More

    ಆತ್ಮಕತೆಗಳಲ್ಲಿ ಚಾರಿತ್ರಿಕ ಸತ್ಯಾಂಶ

    ಸಿಂಧನೂರು: ನಿರ್ಲಕ್ಷಿತ ಸಮುದಾಯಗಳು ಹಸಿವು ಹಾಗೂ ಬಡತನದಿಂದ ಬಳಲುತ್ತಿದ್ದು, ಬದುಕಿನಲ್ಲಿ ಅನುಭವಿಸಿದ ನೋವು, ಅನ್ಯಾಯದ ಪ್ರತೀಕವಾಗಿ ಕಿಶೋರ್ ಕುಮಾರರ ನಸಾಬ್ ಆತ್ಮಕತೆ ಇದೆ ಎಂದು ಗಂಗಾವತಿ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಡಾ.ದೇವೇಂದ್ರಪ್ಪ ಜಾಜಿ ಹೇಳಿದರು.

    ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ನಸಾಬ್ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಲಂಬಾಣಿ ಸಮುದಾಯದ ಬದುಕು, ಅವರು ಅನುಭವಿಸುತ್ತಿರುವ ಯಾತನೆ, ಅವರ ವೃತ್ತಿ ಹಾಗೂ ಹೋರಾಟದ ಅನುಭವಗಳನ್ನು ಕಿಶೋರ್ ಕುಮಾರ್ ಆತ್ಮಕತೆಯಲ್ಲಿ ದಾಖಲಿಸಿದ್ದಾರೆ. ಕನ್ನಡದಲ್ಲಿ ಆತ್ಮಕತೆಗಳು ಅತ್ಯಂತ ವಿರಳ, ಅದರಲ್ಲೂ ದಲಿತ ಸಂವೇದನಯುಳ್ಳ ಆತ್ಮಕಥೆಗಳು ಇನ್ನೂ ಕಡಿಮೆ. ಕನ್ನಡದ ದಲಿತ ಆತ್ಮಕಥೆಗಳನ್ನು ಅಲಕ್ಷಿಸಲಾಗಿದೆ.ಜನಮುಖಿಯುಳ್ಳ ಆತ್ಮಕತೆಗಳು ಚಾರಿತ್ರಿಕ ಸತ್ಯಾಂಶಗಳು ಬಿಂಬಿಸುತ್ತದೆ ಎಂದರು.


    ಕನ್ನಡ ಸಹಾಯಕ ಪ್ರಾಧ್ಯಾಪಕ ಕೆ.ಖಾದರ್ ಬಾಷಾ ಮಾತನಾಡಿ, ಮಹಿಳೆಯರು ಅತ್ಯಂತ ಅವಮಾನಯುತವಾಗಿ ಬದುಕು ಸಾಗಿಸುತ್ತಿದ್ದು, ಅವರ ಆತ್ಮಕಥೆನಗಳು ಬರಬೇಕೆಂದರು. ಚಲನಚಿತ್ರ ನಿರ್ದೇಶಕ ಪೃಥ್ವಿರಾಜ್, ಪ್ರಾಚಾರ್ಯ ಡಾ.ಸಿ.ಬಿ.ಚಿಲ್ಕರಾಗಿ, ಪ್ರಾಧ್ಯಾಪಕರಾದ ಶಿವಯ್ಯ, ಬಸವರಾಜ ತಡಕಲ್, ಸಂಗನಗೌಡ ಪಾಟೀಲ್, ಹನುಮನಗೌಡ, ವಿಶ್ವನಾಥ ಪಾಟೀಲ್, ಡಾ.ಹುಲಿಯಪ್ಪ, ಡಾ.ಪರಶುರಾಮ ಕಟ್ಟಿಮನಿ, ಮಲ್ಲಯ್ಯ ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts