More

    ಪ್ರಸಾದ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಕೊಡಿ

    ಸಿರವಾರ: ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ದಲಿತ ಮುಖಂಡ ಪ್ರಸಾದ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಪ್ರಸಾದ್ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಆಗ್ರಹಿಸಿ ಉಪತಹಸೀಲ್ದಾರ್ ಸಿದ್ದನಗೌಡಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು.

    ಇದನ್ನೂ ಓದಿ: ದಲಿತ ಮುಖಂಡನ ಕೊಲೆಗೈದವರಿಗೆ ಕಠಿಣ ಶಿಕ್ಷೆ ನೀಡಿ

    ಪ್ರಸಾದ್ ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ರಾಜ್ಯದಲ್ಲಿ ದಿನೇ ದಿನೆ ದಲಿತರ ಕೊಲೆಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಅಸ್ಪಶ್ಯತೆ ಜೀವಂತವಾಗಿದ್ದು, ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ದಲಿತರಿಗೆ ಸಾಧ್ಯವಾಗಿಲ್ಲ. ದಲಿತ ಮುಖಂಡರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದರು.

    ಕೋಲಾರದಲ್ಲಿ ವೆಂಕಟೇಶ್ ಎಂಬ ದಲಿತ ಮುಖಂಡನ ಕೊಲೆ ತನಿಖೆ ಪ್ರಗತಿಯಲ್ಲಿರುವಾಗಲೇ ಮದ್ಲಾಪುರದಲ್ಲಿ ಪ್ರಸಾದ್ ಅವರನ್ನು ಬೆಳ್ಳಂ ಬೆಳಗ್ಗೆ ನಡು ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮದ್ಲಾಪುರ ಗ್ರಾಮದ ಸುತ್ತಮುತ್ತ ದಲಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ಖಂಡಿಸಿ, ನೊಂದವರ ಪರವಾಗಿ ಪ್ರಸಾದ್ ಧ್ವನಿ ಎತ್ತುತ್ತಿದ್ದರು.

    ಒಂದು ತಿಂಗಳ ಹಿಂದೆ ದಲಿತರನ್ನು ಅವಮಾನ ಮಾಡಿದ್ದಾರೆಂದು ಕೆಲವರ ವಿರುದ್ಧ ದೌರ್ಜನ್ಯ ತಡೆಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅನ್ಯಾಯಕ್ಕೆ ಒಳಗಾದವರ ಬೆಂಬಲಕ್ಕೆ ನಿಂತಿದ್ದರು. ಇದನ್ನು ಸಹಿಸದೆ ಪ್ರಸಾದ್ ಅವರನ್ನು ಕೊಲೆ ಮಾಡಲಾಗಿದೆ.

    ಪ್ರಸಾದ್ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಉಪ ತಹಸೀಲ್ದಾರ್ ಸಿದ್ದನಗೌಡಗೆ ಸಲ್ಲಿಸಿ ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts