More

    ಒಳಪಂಗಡಗಳು ಸಂಕುಚಿತ ಭಾವದಿಂದ ಹೊರಬರಲಿ

    ಸಿರಗುಪ್ಪ: ಪ್ರತಿಯೊಬ್ಬರೂ ಅಷ್ಟಾವರಣ, ಷಟ್‌ಸ್ಥಳ, ಪಂಚಾಚಾರ್ಯ ಅಳವಡಿಸಿಕೊಳ್ಳಲು ಅಂಗಲಿಂಗ ಸಾಧನೆ ಮಾಡಬೇಕು ಎಂದು ಹಂಪಿ ಹೇಮಕೂಟದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಮುಪ್ಪಿನ ಬಸವಲಿಂಗ ಶ್ರೀಗಳು ಹೇಳಿದರು.

    ನಗರದಲ್ಲಿ ಲಿಂ.ಶರಣೆ ಪುಟ್ಟಮ್ಮ ಮತ್ತು ಲಿಂ.ಶರಣ ಬಸವರಾಜಪ್ಪ ಅಜ್ಜಂಪುರಶೆಟ್ರು ಸೇವಾಟ್ರಸ್ಟ್ ಮತ್ತು ಬಸವಬಳಗ ಗುರುವಾರ ಏರ್ಪಡಿಸಿದ್ದ 17ನೇ ಶರಣತತ್ವ ಕಮ್ಮಟ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಲಿಂಗಪೂಜೆ, ಲಿಂಗಾಚರಣೆಗಳಿಂದ ಮಾತ್ರ ಲಿಂಗಾಯತ ಧರ್ಮ ಉಳಿಯಲು ಸಾಧ್ಯ. ಪ್ರಸ್ತುತ ಲಿಂಗಾಯತ ಧರ್ಮಗಳಲ್ಲಿನ ಒಳಪಂಗಡಗಳ ಬಗ್ಗೆ ಸಂಕುಚಿತ ಭಾವ ಹೋಗಬೇಕು. ಎಲ್ಲರೂ ಒಗ್ಗಟ್ಟಾದಾಗ ಮಾತ್ರ ಲಿಂಗಾಯತ ಧರ್ಮ ಪ್ರಬಲವಾಗಲು ಸಾಧ್ಯ. ಇಲ್ಲದಿದ್ದರೆ ರಾಜಕೀಯ ಸ್ಥಾನಮಾನ ದೊರೆಯಲ್ಲ. ಮುಂದಿನ ಪೀಳಿಗೆ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಲಿಂಗಪೂಜೆ ಹಾಗೂ ಲಿಂಗಾಯತ ಧರ್ಮ, ಶರಣರ ಬಗ್ಗೆ ತಿಳಿಸುವ ಮೂಲಕ ಭೌತಿಕವಾಗಿ ಬದಲಾಗುವಂತೆ ಮಾಡಿದರೆ ಅಂತರಂಗಿಕವಾಗಿ ಬದಲಿಸಲು ಸಾಧ್ಯ ಎಂದರು.

    ಮಾನವನಲ್ಲಿ ಅಡಗಿರುವ ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ಎನ್ನುವ ಅರಿಷಡ್ವರ್ಗಗಳಿಗೆ ಸಂಸ್ಕಾರ ನೀಡುವುದನ್ನು ಶರಣತತ್ವದಲ್ಲಿ ತಿಳಿಸಲಾಗಿದೆ. ಇಷ್ಟಲಿಂಗ ಅನುಸಂಧಾನ ಶಿವಯೋಗವನ್ನು ಮಾಡಿಕೊಳ್ಳುವ ಮೂಲಕ ಅಂತರಂಗ ಶುದ್ಧಿ ಹೊಂದಬೇಕೆಂದು ತಿಳಿಸಿದರು.

    ಹಾಲ್ವಿಯ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಾಂತ ಸ್ವಾಮೀಜಿ, ವಳಬಳ್ಳಾರಿಯ ಸುವರ್ಣಗಿರಿ ಮಠದ ಸಿದ್ಧಲಿಂಗ ಸ್ವಾಮೀಜಿ, ಗುರುಬಸವ ಮಹಾಮಠದ ಬಸವಭೂಷಣ ಸ್ವಾಮೀಜಿ, ಬಸವಬಳಗದ ಬಸವರಾಜ ಶರಣರು, ಸಂಸದ ಕರಡಿ ಸಂಗಣ್ಣ, ಶಾಸಕ ಬಿ.ಎಂ.ನಾಗರಾಜ ಮಾತನಾಡಿದರು.ಲಿಂಗಾಯತ ಸ್ವತಂತ್ರ ಧರ್ಮ ವಿಷಯದ ಕುರಿತು ಬೈಲಹೊಂಗಲದ ಎಂ.ಎಂ.ಸಂಗೊಳ್ಳಿ ಉಪನ್ಯಾಸ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts