More

    ಪ್ರತಿ ಹನಿಯೂ ಜೀವ ರಕ್ಷಣೆಗೆ ಸಹಕಾರಿ

    ಸಿಂಧನೂರು: ನಗರದ ಮಹಾತ್ಮಾಗಾಂಧಿ ವೃತ್ತದಲ್ಲಿ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್‌ನಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಕುಡಿಯುವ ನೀರಿನ ಅರವಟಿಗೆಯನ್ನು ಸೋಮವಾರ ಉದ್ಘಾಟಿಸಲಾಯಿತು.

    ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಬೇಸಿಗೆಯಲ್ಲಿ ಜನಸಾಮಾನ್ಯರಿಗೆ ಕುಡಿಯುವ ನೀರಿನ ದಾಹ ನೀಗಿಸಲು ಅರವಟಿಗೆ ಆರಂಭಿಸಿರುವುದು ಉತ್ತಮ ಕೆಲಸ. ನೀರು ಅಮೂಲ್ಯವಾಗಿದ್ದು, ಪ್ರತಿಯೊಂದು ಹನಿಯೂ ಜೀವ ರಕ್ಷಣೆಗೆ ಸಹಕಾರಿ. ಪ್ರಾಣಿ, ಪಕ್ಷಿಗಳಿಗೂ ನೀರೊದಗಿಸುವ ಕೆಲಸವಾಗಬೇಕು. ನೀರು ಪೋಲು ಮಾಡಬಾರದು ಎಂದು ಸಲಹೆ ನೀಡಿದರು.

    ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ, ಹಿರಿಯ ವಕೀಲ ಎಂ.ಅಮರೇಗೌಡ, ಮುಖಂಡ ವೀರೇಶ ಯಡಿಯೂರಮಠ, ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂತೋಷ ಅಂಗಡಿ ಮಾತನಾಡಿದರು. ವೆಂಕಟಗಿರಿ ಕ್ಯಾಂಪ್ ಸದಾನಂದ ಶರಣರು, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಅಮರಯ್ಯಸ್ವಾಮಿ ಅಲಬನೂರು, ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ, ಕಾರುಣ್ಯ ಆಶ್ರಮದ ಆಡಳಿತಾಧಿಕಾರಿ ಚನ್ನಬಸಯ್ಯಸ್ವಾಮಿ ಹರೇಟನೂರು, ಮುಖಂಡರಾದ ನಾಗರಾಜ ಗಸ್ತಿ, ತಿಮ್ಮಣ್ಣ ರಾಮತ್ನಾಳ, ಸಿದ್ದು ಹೂಗಾರ, ಮಂಜುನಾಥ ಕಲಾಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts