More

    ಸಿರಿಗೇರಿ ಸಮಗ್ರ ಅಭಿವೃದ್ಧಿಗೆ ಕ್ರಮ

    ಸಿರಿಗೇರಿ: ಗ್ರಾಮದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ, ಪುರಾತನ ಕೆರೆ ಪುನಶ್ಚೇತನ ಸೇರಿದಂತೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದು ಸಿರಗುಪ್ಪ ಶಾಸಕ ಬಿ.ಎಂ.ನಾಗರಾಜ ಹೇಳಿದರು.

    ಇಲ್ಲಿನ ಸರ್ಕಾರಿ ಮಾದರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ(ಬಜಾರ್)ಯ ಎರಡು ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ನನ್ನ ಹತ್ತಿರ ಗ್ರಾಮದ ಸಮಸ್ಯೆಗಳ ಪಟ್ಟಿ ಇದೆ. ಅವುಗಳಿಗೆ ಬೇಕಾದ ಅನುದಾನ ಬಿಡುಗಡೆ ಮಾಡಿಸಿ ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು ಎಂದ ಅವರು, 21 ಲಕ್ಷ ರೂ. ವೆಚ್ಚದಲ್ಲಿ ವಿವೇಕ ಯೋಜನೆಯಡಿ ನಿರ್ಮಿಸುತ್ತಿರುವ ಎರಡು ಕೊಠಡಿಗಳು ಗುಣಮಟ್ಟದಿಂದ ಕೂಡಿರಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

    ಮುಖ್ಯಶಿಕ್ಷಕ ಬಿ.ಆರ್.ಶಿವಕುಮಾರ್, ಪ್ರಮುಖರಾದ ವಿ.ಹನುಮೇಶ್, ಕೆ.ರಾಘವೇಂದ್ರ, ಬಿ.ಮಲ್ಲಯ್ಯ, ಕೆ.ಗರ್ಜಿಲಿಂಗಪ್ಪ, ವಸ್ತ್ರದ್ ಮಂಜುನಾಥ್, ಜಲಾಲಿ ಪೀರ್, ರಾರಾವಿ ವೆಂಕಟೇಶ್, ಎ.ಕೆ.ಗಾದಿಲಿಂಗಪ್ಪ, ಲಿಂಗನಗೌಡ, ಎಚ್.ರುದ್ರಪ್ಪ, ಕಾಳಿ ಎರ‌್ರೆಪ್ಪ, ಎಇಇ ಕಾಂತ್‌ರಾಜ್, ಕರಿಬಸಪ್ಪ, ಸಲೀಂ ಅಹ್ಮದ್, ಎನ್.ಕುಮಾರ್, ಲಕ್ಷ್ಮಣ್ ಭಂಡಾರಿ, ಗೋಡೆ ಚಿನ್ನಪ್ಪ, ಬಿ.ಉಮೇಶ್, ಸೋಮೇಶ್, ಕುಂಬಾರ್ ಬಸವರಾಜ್, ವಿ.ರಮೇಶ್, ಬಿ.ನಾಗರಾಜ್, ಕೆ.ಶಿವಪ್ಪ, ಕೆ.ವೀರೇಶ್, ಆಲಂ ಬಾಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts