More

    ಪರಿಸ್ಥಿತಿ ತುಂಬಾ ಗಂಭೀರವಾಗಿದೆ… ಸರ್ಕಾರ ಉಳಿಯೋದು ಕಷ್ಟ ಇದೆ…

    ನವದೆಹಲಿ: ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಗಳು ಮುಂದುವರಿದಿರುವಂತೆ ಅಲ್ಲೊಂದು ಇಲ್ಲೊಂದು ಮೆಲೋಡ್ರಾಮಗಳು ಭಾರಿ ಸಂಚಲನ ಮೂಡಿಸುತ್ತಿವೆ. ಶಾಸಕರನ್ನು ಸೆಳೆಯಲು ಬಿಜೆಪಿ ಹಣದ ಆಮಿಷ ಒಡ್ಡಿತ್ತು ಎಂದು ಸಾಬೀತುಪಡಿಸಲು ಕಾಂಗ್ರೆಸ್​ನವರು ಕೇಂದ್ರ ಸಚಿವರು ಹಾಗೂ ಕಾಂಗ್ರೆಸ್​ನ ಬಂಡಾಯ ಶಾಸಕರ ನಡುವೆ ನಡೆದಿದೆ ಎನ್ನಲಾದ ಮಾತುಕತಡೆಯ ಆಡಿಯೋ ತುಣುಕು ಬಿಡುಗಡೆ ಮಾಡಿದ್ದರು. ಇದೀಗ ತಾವು ಹೆಣೆದ ಬಲೆಯಲ್ಲಿ ತಾವೇ ಬಿದ್ದಿದ್ದಾರೆ.

    ಅಂದರೆ, ರಾಜಸ್ಥಾನದ ವಿಧಾನಸಭಾಧ್ಯಕ್ಷ ಸಿ.ಪಿ. ಜೋಷಿಯವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲು ಹೋಗಿದ್ದ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಅವರ ಪುತ್ರ ವೈಭವ್​ ಗೆಹ್ಲೋಟ್​ ವಿಧಾನಸಭಾಧ್ಯಕ್ಷರೊಂದಿಗೆ ರಾಜ್ಯದಲ್ಲಿನ ಹಾಲಿ ರಾಜಕೀಯ ಪರಿಸ್ಥಿತಿ ಕುರಿತು ಚರ್ಚಿಸಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.

    ಸಿ.ಪಿ. ಜೋಷಿ ಮತ್ತು ವೈಭವ್​ ಅವರಿಬ್ಬರ ಮಾತುಕತೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದ್ದು, ಅವರು ಅಂದುಕೊಂಡಿದ್ದಂತೆ 30 ಶಾಸಕರು ಬಂಡಾಯ ಎದ್ದಿದ್ದರೆ ನಮಗೆ ಏನೂ ಮಾಡಲಾಗುತ್ತಿರಲಿಲ್ಲ. ಬಾಯಿ ಬಾಯಿ ಬಡಿದುಕೊಳ್ಳುವುದನ್ನು ಬಿಟ್ಟು ಬೇರೆನನ್ನೂ ಮಾಡಲಾಗುತ್ತಿರಲಿಲ್ಲ… ಅವರೆಲ್ಲರೂ ಸೇರಿ ಸರ್ಕಾರವನ್ನು ಉರುಳಿಸಿ ಆಗಿರುತ್ತಿತ್ತು… ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ವಿಧಾನಸಭಾಧ್ಯಕ್ಷರು ವೈಭವ್​ಗೆ ಹೇಳಿದ್ದಾರೆ.

    ಇದನ್ನೂ ಓದಿ: ಶ್ರೀರಾಮನೇ ಇಲ್ಲ ಅಂದೋರು ಪೂಜೆಗೆ ಕರೆದಿಲ್ಲ ಅನ್ನೋದು ಸರಿನಾ?- ಬಿಜೆಪಿ ಟಾಂಗ್‌

    ವಿಧಾಸಭಾಧ್ಯಕ್ಷರ ಹುದ್ದೆ ಸಂವಿಧಾನಿಕ ಹುದ್ದೆಯಾಗಿದ್ದ ಅವರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ, ಇಲ್ಲಿ ಕಾಂಗ್ರೆಸ್​ ಪಕ್ಷದ ಪ್ರತಿನಿಧಿಯಂತೆ ಮಾತನಾಡಿರುವುದು ಬಿಜೆಪಿಗೆ ಪ್ರಬಲವಾದ ರಾಜಕೀಯ ಅಸ್ತ್ರ ಸಿಕ್ಕಂತಾಗಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ನೈತಿಕ ಹೊಣೆಹೊತ್ತು ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ಸಿ.ಪಿ. ಜೋಷಿ ಅವರ ಮೇಲೆ ಒತ್ತಡ ಹೇರಲಾರಂಭಿಸಿದೆ.

    ವಿಧಾನಸಭಾಧ್ಯಕ್ಷರು ಅಶೋಕ್​ ಗೆಹ್ಲೋಟ್​ ಅವರ ಸರ್ಕಾರ ಉಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ವಿಧಾನಸಭಾಧ್ಯಕ್ಷರು ಹೊರಬಂದು ಇದರ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ವಿಡಿಯೋ ತುಂಬಾ ನೈಜವಾಗಿದೆ. ಆದ್ದರಿಂದ, ನೈತಿಕ ಹೊಣೆ ಹೊತ್ತು ಅವರು ರಾಜೀನಾಮೆ ಕೊಡಬೇಕು ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್​ ಪೂನಿಯಾ ಆಗ್ರಹಿಸಿದ್ದಾರೆ.

    ‘https://www.vijayavani.net/4-year-bed-degree-to-be-minimum-qualification-for-teaching-by-2030/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts