶ್ರಮದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮನೆಗೆ ಮರಳಲು ಹಣವಿಲ್ಲದ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಅನ್ಸಾರಿ ವೃದ್ಧಾಶ್ರಮದಲ್ಲಿ ಜೀವಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅನ್ಸಾರಿಯವರ ಫೋಟೋ ಹರಿದಾಡಿದ್ದನ್ನು ಕಂಡು ಆತನ ಸೋದರ ಸಂಬಂಧಿಯ ಗುರುತು ಹಿಡಿದ ಬಳಿಕ ಹೇಗೋ ಅನ್ಸಾರಿಯನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಅನ್ಸಾರಿ, ಮನೆಗೆ ಮರಳು ನನ್ನ ಬಳಿ ಹಣವಿರಲಿಲ್ಲ. ಪ್ರವಾಹ ಬಂದಂತಹ ಸಮಯದಲ್ಲಿ ನಾನು ಕಟ್ಟಡ ನಿರ್ಮಾಣದ ಕೆಲಸಗಾರನಾಗಿದ್ದೆ. ಎರಡು ವರ್ಷಗಳವರೆಗೆ ನಾನು ವೃದ್ಧಾಶ್ರಮದಲ್ಲಿ ಉಳಿದಿದ್ದೆ. ಇದೀಗ ನನ್ನ ಕುಟುಂಬವನ್ನು ಮತ್ತೆ ಸೇರಿಕೊಂಡಿರುವುದು ನನಗೆ ಖುಷಿಯಾಗಿದೆ. ಇನ್ನು ಮುಂದೆ ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ.

    ಉತ್ತರಖಂಡದ ಪ್ರವಾಹದ ವೇಳೆ ಅವರು ನಾಪತ್ತೆಯಾಗಿದ್ದರು. ನಾವು ಎಲ್ಲ ಕಡೆ ಹುಡುಕಿದೆವು. ಪೊಲೀಸರು ಫೋಟೋವನ್ನು ಸ್ವೀಕರಿಸಿದರು. ಸಂಬಂಧಿಕರಿಂದ ನಾವು ಮಾಹಿತಿ ಪಡೆದೆವು. ಪತಿಯ ಹುಡುಕಾಟಕ್ಕಾಗಿ ಸಾಕಷ್ಟು ಹಣವನ್ನೂ ವ್ಯಯಿಸಿದ್ದೇವೆ ಎಂದು ಅನ್ಸಾರಿ ಪತ್ನಿ ಮೊಬಿನ್​ ಅನ್ಸಾರಿ ಹೇಳಿದ್ದಾರೆ.

    ಅನ್ಸಾರಿ ಪತ್ನಿ ಮೊಬಿನ್​ ಅನ್ಸಾರಿ ಮತ್ತು ಹಿರಿಯ ಮಗ ಗೋಪೇಶ್ವರಕ್ಕೆ ಪ್ರಯಾಣ ಬೆಳೆಸಿದ ಬಳಿಕ ಜನವರಿ 1ರಂದು ಅನ್ಸಾರಿಯನ್ನು ಪೊಲೀಸರು ಅವರ ವಶಕ್ಕೆ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts