More

    ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣದ ಆರೋಪಿಗಳ ಬಂಧನ

    ಸಿಂದಗಿ: ಪಟ್ಟಣದ ಐಸಿಐಸಿಐ ಬ್ಯಾಂಕ್ ದರೋಡೆ ಯತ್ನ ಹಾಗೂ ಸೆಕ್ಯೂರಿಟಿ ಗಾರ್ಡ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಸಿಂದಗಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

    ಬ್ಯಾಂಕ್ ಕಾವಲುಗಾರ ರಾಹುಲ್ ರಾಠೋಡ ಅವರನ್ನು 2020 ಆಗಸ್ಟ್ 24ರಂದು ತಡರಾತ್ರಿಯಲ್ಲಿ ಭಾರವಾದ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು. ಅ.5 ರಂದು ಸಿಂದಗಿ ಆಲಮೇಲ ರಸ್ತೆಯಲ್ಲಿನ ಡಾಭಾದಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ಆರೋಪಿಗಳ ಖಚಿತ ಸುಳಿವು ಪಡೆದ ಪೊಲೀಸ್ ತಂಡ, ಸಿಂದಗಿ ತಾಲೂಕಿನ ಬಬಲೇಶ್ವರ ಜೆಸಿಬಿ ಚಾಲಕ ಅನೀಲ ಜಟ್ಟೆಪ್ಪ ಬರಗಾಲ (26)(ಹೊಸಮನಿ-ದೊಡಮನಿ), ಲಕ್ಷ್ಮಣ ಪರಶುರಾಮ ಪೂಜಾರಿ (17) ಹಾಗೂ ದಯಾನಂದ ಸಿದ್ದಪ್ಪ ಹೊಸಮನಿ (21)ಅವರನ್ನು ಠಾಣೆಗೆ ತಂದು ವಿಚಾರಣೆ ನಡೆಸಿದಾಗ ರಾಹುಲ್ ಅವರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸಲಾದ ಬೈಕ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಕಾರ್ಯಾಚರಣೆಯಲ್ಲಿ ಸಿಪಿಐ ಎಚ್.ಎಂ. ಪಾಟೀಲ, ಪಿಎಸ್‌ಐ ಸಂಗೇಶ ಹೊಸಮನಿ, ಮಹಿಳಾ ಪಿಎಸ್‌ಐ ಎ.ಎನ್. ಗುಡ್ಡೋಡಗಿ, ಎಎಸ್‌ಐ ಎಸ್.ಡಿ. ಬಾವಿಕಟ್ಟಿ, ಸಿಬ್ಬಂದಿ ಎಸ್.ಬಿ. ಉಮರಾಣಿ, ಜೆ.ಎಸ್. ಗಲಗಲಿ, ಎಚ್.ಎಸ್. ಬಗಲಿ, ಎಸ್.ಪಿ. ಹುಣಸಿಕಟ್ಟಿ, ಎಸ್.ಎಸ್. ನಾಟೀಕಾರ, ವೈ.ಕೆ. ಉಕುಮನಾಳ, ಚಿದಾನಂದ ತೋಳಮಟ್ಟಿ, ಬಿ.ಜಿ. ಮುಳಸಾವಳಗಿ, ಎಸ್.ಕೆ. ಯಳಸಂಗಿ, ವಿ.ಅರ್. ರಾಠೋಡ, ಎಸ್.ಎಸ್. ಕೊಂಡಿ, ಎ.ಎಂ. ತಳವಾರ, ಎಸ್.ಕೆ. ಗಂಗನಳ್ಳಿ, ಎಸ್.ಬಿ. ಹಿರೇಮಠ, ಪಿ.ಕೆ. ನಾಗರಾಳ ಪಾಲ್ಗೊಂಡಿದ್ದರು.

    ಪ್ರಕರಣದ ತನಿಖೆ ಪೂರ್ಣಗೊಳಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿದ ಸಿಂದಗಿ ಪೊಲೀಸರ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಶ್ಲಾಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts