More

    ಕರಡು ಅಧಿಸೂಚನೆ ಹಿಂಪಡೆಗೆ ಒತ್ತಾಯ

    ಸಿಂಧನೂರು: ಎಸ್‌ಡಿಎ ಮತ್ತು ಗ್ರಾಮಲೆಕ್ಕಿಗರ ಜ್ಯೇಷ್ಠತಾ ಪಟ್ಟಿ ಒಗ್ಗೂಡಿಸಿ ವೃಂದ ಮತ್ತು ನಿಯಮಗಳನ್ನು ತಿದ್ದುಪಡಿ ಮಾಡಲು ಕಂದಾಯ ಇಲಾಖೆ ಕರಡು ಅಧಿಸೂಚನೆ ಹೊರಡಿಸಿದ್ದು, ಅದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕ್ರಾಂತಿಕಾರಿ ಯುವಜನ ರಂಗದಿಂದ ತಾಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

    ಸಂವಿಧಾನದ ಪ್ರಕಾರ ಎಸ್ಸಿ, ಎಸ್ಟಿ ಸರ್ಕಾರಿ ನೌಕರರಿಗೆ ನೇಮಕಾತಿ ಮತ್ತು ಪದೋನ್ನತಿ ವಿಚಾರದಲ್ಲಿ ಮೀಸಲಾತಿ ನಿಗದಿಪಡಿಸಿ, ಆಯಾ ಇಲಾಖೆಯ ಜ್ಯೇಷ್ಠತಾ ಪಟ್ಟಿ ಆಧಾರದ ಮೇರೆಗೆ ರೋಸ್ಟರ್ ನಿಯಮಾವಳಿಯಡಿ ಮೀಸಲಾತಿ ಆಧಾರದಂತೆ ಪದೋನ್ನತಿ ನೀಡಲಾಗುತ್ತದೆ. ಹಾಲಿ ಕಂದಾಯ ಇಲಾಖೆಯಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ.15, ಪರಿಶಿಷ್ಟ ಪಂಗಡದ ನೌಕರರಿಗೆ ಶೇ.3ರಷ್ಟು ಮೀಸಲಾತಿಯಂತೆ ಕ್ರಮವಹಿಸಲಾಗಿದೆ. ಗ್ರಾಮಲೆಕ್ಕಾಧಿಕಾರಿ ವೃಂದದಲ್ಲೂ ಮೀಸಲಾತಿ ನೀಡಲಾಗಿದೆ. ಆದರೆ, ಹಾಲಿ ದ್ವಿ.ದ.ಸ ಮತ್ತು ಗ್ರಾಮ ಲೆಕ್ಕಾಧಿಕಾರಿ ಜ್ಯೇಷ್ಠತಾ ಪಟ್ಟಿ ಒಗ್ಗೂಡಿಸಿ, ಸಂಯುಕ್ತ ಜ್ಯೇಷ್ಠತಾ ಪಟ್ಟಿ ಮಾಡಿದ್ದಲ್ಲಿ ದ್ವಿ.ದ.ಸ ವೃಂದದಿಂದ ಮತ್ತು ಗ್ರಾಮ ಲೆಕ್ಕಾಧಿಕಾರಿ ಹುದ್ದೆಯಿಂದ ನೀಡಲಾಗುತ್ತಿದ್ದ ಮೀಸಲಾತಿ ಕಸಿದುಕೊಂಡಂತಾಗುತ್ತದೆ. ಅಲ್ಲದೇ ಈ ಕರಡು ಅಧಿಸೂಚನೆ ದಲಿತ ಸಮುದಾಯದ ವಿರೋಧಿಯಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts