More

    ರಾಜಕೀಯ ಎದುರಾಳಿಗಳ ಹಣಿಯಲು ಯತ್ನ

    ಸಿಂಧನೂರು: ಜಾರಿ ನಿರ್ದೇಶನಾಲಯದಿಂದ (ಇಡಿ) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ನಗರದ ತಹಸಿಲ್ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್‌ನಿಂದ ಮಂಗಳವಾರ ಮೌನ ಪ್ರತಿಭಟನೆ ನಡೆಸಲಾಯಿತು.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಮಾತನಾಡಿ, ಕೇಂದ್ರ ಸರ್ಕಾರ ರಾಜಕೀಯ ಎದುರಾಳಿಗಳನ್ನು ಹಣಿಯಲು ಇಡಿ, ಸಿಬಿಐ, ಐಟಿಯಂಥ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಂಸದ ರಾಹುಲ್ ಗಾಂಧಿಯನ್ನು ಇಡಿ 55 ಗಂಟೆ ವಿಚಾರಣೆ ನಡೆಸಿದೆ. ಇದೀಗ ಸೋನಿಯಾ ಗಾಂಧಿರನ್ನು ವಿಚಾರಣೆಗೆ ಒಳಪಡಿಸಿದೆ. ಇಂಥ ಬೆದರಿಕೆಗಳಿಗೆ ಕಾಂಗ್ರೆಸ್ ನಾಯಕರು ಹೆದರುವುದಿಲ್ಲ ಎಂದರು.

    ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಫ್‌ಐಆರ್ ಆಗಿಲ್ಲ. ಆದರೂ, ದುರುದ್ದೇಶದಿಂದ ವಿಚಾರಣೆ ನಡೆಸಲಾಗುತ್ತಿದೆ. ಇದರಲ್ಲಿ ಯಾವ ಅವ್ಯವಹಾರವೂ ಆಗಿಲ್ಲ. ಗಾಂಧಿ ಕುಟುಂಬ ಮೊದಲಿನಿಂದಲೂ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ ಎಂದು ಬಸನಗೌಡ ಬಾದರ್ಲಿ ತಿಳಿಸಿದರು. ಪ್ರಮುಖರಾದ ಶಿವಕುಮಾರ ಜವಳಿ, ಎಚ್.ಎನ್.ಬಡಿಗೇರ, ವೆಂಕಟೇಶ ರಾಗಲಪರ್ವಿ, ಶರಣಯ್ಯಸ್ವಾಮಿ, ಅಮರೇಶ ಗಿರಿಜಾಲಿ, ಯೂನೂಸ್ ಪಾಷಾ ದಢೇಸುಗೂರು, ಚನ್ನಪ್ಪ ಕುಂಬಾರ, ಖಾಜಾಸಾಬ್ ರೌಡಕುಂದ, ಮಹಿಳಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷೆ ಹಂಪಮ್ಮ ವಲ್ಕಂದಿನ್ನಿ, ಉಪಾಧ್ಯಕ್ಷೆ ಇಂದುಮತಿ, ನಗರ ಘಟಕದ ಅಧ್ಯಕ್ಷೆ ಆಯಿಷಾ ಬೇಗಂ, ನೀಲಮ್ಮ, ಸನಾ ಕೌಸರ್, ಯಂಕನಗೌಡ ಗಿಣಿವಾರ, ವೀರರಾಜು, ಹನುಮಂತ ಕರ್ನಿ, ಯಲ್ಲಪ್ಪ ಉಪ್ಪಲದೊಡ್ಡಿ, ವೆಂಕಟರಡ್ಡಿ, ಪ್ರಭು ದೇವರಗುಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts