More

    ಮಣಿಪುರ ಮಹಿಳೆಯರ ಮೇಲೆ ಪೈಶಾಚಿಕ ಕೃತ್ಯ

    ಸಿಂಧನೂರು: ಮಣಿಪುರ ರಾಜ್ಯದ ಕಾಂಗ್‌ಪೋಪಿ ಜಿಲ್ಲೆಯಲ್ಲಿ ಕುಕಿ ಸಮುದಾಯದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಬೆತ್ತಲೆ ಮೆರವಣಿಗೆ ನಡೆಸಿರುವ ಪೈಶಾಚಿಕ ಕೃತ್ಯ ಖಂಡಿಸಿ ಸಿಪಿಐ(ಎಂಎಲ್) ಲಿಬರೇಷನ್ ಪಾರ್ಟಿಯಿಂದ ಶುಕ್ರವಾರ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

    ಪ್ರಧಾನಿಯವರು ಇಂದಿಗೂ ಮಣಿಪುರ ಹಿಂಸಾಚಾರದ ಬಗ್ಗೆ ಮೌನ ಕಾಯ್ದುಕೊಂಡಿರುವುದು ಅಪರಾಧ ಹೆಚ್ಚಳಕ್ಕೆ ಕಾರಣವಾಗಿದೆ. ಇದು ನಿಜವಾಗಿಯೂ ಅಮಾನವೀಯ ಸಂಗತಿ ಎಂದು ಮೋದಿಯವರು ಭಾವಿಸಿದರೆ ಮತ್ತು ಮಣಿಪುರದ ಹೆಣ್ಣುಮಕ್ಕಳಿಗೆ ನ್ಯಾಯದ ಭರವಸೆ ನೀಡುವುದೇ ಆದರೆ, ಆಡಳಿತದ ಸಂಪೂರ್ಣ ಕುಸಿತಕ್ಕಾಗಿ ಮಣಿಪುರ ಸಿಎಂ ಮತ್ತು ಕೇಂದ್ರ ಗೃಹ ಸಚಿವರ ರಾಜೀನಾಮೆ ಪಡೆಯಬೇಕು.

    Cಈ ಕೃತ್ಯದಲ್ಲಿ ಭಾಗಿಯಾದ ಎಲ್ಲ ದುಷ್ಕರ್ಮಿಗಳನ್ನು ತಕ್ಷಣ ಗುರುತಿಸಿ ಬಂಧಿಸಬೇಕು. ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಯಿತು.

    ಇದನ್ನೂ ಓದಿ: ಬ್ರೆಜಿಲ್‌ನಲ್ಲಿ ಪ್ರತಿ ಗಂಟೆಗೆ ಎಂಟಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ: ಎಫ್‌ಬಿಎಸ್‌ಪಿ ಸಂಸ್ಥೆ ವರದಿ ಪ್ರಕಟ

    ಸಿಪಿಐ(ಎಂಎಲ್) ಲಿಬರೇಷನ್ ರಾಜ್ಯ ಸಮಿತಿ ಸದಸ್ಯರಾದ ಲೇಖಾ ಬೆಂಗಳೂರು, ನಾಗರಾಜ ಪೂಜಾರ್, ಮುಖಂಡರಾದ ಬಸವರಾಜ ಕೊಂಡೆ, ಪಂಪಾಪತಿ ಬೆಳಗುರ್ಕಿ, ಆರ್.ಎಚ್.ಕಲಮಂಗಿ, ಆಟೋ ಯೂನಿಯನ್ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts