More

    ಬೆಂಕಿ ಹಚ್ಚಿದವರ ಬಂಧಿಸಿ; ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೂಚನೆ

    ಸಿಂಧನೂರು: ತಾಲೂಕಿನ ಗಾಂಧಿನಗರದಲ್ಲಿ 15 ಬಣವೆ, 4 ಎಮ್ಮೆಗಳ ದಹನಕ್ಕೆ ಕಾರಣರಾದವರ ಬಂಧನಕ್ಕೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸೂಚಿಸಿದರು.

    ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ, ಮಾತನಾಡಿದರು. ದುಷ್ಕರ್ಮಿಗಳ ಈ ಕೃತ್ಯದಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಈಗಾಗಲೇ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ವರದಿ ತಯಾರಿಸಿದ್ದಾರೆ. ಈ ವರದಿಯನ್ವಯ ಸಚಿವರ ಗಮನಕ್ಕೆ ತಂದು ಸಿಎಂ ಪರಿಹಾರ ನಿಧಿಯಿಂದ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

    ಜಿಪಂ ಸದಸ್ಯ ಅಮರೇಗೌಡ ವಿರೂಪಾಪುರ, ಘಟನೆ ಬಗ್ಗೆ ಸಂಸದರಿಗೆ ವಿವರಿಸಿದರು. ತುಂಗಭದ್ರಾ ಕಾಡಾ ಅಧ್ಯಕ್ಷ ಆರ್.ಬಸನಗೌಡ ತುರ್ವಿಹಾಳ, ಕೃಷಿ ಇಲಾಖೆ ನಿರ್ದೇಶಕ ಜಯಪ್ರಕಾಶ, ತಹಸೀಲ್ದಾರ್ ಮಂಜುನಾಥ ಭೋಗಾವತಿ, ನಯೋಪ್ರಾ ಸದಸ್ಯರಾದ ಜಡಿಯಪ್ಪ ಹೂಗಾರ, ರೇಣುಕಪ್ಪ ಬಸಾಪುರ, ರಾಮಚಂದ್ರರಾವ, ಎಂ.ವೆಂಕಟೇಶ್ವರಾವ, ನಂದಿಗಂ ವೆಂಕಟರಾವ, ಮಲ್ಲಿಕಾರ್ಜನ ಜೀನೂರು, ದೊಡ್ಡಬಸವ ಗಡ್ಯಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts