More

    ಕಾಲಕ್ಕೆ ತಕ್ಕಂತೆ ಸಿರಿಗೆರೆ ಅಭಿವೃದ್ಧಿ

    ಸಿರಿಗೆರೆ/ಭರಮಸಾಗರ: ಕಾಲಮಾನಕ್ಕೆ ತಕ್ಕಂತೆ ಸಿರಿಗೆರೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಸಂತಸದ ಸಂಗತಿ ಎಂದು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಸಿರಿಗೆರೆ ಗ್ರಾಮದಲ್ಲಿ ಶನಿವಾರ ಗ್ರಾಮಸೌಧ ಕಟ್ಟಡ ಉದ್ಘಾಟಿಸಿ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾದರೆ ದೇಶ ಪ್ರಗತಿ ಸಾಧಿಸಲು ಸಾಧ್ಯ. ಇಲ್ಲಿನ ಪಂಚಾಯಿತಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದು ಸಂತೋಷ. ಸದಸ್ಯರು ಯಾವುದೇ ಆರೋಪಗಳಿಲ್ಲದಂತೆ ಕೆಲಸ ಮಾಡಿರುವುದು ಅಭಿನಂದನೀಯ ಎಂದರು.

    ಹಿರಿಯ ಗುರುಗಳಾದ ಗುರುಶಾಂತ ರಾಜದೇಶಿಕೇಂದ್ರ ಶ್ರೀಗಳಿಂದ 85 ವರ್ಷಗಳ ಹಿಂದೆ ಆರಂಭವಾಗಿದ್ದ ಕಟ್ಟಡ ಈಗ ಹೊಸ ರೂಪ ಪಡೆದಿದೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಮಠದಿಂದ ವಾಹನ ನೀಡಲಾಗಿದೆ. ಈ ಸೌಲಭ್ಯವನ್ನು ಅಕ್ಕಪಕ್ಕದ ಗ್ರಾಮಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

    ಜನಪ್ರತಿನಿಧಿಗಳು ಸ್ವಾರ್ಥಕ್ಕೆ ಒಳಗಾಗದೆ ಸೇವಾ ಮನೋಧರ್ಮದಿಂದ ಕಾರ್ಯನಿರ್ವಹಿಸಬೇಕು. ಕೆಲವು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಇದೆ. ಹತ್ತಿರದಲ್ಲಿಯೇ ಹರಿಯುವ ಸೂಳೆಕೆರೆಯಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದರು.

    ಸಮೀಪದ ಗೌಡನಕೆರೆ, ಹೊಸಕೆರೆ, ಬುಕ್ಕರಾಯನ ಕೆರೆಗಳ ಹೂಳೆತ್ತುವ ಕೆಲಸವನ್ನು ತ್ವರಿತವಾಗಿ ಆರಂಭಿಸಬೇಕೆಂದು ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ಅವರಿಗೆ ತಿಳಿಸಿದರು.

    ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಯಶಸ್ವಿಯಾಗಿದೆ. ಪ್ರವಾಹ ಸಂತ್ರಸ್ತರಿಗೆ ನೆರವಾಗಿದ್ದು ಈ ಬಾರಿಯ ವಿಶೇಷ ಎಂದರು.

    ಜಿಪಂ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಮಾತನಾಡಿ, ಜಲಾಮೃತ ಯೋಜನೆಯಡಿ ಕೆರೆಹೂಳೆತ್ತುವ ಕೆಲಸ ನಡೆಯುತ್ತಿವೆ ಎಂದು ತಿಳಿಸಿದರು.

    ಜಿಪಂ ಉಪ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, 40 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದೆ. ಪಂಚಾಯಿತಿಯಲ್ಲಿ ಸರ್ವರಿಗೂ ಸಕಲ ಸೌಲಭ್ಯ ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದರು.

    ಗ್ರಾಪಂ ಮಾಜಿ ಅಧ್ಯಕ್ಷೆ ಸುಮಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ಕೃಷ್ಣನಾಯಕ್, ಪಿಡಿಒ ನಾಸಿರ್ ಪಾಷಾ, ಎಂ.ಬಸವರಾಜಪ್ಪ, ಎಂ.ಜಿ.ದೇವರಾಜ್ ಮಾತನಾಡಿದರು.

    ಗ್ರಾಪಂ ಅಧ್ಯಕ್ಷೆ ರೂಪಾ ಪ್ರಕಾಶ್, ಪಿಡಿಒ ಬಿ.ಲೋಕೇಶ್, ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಪಾತಲಿಂಗಪ್ಪ, ಮಲ್ಲಿಕಾರ್ಜುನ್, ಜಿ.ಡಿ.ರಾಮಪ್ಪ, ಎಸ್.ಪ್ರಕಾಶ್, ಓ.ತಿಪ್ಪೇಶ್, ಕೆಂಚಮ್ಮ, ತಿಪ್ಪಮ್ಮ, ಲತಾರಾಜು, ನಾಗರಾಜ್, ಎಚ್.ಅನಿತಾ, ಎಚ್.ಎಸ್.ನಾಗವೇಣಿ, ಎನ್.ಅವಿನಾಶ್, ಸವಿತಾ, ಮಂಜುಳಾ ಇದ್ದರು.

    ಆಗಸ್ಟ್‌ನಲ್ಲಿ ಭರಮಸಾಗರಕ್ಕೆ ನೀರು: ಜಗಳೂರಿನಲ್ಲಿ ತರಳಬಾಳು ಹುಣ್ಣಿಮೆ ನಡೆದಾಗ ಅಲ್ಲಿಂದ ಸತತವಾಗಿ 2 ವರ್ಷ ಸರ್ಕಾರದ ಮೇಲೆ ಒತ್ತಡ ತಂದು ನೀರಾವರಿಯ ಎರಡು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗಿದೆ. ಎರಡೂ ಯೋಜನೆಗಳು ಈಗಾಗಲೇ ಕಾಮಗಾರಿ ಆರಂಭಿಸಿವೆ. ಆಗಸ್ಟ್‌ನಲ್ಲಿ ಭರಮಸಾಗರಕ್ಕೆ ನೀರು ಬರುವ ನಿರೀಕ್ಷೆ ಇದೆ ಎಂದು ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts