More

    ಸಿಂಧನೂರಲ್ಲಿ ಬಟ್ಟೆ ಖರೀದಿಗೆ ಬಂದಾಕೆಗೆ ಕರೊನಾ, ಅಂಗಡಿಯ ಇಬ್ಬರು ಕೆಲಸಗಾರರಿಗೆ ತಗುಲಿದ ಸೋಂಕು

    ಸಿಂಧನೂರು: ನಗರದಲ್ಲಿ ಬುಧವಾರ ಐದು ಕರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಬೆಂಗಳೂರಿನಿಂದ ಆಗಮಿಸಿದ್ದ 38 ವರ್ಷದ ಮಹಿಳೆ, 15 ವರ್ಷದ ಆಕೆಯ ಮಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಜೂ.26 ರಂದು ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಸದ್ಯ ಕರೊನಾ ದೃಢಪಟ್ಟಿದ್ದು, ಕಾರಟಗಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತೆರಳಿದ್ದ ಬಾಲಕಿಯನ್ನು ಮರಳಿ ಕರೆಸಿಕೊಂಡು ರಾಯಚೂರು ರಿಮ್ಸ್‌ಗೆ ಕಳಿಸಲಾಗಿದೆ.

    ನಗರದ ಬಟ್ಟೆ ಅಂಗಡಿಯೊಂದಕ್ಕೆ ಬಂದಿದ್ದ ಹುಲ್ಲೂರು ಗ್ರಾಮದ ಮಹಿಳೆಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅಂಗಡಿಯಲ್ಲಿ ಕೆಲಸ ಮಾಡುವವರ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಈಗ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಗರದ ಕೋಟೆ ಏರಿಯಾದ ಮಹಿಳೆ, ಜವಳಗೇರಾ ಹಾಗೂ ಗುಂಜಳ್ಳಿ ವ್ಯಕ್ತಿಗಳಿಗೆ ಕರೊನಾ ತಗುಲಿದೆ. ಪಾಸಿಟಿವ್ ಬಂದವರ ಮನೆಯ ಸುತ್ತಲೂ ಸೀಲ್‌ಡೌನ್ ಮಾಡಲಾಗಿದೆ. ಬಟ್ಟೆ ಅಂಗಡಿಗೆ ಭೇಟಿ ನೀಡಿರುವ ಜನರು ಕೋವಿಡ್-19 ಕುರಿತ ಸ್ವಾಬ್ ಪರೀಕ್ಷೆ ಮಾಡಿಕೊಳ್ಳಬೇಕು. ಗರ್ಭಿಣಿ ಅಥವಾ ವಯೋವೃದ್ಧರಿದ್ದಲ್ಲಿ ಮಾಹಿತಿ ನೀಡಬೇಕು. ಜೂ.20 ಮತ್ತು 21ರಂದು ವೆಂಕಟೇಶ್ವರ ಕಾಲನಿಯಲ್ಲಿ ನಡೆದ ಮದುವೆಗೆ ಆಗಮಿಸಿದ್ದ ಮಸ್ಕಿ ಸ್ಟಾಪ್ ನರ್ಸ್‌ಗೆ ವೈರಸ್ ತಗುಲಿದ್ದು, ಮದುವೆಗೆ ಬಂದವರು ಸ್ವಯಂ ಪ್ರೇರಿತರಾಗಿ ತಾಲೂಕು ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ಮಂಜುನಾಥ ಭೋಗಾವತಿ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts