More

    ಸಂತೆ ಮಾರುಕಟ್ಟೆ ಸ್ಥಳಾಂತರಕ್ಕೆ ವಿರೋಧ

    ಸಿಂಧನೂರು: ಕುರಿ ಮತ್ತು ಜಾನುವಾರು ಸಂತೆ ಮಾರುಕಟ್ಟೆ ಸ್ಥಳಾಂತರ ಮಾಡುವ ತೀರ್ಮಾನ ಕೈಬಿಡಲು ಒತ್ತಾಯಿಸಿ ಕುರಿ ಮತ್ತು ಜಾನುವಾರು ಸಂತೆ ಬಳಕೆದಾರರ ವೇದಿಕೆ ನಡೆಸುತ್ತಿರುವ ಧರಣಿಗೆ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಬೆಂಬಲಿಸಿ ಗುರುವಾರ ಪ್ರತಿಭಟನೆ ನಡೆಸಿತು.

    ನಗರದ ಕುಷ್ಟಗಿ ರಸ್ತೆಯ ಸರ್ವೇ ನಂ.959/ಪಿ8 ಟಿಎಪಿಸಿಎಂಎಸ್‌ಗೆ ಸೇರಿದ ಭೂಮಿಯಲ್ಲಿ ಸಂತೆ ಮಾರುಕಟ್ಟೆ ನಡೆಯುತ್ತಿಲ್ಲ. ರೈತರಿಗೆ ಸೇರಿದ ಈ ಭೂಮಿ ಕೃಷಿಯೇತರ ವ್ಯವಹಾರ ಉದ್ದೇಶಕ್ಕೆ ಬಳಸಿಕೊಳ್ಳುವ ತಯಾರಿ ನಡೆಸಲಾಗುತ್ತಿದೆ. ಕಳೆದ ವರ್ಷದಿಂದ ವೇದಿಕೆ ಪ್ರತಿಭಟನೆ ನಡೆಸುತ್ತಾ ಬಂದಿದ್ದರೂ ಬೇಡಿಕೆ ಈಡೇರಿಸಿಲ್ಲ. ಹಳೇ ಸಂತೆ ಮಾರುಕಟ್ಟೆಯನ್ನು ಪುನಃ 30 ವರ್ಷ ಲೀಜ್ ಅಗ್ರಿಮೆಂಟ್ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು. ನಗರ ಅಧ್ಯಕ್ಷ ದೌಲಸಾಬ್ ದೊಡ್ಡಮನಿ, ನಗರ ಉಪಾಧ್ಯಕ್ಷ ಸೋನು ವಾಲ್ಮೀಕಿ, ಹುಸೇನ, ರಾಘವೇಂದ್ರ, ನಿಂಗಪ್ಪ, ವೀರೇಶ, ಗದ್ದೆಪ್ಪ, ಮರಿಯಪ್ಪ ಬಂಡಿ, ಹನುಮೇಶ, ಶೇಕ್ಷಾವಲಿ, ಮೋಹಿನ್‌ಪಾಷಾ, ರಾಮಣ್ಣ, ಚಾಂದಪಾಷಾ, ಮುಸ್ತಫಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts