More

    ಮತ ಎಣಿಕೆ ಕೇಂದ್ರ ಮುಂದೆ ಸೇರಿದ್ದ ಗ್ರಾಪಂ ಸ್ಪರ್ಧಾಳುಗಳು, ಬೆಂಬಲಿಗರು

    ಸಿರಗುಪ್ಪ: ತಾಲೂಕಿನ ಗ್ರಾಪಂ ಚುನಾವಣೆಯ ಮತ ಎಣಿಕೆ ನಗರದ ವಿವೇಕಾನಂದ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆಯಿತು. ಮತ ಎಣಿಕೆ ಕೇಂದ್ರದ ಮುಂದೆ ಅಭ್ಯರ್ಥಿಗಳು ಮತ್ತು ಬೆಂಬಲಿಗರು ಅಪಾರ ಪ್ರಮಾಣದಲ್ಲಿ ಸೇರಿದ್ದು ಎಲ್ಲೆಲ್ಲೂ ಜನ ಸಂದಣಿ ಕಾಣುತ್ತಿತ್ತು. ವಿಜೇತರು ಆಗಮಿಸುತ್ತಿದ್ದಂತೆ ಬೆಂಬಲಿಗರು ಹೂಮಾಲೆ ಹಾಕಿ ಎತ್ತಿಕೊಂಡು ರಸ್ತೆಯಲ್ಲೇ ಮೆರವಣಿಗೆ ಮಾಡಿ ವಿಜಯೋತ್ಸವ ಆಚರಿಸಿದರು. ಭಾರಿ ಜನಸ್ತೋಮದಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸಬೇಕಾಯಿತು. ಪದೇಪದೆ ಜನ ದಟ್ಟನೆ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು.

    ಮತ ಎಣಿಕೆ ವಿಳಂಬ: ಬೆಳಗಿನ 8ಗಂಟೆಗೆ ಪ್ರಾರಂಭವಾಗಬೇಕಿದ್ದ ಮತ ಎಣಿಕೆ ಕಾರ್ಯ ಏಜೆಂಟರು ಸಮಯಕ್ಕೆ ಬಾರದ ಹಿನ್ನೆಲೆಯಲ್ಲಿ ಕಾರಣ ಅರ್ಧ ಗಂಟೆ ತಡವಾಗಿ ಮತ ಎಣಿಕೆ ಪ್ರಾರಂಭವಾಯಿತು. ಏಜೆಂಟರು ಮತ್ತು ಅಧಿಕಾರಗಳ ಸಮ್ಮುಖದಲ್ಲಿ ಮತ ಪೆಟ್ಟಿಗೆಗಳನ್ನು ತೆರೆಯಲಾಯಿತು. ಮತ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದ 50ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಚುನಾವಣಾಧಿಕಾರಿಗೆ ಮಧ್ಯಾಹ್ನ 3.30 ಆದರೂ ಊಟ ಸಿಗದೆ ಪರದಾಡಿದರು. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸಿಬ್ಬಂದಿಗೆ ಊಟ ತರಿಸಿಕೊಟ್ಟರು.

    ಸತತ ಮೂರನೇ ಬಾರಿ ಗೆಲುವು: ಸಿರಗುಪ್ಪ ತಾಲೂಕಿನ ರಾರಾವಿ ಗ್ರಾ.ಪಂಯ ಮೂರನೇ ಕ್ಷೇತ್ರದಿಂದ ಎಸ್.ಸೋಮಯ್ಯ ಸತತವಾಗಿ ಮೂರನೇ ಬಾರಿ ಗೆಲುವು ಸಾಧಿಸಿದ್ದಾರೆ. ಎಸ್.ಸೋಮಯ್ಯ ಮೊದಲ ಬಾರಿಗೆ 2010ರಲ್ಲಿ ಆಯ್ಕೆಯಾಗಿ ಅಧ್ಯಕ್ಷರಾಗಿದ್ದರು. 2015ರಲ್ಲಿ ಸದಸ್ಯರಾಗಿ ಆಯ್ಕೆಯಾಗಿದ್ದು, 2020ರಲ್ಲಿ ಮರು ಆಯ್ಕೆ ಬಯಸಿ ಸ್ಪರ್ಧಿಸಿ ಜಯಗಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts