More

    ಹೂ ಕಟ್ಟುತ್ತೇವೆಯೇ ವಿನಃ ದ್ವೇಷವನ್ನಲ್ಲ; ಹೂಗಾರ ಸಮಾಜದ ರಾಜ್ಯ ಮುಖಂಡ ಶಂಕರ ಹೇಳಿಕೆ


    ಸಿರವಾರದಲ್ಲಿ ಮಾದಯ್ಯ ಜಯಂತ್ಯುತ್ಸವ

    ಸಿರವಾರ: ಹೂಗಾರ ಸಮಾಜವು ಎಲ್ಲ ಸಮುದಾಯದವರ ಜತೆ ಪ್ರೀತಿ, ವಿಶ್ವಾಸದೊಂದಿಗೆ ಹೂ ಕಟ್ಟುತ್ತೇವೆಯೇ ಹೊರತು ದ್ವೇಷವನ್ನಲ್ಲ ಎಂದು ಹೂಗಾರ ಸಮಾಜದ ರಾಜ್ಯ ಮುಖಂಡ ಶಂಕರ ಹೂಗಾರ ಬೆಂಗಳೂರು ಹೇಳಿದರು.

    ಪಟ್ಟಣದ ಸಜ್ಜಲಶ್ರೀ ಶರಣಮ್ಮನವರ ಆಶ್ರಮದಲ್ಲಿ ಸಿರವಾರ ತಾಲೂಕು ಹೂಗಾರ ಸಮಾಜದಿಂದ ಪಂ.ಸಿದ್ದರಾಮ ಜಂಬಲದಿನ್ನಿ ಹೂಗಾರ ವೇದಿಕೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯ ಜಯಂತ್ಯುತ್ಸವದಲ್ಲಿ ಮಾತನಾಡಿ, ಪೂಜೆ, ಪುನಸ್ಕಾರ, ಶುಭ ಮತ್ತು ಅಶುಭ ಕಾರ್ಯಗಳಿಗೆ ಮುಂಚೂಣಿಯಲ್ಲಿರುವ ಹೂಗಾರ ಸಮಾಜ ಹಲವು ವರ್ಷಗಳಿಂದ ಶೋಷಣೆಗೊಳಗಾಗಿದೆ ಎಂದರು.

    ಸಮಾಜ ರಾಜಕೀಯದಿಂದ ಹಿಂದುಳಿದಿದೆ. ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆ ಹೊಂದಿರುವ ಹೂಗಾರ ಸಮಾಜವನ್ನು ಗುರುತಿಸಿ ರಾಜಕೀಯ ಮುನ್ನೆಲೆಗೆ ತರಬೇಕು. ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು. ಸಮಾಜ ಸಂಘಟಿತವಾದಗ ಮಾತ್ರ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ ಎಂದರು.

    ಮಾದಯ್ಯನವರು ತಮ್ಮ ಕಾಯಕದ ಮೂಲಕ ಸಮಾಜವನ್ನು ಗುರುತಿಸುವಂತೆ ಮಾಡಿ ಹೂಗಾರ ಮಾದಯ್ಯನವರಿಗೆ ಸಲ್ಲುತ್ತದೆ. ಅವರ ತತ್ವ ಆದರ್ಶಗಳು ಇಂದಿನ ಪೀಳಿಗೆಗೆ ಅಗತ್ಯವಾಗಿವೆ. ಜನರು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

    ಪಟ್ಟಣದ ನೀರಾವರಿ ಇಲಾಖೆಯಿಂದ ಬಸವ ವೃತ್ತದ ಸಜ್ಜಲಶ್ರೀ ಶರಣಮ್ಮನವರ ಆಶ್ರಮದವರೆಗೆ ಮಾದಯ್ಯನವರ ಭಾವಚಿತ್ರವನ್ನು ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ವೆಂಕಟೇಶ ಹೂಗಾರ ರಾಯಚೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೀಲಗಲ್ ಬೃಹನ್ಮಠದ ಪೀಠಾಧಿಪತಿ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ಬಸವರಾಜಪ್ಪ ತಾತ ಕಲ್ಲಂಗೇರಾ, ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ಮಹಾಂತೇಶ ಪಾಟೀಲ್ ಅತ್ತನೂರು, ಗಂಗಾಧರ ನಾಯಕ, ಬಸವರಾಜ ಹೂಗಾರ, ಜೆ.ಶರಣಪ್ಪ, ಸೂರ್ಯಕಾಂತ ಪುಲಾರೆ, ಮಾನಪ್ಪ ಹೂಗಾರ, ಡಾ.ಶಿವಕುಮಾರ, ಬಸವರಾಜ ನುಗಡೋಣಿ, ಡಾ.ಎಂ.ಭೀಮಣ್ಣ, ಎನ್.ಉದಯಕುಮಾರ್ ಸಾಹುಕಾರ್, ಕೆ.ಶಾಂತಪ್ಪ, ಬಸವರಾಜಪ್ಪ, ಈಶಪ್ಪ, ಮಲ್ಲಣ್ಣ ಹೂಗಾರ, ಮಲ್ಲಪ್ಪ ಸಾಹುಕಾರ್, ಭೀಮಣ್ಣ, ಮಲ್ಲಣ್ಣ, ಪಂಪಾಪತಿ, ಶಶಿಧರ, ಬಸವರಾಜ ಪೋತ್ನಾಳ, ಚುಕ್ಕಿ ಉಮಾಪತಿ ಸಾಹುಕಾರ್, ಶಿವಶರಣರ ಸಾಹುಕಾರ್ ಅರಕೇರಿ, ರಮೇಶ ದರ್ಶನಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts