More

    ರೈತರ ಟ್ರ್ಯಾಕ್ಟರ್ ಪರೇಡ್‌ಗೆ ಬೆಂಬಲ

    ಸಿಂಧನೂರು: ಕೇಂದ್ರ ಸರ್ಕಾರ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ಜ.26ರಂದು ನಡೆಸುತ್ತಿರುವ ಟ್ರ್ಯಾಕ್ಟರ್ ಪರೇಡ್, ಬೆಂಗಳೂರಿನಲ್ಲಿ ರಾಜಭವನ ಚಲೋ ಹಾಗೂ ನಗರದಲ್ಲಿ ನಡೆಸಲು ತೀರ್ಮಾಸಿರುವ ಟ್ರ್ಯಾಕ್ಟರ್ ಪರೇಡ್ ಹೋರಾಟದ ಕುರಿತು ಜಾಗೃತಿ ಮೂಡಿಸಲು ಗುಡ್ ಡ್ರೀಮ್ಸ್ ಸಂಸ್ಥೆ ಹಾಗೂ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಜಂಟಿಯಾಗಿ ಶನಿವಾರ ಸೈಕಲ್ ಜಾಥಾ ಆರಂಭಿಸಿತು.

    ಸ್ಥಳೀಯ ಮಹಾತ್ಮಗಾಂಧಿ ವೃತ್ತದಲ್ಲಿ ಸುಭಾಷ್‌ಚಂದ್ರ ಬೋಸ್ ಜನ್ಮ ದಿನ ನಿಮಿತ್ತ ಅವರ ಭಾವಚಿತ್ರಕ್ಕೆ, ಗಾಂಧಿ ಪ್ರತಿಮೆಗೆ ಅಹಿಂದ ಅಧ್ಯಕ್ಷ ಜೆ.ರಾಯಪ್ಪ ವಕೀಲ, ಮನುಜಮತ ಬಳಗದ ಉಪಾಧ್ಯಕ್ಷ ಸೈಯ್ಯದ್ ಅಬ್ದುಲ್ ಖಾದರ್‌ಸುಭಾನಿ ಮಾಲಾರ್ಪಣೆ ಮಾಡಿದರು.

    ಜಾಥಾಕ್ಕೆ ಚಾಲನೆ ನೀಡಿದ ಹೋರಾಟಗಾರ ಡಿ.ಎಚ್.ಕಂಬಳಿ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ರೈತರಿಗಷ್ಟೇ ಅಲ್ಲ, ಜನಸಮೂಹದ ಬದುಕಿಗೆ ಮಾರಕವಾಗಿವೆ. ಈ ಕಾಯ್ದೆಗಳನ್ನು ಕೈಬಿಡುವಂತೆ ಆಗ್ರಹಿಸಿ ದೆಹಲಿಯಲ್ಲಿ ಲಕ್ಷಾಂತರ ರೈತರು ಹೋರಾಡುತ್ತಿದ್ದರೂ ಸಹ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸ್ಪಂದಿಸುತ್ತಿಲ್ಲ. ಬದಲಿಗೆ ಅದಾನಿ, ಅಂಬಾನಿ ಹೇಳಿದಂತೆ ಕುಣಿಯುತ್ತಿದೆ ಎಂದು ಟೀಕಿಸಿದರು.

    ಮುಖಂಡರಾದ ಎಸ್.ದೇವೇಂದ್ರಗೌಡ, ಶಂಕರ ಗುರಿಕಾರ, ಬಸವರಾಜ ಬಾದರ್ಲಿ, ನಾಗರಾಜ್ ಪೂಜಾರ್, ಶಿವಪುತ್ರ ತುರ್ವಿಹಾಳ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಾದ ಗುರುಬಸವ, ಶರಣಬಸವ, ಗುಡ್ ಡ್ರೀಮ್ಸ್ ಸಂಸ್ಥೆ ಅಧ್ಯಕ್ಷ ಚಾಂದಪಾಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts