More

    ಸಿರಿಗೆರೆಯಲ್ಲಿ ಮಹಾಶಿವರಾತ್ರಿ ಆಚರಣೆ

    ಸಿರಿಗೆರೆ: ಮನುಷ್ಯ ಸಾಂಸಾರಿಕ ಜೀವನದ ಜಂಜಾಟ ಮರೆತು ವರ್ಷಕ್ಕೊಮ್ಮೆಯಾದರೂ ಶಿವನನ್ನು ಆರಾಧಿಸಬೇಕು ಎಂದು ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಬೃಹನ್ಮಠದ ಐಕ್ಯಮಂಟಪದಲ್ಲಿ ಶುಕ್ರವಾರ ಮಹಾ ಶಿವರಾತ್ರಿಯ ಕಾರ್ಯಕ್ರಮದಲ್ಲಿ ಮಾತನಾಡಿ, ಆತ್ಮದ ಅರಿವು ಪಡೆಯಲು ಹಾಗೂ ಆಧ್ಯಾತ್ಮಿಕದ ಕಡೆ ಗಮನ ಹರಿಸಲು ಶಿವರಾತ್ರಿ ಆಚರಣೆ ಪೂರಕವಾಗಿದೆ ಎಂದರು.

    ಜಾಗರಣೆ, ಉಪವಾಸ, ಶಿವನ ನಾಮಸ್ಮರಣೆ ಮಾಡುವುದು ಭಾರತೀಯ ಧಾರ್ಮಿಕ ಪರಂಪರೆಯಾಗಿ ನಡೆದು ಬಂದಿದೆ. ಭಕ್ತಿ ಇಲ್ಲದೇ ಹೋದರೆ ಪೂಜೆಯಲ್ಲಿ ದೃಢವಾದ ನಂಬಿಕೆ ಇಲ್ಲದೇ ನಿರರ್ಥಕವಾಗುತ್ತದೆ ಎಂದು ತಿಳಿಸಿದರು.

    ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್.ಮರುಳಸಿದ್ದಯ್ಯ, ಎಂ.ಎನ್.ಶಾಂತಾ, ಸುರೇಶ್ ಕೇಸಾಪುರ ಇದ್ದರು.

    ವಚನ ಕಂಠಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಂಗೀತ ಶಿಕ್ಷಕ ಹುಬ್ಬಳ್ಳಿಯ ಸಂಗಯ್ಯ ಬಸಯ್ಯ ಸಾಧ್ವಿಮಠ ಬಹುಮಾನ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts